ಹೊಸದಿಲ್ಲಿ: ಜಗತ್ತಿನ ಮೂರನೇ ಅತ್ಯಂತ ದೊಡ್ಡ ಅರ್ಥ ವ್ಯವಸ್ಥೆಯಾಗುವತ್ತ ಭಾರತ ದಾಪುಗಾಲು ಇಡುತ್ತಿದೆ. 2027ರ ಹೊತ್ತಿಗೆ ಈ ಸಾಧನೆ ಪೂರ್ಣವಾಗಲಿದೆ ಎಂದು ಪ್ರಮುಖ ವಿತ್ತೀಯ ಸಲಹಾ ಸಂಸ್ಥೆ ಮೋರ್ಗನ್ ಸ್ಟ್ಯಾನ್ಲಿ ತನ್ನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.
ಗಮನಾರ್ಹ ಅಂಶವೆಂದರೆ ಜಪಾನ್ ಮತ್ತು ಜರ್ಮನಿ ಯನ್ನು ಮೀರಿಸಿ ಭಾರತ ಸಾಧನೆ ಮಾಡಲಿದೆ ಎಂದು ಸ್ಪಷ್ಟವಾಗಿ ಪ್ರತಿಪಾದಿಸಿದೆ. ಮತ್ತೊಂದು ಪ್ರಧಾನವಾಗಿರುವ ವಿಚಾರವೆಂದರೆ 2030ರ ವೇಳೆಗೆ ದೇಶದ ಷೇರು ಮಾರು ಕಟ್ಟೆ ಜಗತ್ತಿನ ಮೂರನೇ ಅತ್ಯಂತ ದೊಡ್ಡ ದಾಗಿ ಮಾರ್ಪಾಡಾಗಲಿದೆ ಎಂದೂ ವರದಿಯಲ್ಲಿ ಮುನ್ಸೂ ಚನೆ ನೀಡಲಾಗಿದೆ.
ಇಂಧನ, ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದ ಬಂಡವಾಳ ಹೂಡಿಕೆ ಮಾಡ ಲಾಗಿದೆ ಎಂದು ಮೋರ್ಗನ್ ಸ್ಟ್ಯಾನ್ಲಿ ಹೇಳಿದೆ.
ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಅಭಿವೃದ್ಧಿ ಸಾಧಿಸುತ್ತಿರುವ ಅರ್ಥ ವ್ಯವಸ್ಥೆ ಎಂಬ ಹೆಗ್ಗಳಿಕೆ ದೇಶಕ್ಕೆ ಇದೆ. ಒಂದು ದಶಕದ ಅವಧಿಯಲ್ಲಿ ಸರಾಸರಿಯಾಗಿ ಶೇ.5.5 ಒಟ್ಟು ದೇಶೀಯ ಉತ್ಪಾದನೆ (ಜಿಡಿಪಿ) ಕಾಯ್ದುಕೊಂಡು ಬರಲಾಗುತ್ತಿದೆ. ಸೇವೆಗಳ ಹೊರಗುತ್ತಿಗೆ, ಡಿಜಿಟಲ್ ಮಾಧ್ಯ ಮಗಳಲ್ಲಿ ಸೇವೆಗಳು, ಸಾಂಪ್ರದಾ ಯಿಕ ಇಂಧನ ಮೂಲಗಳ ಬದಲಾಗಿ, ಪವನ ಶಕ್ತಿ, ಸೂರ್ಯನ ಬೆಳಕು ಸೇರಿದಂತೆ ಹೊಸ ರೀತಿಯ ಇಂಧನ ಮೂಲಗಳನ್ನು ಭಾರತ ಹೊಂದು ವಲ್ಲಿ ಪ್ರಯತ್ನ ಮಾಡುತ್ತಿದೆ ಎಂದು ವರದಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.
2031ರ ವೇಳೆಗೆ ದೇಶದ ಜಿಡಿಪಿ ಮೌಲ್ಯ ಹಾಲಿ 3.5 ಟ್ರಿಲಿ ಯನ್ ಡಾಲರ್‌ಗಳಿಂದ 7.1 ಟ್ರಿಲಿಯನ್ ಡಾಲರ್‌ಗಳಿಗೆ ಏರಿಕೆಯಾಗಲಿದೆ. ಜಗತ್ತಿನ ರಫ್ತು ಕ್ಷೇತ್ರದಲ್ಲಿಯೂ ದಾಖಲೆಯ ಪ್ರಗತಿ ಯಾ ಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಹೂಡಿಕೆ ಹೆಚ್ಚಳ: ಬಹುರಾಷ್ಟ್ರೀಯ ಕಂಪೆನಿ ಗಳು ಭಾರತದಲ್ಲಿ ಹೂಡಿಕೆ ಮಾಡಲಿರುವ ಪ್ರಮಾಣವೂ ಸದ್ಯದ ಶೇ.15.6ರಿಂದ 2031ರ ವೇಳೆಗೆ ಶೇ.21ಕ್ಕೆ ಏರಿಕೆ ಆಗಲಿದೆ. ಭಾರತದಲ್ಲಿ ಆದಾಯ ವರ್ಗೀಕರಣ ಕೂಡ ಮುಂದಿನ ದಿನಗಳಲ್ಲಿ ಬದಲಾವಣೆ ಕಾಣಲಿದೆ. ಸದ್ಯ ದೇಶದಲ್ಲಿ ಜನರು 2 ಟ್ರಿಲಿಯನ್ ಡಾಲರ್ ಮೊತ್ತ ಖರ್ಚು ಮಾಡುತ್ತಿದ್ದಾರೆ. ಅದು ಈ ದಶಕದ ಅಂತ್ಯಕ್ಕೆ 4.9 ಟ್ರಿಲಿಯನ್ ಪ್ರಮಾಣಕ್ಕೆ ಏರಿಕೆಯಾಗಲಿದೆ ಎಂದು ವರದಿಯಲ್ಲಿ ನಿರೀಕ್ಷಿಸಲಾಗಿದೆ.