ಹೊಸದಿಲ್ಲಿ: ಆಂತರಿಕ ಸಂಘರ್ಷದಿಂದ ತತ್ತರಿಸಿ ರುವ ಅಫ್ಘಾನಿಸ್ಥಾನಕ್ಕೆ ಪಾಕಿಸ್ಥಾನದ ಮೂಲಕ ಭಾರತ 2,500 ಟನ್ ಗೋಧಿಯನ್ನು ಕಳುಹಿಸಿ ಕೊಟ್ಟಿದೆ.
ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ್ ಶೃಂಗ್ಲಾ ಮತ್ತು ಭಾರತದಲ್ಲಿ ಅಫ್ಘಾನಿ ಸ್ಥಾನದ ರಾಯ ಭಾರಿ ಫರೀದ್ ಮಮಾªಜೆ ಅವರು ಅಟ್ಟಾರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ 50 ಟ್ರಕ್‌ಗಳ ಮೂಲಕ 2,500 ಟನ್ ಗೋಧಿಯನ್ನು ಕಳುಹಿಸಿಕೊಟ್ಟಿದ್ದಾರೆ.
ಕಳೆದ ವರ್ಷದ ಅ.7ರಂದು ಕೇಂದ್ರ ಪಾಕಿಸ್ಥಾನದ ಮೂಲಕ 50 ಸಾವಿರ ಟನ್ ಗೋಧಿಯನ್ನು ಪಾಕಿಸ್ಥಾನದ ಮೂಲಕ ಕಳುಹಿಸುವ ಬಗ್ಗೆ ಪ್ರಸ್ತಾವನೆ ಕಳುಹಿಸಿತ್ತು. 2021 ನ.24ರಂದು ಪಾಕಿಸ್ಥಾನದ ವತಿಯಿಂದಲೂ ಸಕಾರಾತ್ಮಕ ಪ್ರಕಿಕ್ರಿಯೆ ವ್ಯಕ್ತವಾಗಿತ್ತು.
ಕಳೆದ ವರ್ಷದ ಆಗಸ್ಟ್‌ನಲ್ಲಿ ಅಫ್ಘಾನಿ ಸ್ಥಾನವನ್ನು ತಾಲಿಬಾನ್ ಉಗ್ರರು ವಶಪಡಿಸಿಕೊಂಡ ಬಳಿಕ ಅಲ್ಲಿ ಭಾರೀ ಪ್ರಮಾಣದಲ್ಲಿ ಆಹಾರ ಕೊರತೆ ಉಂಟಾಗಿದೆ.