Advertisement

ದೇಶದಲ್ಲಿ ಮತ್ತೆ ಹೆಚ್ಚಿದ ಕೋವಿಡ್ 19 ಹೊಸ ಪ್ರಕರಣಗಳ ಸಂಖ್ಯೆ!

11:01 AM Nov 28, 2021 | Team Udayavani |

ಹೊಸದಿಲ್ಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 8,774 ಹೊಸ ಕೋವಿಡ್ 19 ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಶನಿವಾರದ ವರದಿಗಿಂತ ಶೇ.5.5ರಷ್ಟು ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Advertisement

ಇದರೊಂದಿಗೆ ದೇಶದಲ್ಲಿ ಇದುವರೆಗೆ ಪತ್ತೆಯಾದ ಒಟ್ಟು ಸೋಂಕಿತರ ಸಂಖ್ಯೆ 3,45,72,523 ಗೆ ಏರಿಕೆಯಾಗಿದೆ. ಇವರಲ್ಲಿ ಇದುವರೆಗೆ 3,39,98,278 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆ ಅವಧಿಯಲ್ಲಿ 9,481 ಮಂದಿ ಸೋಂಕಿತರು ಸೋಂಕಿನಿಂದ ಗುಣಮುಖ ಹೊಂದಿದ್ದಾರೆ. ಸದ್ಯ ದೇಶದ ರಿಕವರಿ ರೇಟ್ 98.34 ಇದೆ.

ಹೆಚ್ಚು ಸೋಂಕು ಪತ್ತೆಯಲ್ಲಿ ಕೇರಳ ಮತ್ತೆ ಮೊದಲ ಸ್ಥಾನದಲ್ಲಿದೆ. ಕೇರಳದಲ್ಲಿ ಕಳೆದ 24 ಗಂಟೆಯಲ್ಲಿ 4,741 ಸೋಂಕು ಪ್ರಕರಣಗಳು ಪತ್ತೆಯಾಗಿದ್ದರೆ, ತಮಿಳುನಾಡು ರಾಜ್ಯದಲ್ಲಿ 740, ಪಶ್ಚಿಮ ಬಂಗಾಳದಲ್ಲಿ 701 ಪ್ರಕರಣಗಳು, ಮಹಾರಾಷ್ಟ್ರದಲ್ಲಿ 507 ಪ್ರಕರಣಗಳು ಮತ್ತು ಮಿಜೋರಾಂ ರಾಜ್ಯದಲ್ಲಿ 358 ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗಿದೆ.

ಇದನ್ನೂ ಓದಿ:ಹಿಂದೂಗಳು ಹಿಂದೂಗಳಾಗಿ ಉಳಿಯಲು ‘ಅಖಂಡ’ ರಾಷ್ಟ್ರ ಮಾಡಬೇಕು: ಭಾಗವತ್

ಈ ಐದು ರಾಜ್ಯಗಳಲ್ಲೇ ದೇಶದ ಶೇ.80.31 ರಷ್ಟು ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿದೆ. ಅದರಲ್ಲೂ ಕೇರಳ ರಾಜ್ಯವೊಂದೇ ಶೇ 54.03 ಸೋಂಕು ಪ್ರಕರಣಗಳಿಗೆ ಕಾರಣವಾಗಿದೆ.

Advertisement

ಒಮಿಕ್ರಾನ್‌ ತಡೆಗೆ ಭಾರೀ ಕಟ್ಟೆಚ್ಚರ: ಕೊರೊನಾ ವೈರಾಣುವಿನ ಹೊಸ ರೂಪಾಂತರಿ ಯಾದ ಒಮಿಕ್ರಾನ್‌, ಅತ್ಯಂತ ಆತಂಕಕಾರಿ ರೂಪಾಂತರಿ ಪಟ್ಟ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್‌ ಒ) ಘೋಷಿಸಿರುವ ಹಿನ್ನೆಲೆಯಲ್ಲಿ, ಆ ರೂಪಾಂತರಿ ಭಾರತವನ್ನು ಪ್ರವೇಶಿಸದಂತೆ ತಡೆಯಲು ಭಾರತದಾದ್ಯಂತ ಕಟ್ಟುನಿಟ್ಟಿನ ಕ್ರಮಗಳು ಜಾರಿಯಾಗಿವೆ.

ವಿದೇಶಿಗರು ಭಾರತಕ್ಕೆ ಬರುವ ಪ್ರವೇಶ ಮಾರ್ಗಗಳಾದ (ಎಂಟ್ರಿ ಪಾಯಿಂಟ್‌) ವಿಮಾನ ನಿಲ್ದಾಣಗಳು, ಬಂದರುಗಳು ಮುಂತಾದೆಡೆ ಕಟ್ಟುನಿಟ್ಟಿನ ತಪಾಸಣೆ ನಡೆಸಲು ಕೇಂದ್ರ ಸರಕಾರ ಆದೇಶಿಸಿದೆ. ಜತೆಗೆ ಎಲ್ಲ ರಾಜ್ಯಗಳಲ್ಲಿ ಇತ್ತೀಚೆಗೆ ಕಾರಣಾಂತರಗಳಿಂದ ಆಗಮಿ ಸಿರುವ ವಿದೇಶಿಗರನ್ನು ತಪಾಸಣೆಗೊಳಪಡಿಸುವಂತೆ, ಎಲ್ಲೆಡೆ ವೈಯಕ್ತಿಕ ಅಂತರ, ಮಾಸ್ಕ್ ಕಡ್ಡಾಯದಂಥ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next