Advertisement

ಕಳೆದೆರಡು ತಿಂಗಳಲ್ಲಿ 45,000 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆ : ಕೇಂದ್ರ

01:53 PM Jul 22, 2021 | |

ನವ ದೆಹಲಿ : ಕಳೆದ ಎರಡು ತಿಂಗಳುಗಳ ಅವಧಿಯಲ್ಲಿ ದೇಶದಲ್ಲಿ 45,000 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

Advertisement

ಕೇಂದ್ರ ಆರೋಗ್ಯ ಸಹಾಯಕ ಸಚಿವರಾದ ಭಾರತಿ ಪ್ರವೀಣ್ ಪವಾರ್, ದೇಶದಾದ್ಯಂತ ಸುಮಾರು 4, 200 ಮಂದಿ ಬ್ಲ್ಯಾಂಕ್ ಫಂಗಸ್ ನಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಭಾರತ ರತ್ನ ಪ್ರಶಸ್ತಿ ತನ್ನ ತಂದೆಯ ಕಾಲ್ಬೆರಳಿಗೆ ಸಮ: ಬಿಲ್ಡಪ್ ಬಾಲಯ್ಯನ ಹೊಸ ವಿವಾದ

ಈ ಸೋಂಕನ್ನು ಹಿಂದೆ  ಬಹಳ ಅಪರೂಪವೆಂದು ಪರಿಗಣಿಸಲಾಗಿತ್ತು ಆದರೆ ಸಾಂಕ್ರಾಮಿಕ ಸಮಯದಲ್ಲಿ ಪ್ರಕರಣಗಳು, ಸಾಮಾನ್ಯವಾಗಿ ಕೋವಿಡ್ 19 ನಿಂದ ಚೇತರಿಸಿಕೊಂಡ ನಂತರ ಕಾಣಿಸಿಕೊಳ್ಳುತ್ತಿತ್ತು.

ಸರ್ಕಾರದ ದಾಖಲೆಗಳ ಪ್ರಕಾರ, ಮಹಾರಾಷ್ಟ್ರದಲ್ಲಿ 9,348 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿವೆ.

Advertisement

ಸಾಂಕ್ರಾಮಿಕ ರೋಗಕ್ಕೆ ಮುಂಚಿತವಾಗಿ ಭಾರತವು ವರ್ಷಕ್ಕೆ ಸರಾಸರಿ 20 ಪ್ರಕರಣಗಳು ಪತ್ತೆಯಾಗುತ್ತಿವೆ. ಕೋವಿಡ್ 19 ಗೆ ಚಿಕಿತ್ಸೆ ನೀಡಲು ಸ್ಟೀರಾಯ್ಡ್‌ ಗಳ ಅತಿಯಾದ ಬಳಕೆಯು ಇತ್ತೀಚಿಗೆ ಸೋಂಕಿನ ಸಂಖ್ಯೆ ಏರಿಕೆಗೆ ಕಾರಣವಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ : ಒಲಿಂಪಿಕ್ಸ್ ನಲ್ಲೂ ಹೊಸ ತಂತ್ರಜ್ಞಾನ ಅಳವಡಿಸಲಿರುವ ಜಪಾನ್ ಏನೆಲ್ಲಾ ವಿಶೇಷತೆಗಳಿವೆ..?  

Advertisement

Udayavani is now on Telegram. Click here to join our channel and stay updated with the latest news.

Next