Advertisement

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 34,403 ಕೋವಿಡ್ ಪ್ರಕರಣ ಪತ್ತೆ, 37,950 ಮಂದಿ ಗುಣಮುಖ

11:27 AM Sep 17, 2021 | Team Udayavani |

ನವದೆಹಲಿ:ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 34,403 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ದೇಶದಲ್ಲಿನ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 3,33,81,728ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ (ಸೆಪ್ಟೆಂಬರ್ 17) ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ.

Advertisement

ಇದನ್ನೂ ಓದಿ:ಕಟೌಟ್‌ಗೆ ಹಾರ, ಅಭಿಮಾನಿಗಳ ಜೈಕಾರ ಯಾವಾಗ? ಸ್ಟಾರ್ ಕಣ್ಣಲ್ಲಿ ಬಿಗ್‌ಸ್ಕ್ರೀನ್‌ ಡ್ರೀಮ್‌!

ಕಳೆದ 24ಗಂಟೆಗಳಲ್ಲಿ ದಾಖಲೆಯ 37,950 ಮಂದಿ ಚೇತರಿಸಿಕೊಂಡಿದ್ದು, ಈವರೆಗೆ ದೇಶದಲ್ಲಿ 3,25,98,424 ಮಂದಿ ಗುಣಮುಖರಾಗಿದ್ದಾರೆ. ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 3,39,056ಕ್ಕೆ ತಲುಪಿದೆ. ಕಳೆದ 24ಗಂಟೆಗಳ ಅವಧಿಯಲ್ಲಿ 3,867 ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ.

ಚೇತರಿಕೆ ಪ್ರಮಾಣ ಶೇ.97.65ರಷ್ಟಿದ್ದು, ವಾರದ ಪಾಸಿಟಿವಿಟಿ ದರ ಶೇ.1.97ರಷ್ಟಿದ್ದು, ಕಳೆದ 84 ದಿನಗಳ ಬಳಿಕದ ಅತೀ ಕಡಿಮೆ ಪ್ರಮಾಣಕ್ಕೆ ಇಳಿಕೆಯಾದಂತಾಗಿದೆ. ಭಾರತದಾದ್ಯಂತ ಈವರೆಗೆ 76,57,17,137 ಕೋಟಿ ಕೋವಿಡ್ ಡೋಸ್ ಗಳನ್ನು ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next