ಹೊಸದಿಲ್ಲಿ: ದೇಶದಲ್ಲಿ ಶನಿವಾರ 10,853 ಹೊಸ ಕೋವಿಡ್ 19 ಸೋಂಕು ಪ್ರಕರಣಗಳು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ವರದಿ ನೀಡಿದೆ.
ಈ ಹೊಸ ಪ್ರಕರಣಗಳೊಂದಿಗೆ ದೇಶದ ಒಟ್ಟು ಕೋವಿಡ್ 19 ಸೋಂಕಿತರ ಸಂಖ್ಯೆ 3,43,55,536ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ ದೇಶದಲ್ಲಿ 526 ಮಂದಿ ಕೋವಿಡ್ 19 ಸೋಂಕಿತರು ಅಸುನೀಗಿದ್ದಾರೆ. ಇದುವರೆಗೆ ಸಾವನ್ನಪ್ಪಿದ ಕೋವಿಡ್ ಸೋಂಕಿತರ ಸಂಖ್ಯೆ 4,60,731ಕ್ಕೆ ಏರಿಕೆಯಾಗಿದೆ. ಕೇರಳದಲ್ಲೇ ಅತೀ ಹೆಚ್ಚು ಅಂದರೆ 467 ಮಂದಿ ಸೋಂಕಿತರು ಅಸುನೀಗಿದ್ದಾರೆ.
ಇದನ್ನೂ ಓದಿ:ಆರ್ಯನ್ ಖಾನ್ ಬಂಧನದ ಹಿಂದೆ ಬಿಜೆಪಿ ನಾಯಕನ ಕೈವಾಡ, ಇದು ಸುಲಿಗೆ ಪ್ರಕರಣ: ನವಾಬ್ ಮಲಿಕ್
ದೇಶದ ಐದು ರಾಜ್ಯಗಳಲ್ಲಿ ಹೆಚ್ಚಿನ ಸೋಂಕಿತರು ಕಂಡು ಬರುತ್ತಿದ್ದಾರೆ. ಮೊದಲ ಸ್ಥಾನದಲ್ಲಿರುವ ಕೇರಳದಲ್ಲಿ 6,546 ಮಂದಿ ಸೋಂಕಿತರು, ತಮಿಳುನಾಡಿನಲ್ಲಿ 862 ಮಂದಿ, ಪಶ್ಚಿನ ಬಂಗಾಳದಲ್ಲಿ 670 ಮಂದಿ, ಮಹಾರಾಷ್ಟ್ರದಲ್ಲಿ 661 ಮಂದಿ ಮತ್ತು ಮಿಜೋರಾಂ ರಾಜ್ಯದಲ್ಲಿ 453 ಮಂದಿ ಸೋಂಕಿತರು ಕಳೆದ 24 ಗಂಟೆಯಲ್ಲಿ ಪತ್ತೆಯಾಗಿದೆ.
ದೇಶದ ಒಟ್ಟು ಹೊಸ ಪ್ರಕರಣಗಳಲ್ಲಿ ಶೇ 84.69 ರಷ್ಟು ಈ ಐದು ರಾಜ್ಯಗಳಲ್ಲೇ ಪತ್ತೆಯಾಗುತ್ತಿದೆ. ಅದರಲ್ಲೂ ಕೇರಳ ರಾಜ್ಯವೊಂದರಲ್ಲೇ ಶೇ 60.32 ಪ್ರಕರಣಗಳು ವರದಿಯಾಗಿದೆ.