Advertisement

“ರಿಲಯನ್ಸ್‌ ಡಿಫೆನ್ಸ್‌’ಮಾತ್ರ ಆಯ್ಕೆ ಇದ್ದದ್ದು

06:00 AM Sep 22, 2018 | |

ಹೊಸದಿಲ್ಲಿ: ರಫೇಲ್‌ ಯುದ್ಧ ವಿಮಾನ ಬಗ್ಗೆ ಉದ್ಯಮಿ ಅನಿಲ್‌ ಅಂಬಾನಿ ಒಡೆತನದ “ರಿಲಯನ್ಸ್‌ ಡಿಫೆನ್ಸ್‌’ ಸಂಸ್ಥೆಯನ್ನು ಮಾತ್ರ ಭಾರತ ಸರಕಾರ ಸೂಚಿಸಿತ್ತು. ಬೇರೆ ಯಾವುದೇ ಸಂಸ್ಥೆಯ ವಿವರವನ್ನೂ ನೀಡಲಾಗಿರಲಿಲ್ಲ ಎಂದು ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಫ್ರಾನ್‌ಸ್ವ ಒಲಾಂದ್‌ ಹೇಳಿದ್ದಾರೆ. ಫ್ರೆಂಚ್‌ ನಿಯತಕಾಲಿಕ “ಮೀಡಿಯಾ ಪಾರ್ಟ್‌ ‘ಗೆ ನೀಡಿದ ಸಂದರ್ಶನದಲ್ಲಿ ಒಲಾಂದ್‌ ಈ ವಿವರಣೆ ನೀಡಿದ್ದಾರೆ. ಭಾರತ ಸರಕಾರ ಸೂಚಿಸಿದಂತೆ ಡಸ್ಸಾಲ್ಟ್ ಏವಿಯೇಷನ್‌ ಮಾತುಕತೆ ನಡೆಸಿತ್ತು ಎಂದಿದ್ದಾರೆ.

Advertisement

ಈ ಬಗ್ಗೆ ಪ್ರತಿಕ್ರಿಯೆ ನೀಡಿ ಟ್ವೀಟ್‌ ಮಾಡಿರುವ ರಕ್ಷಣಾ ಇಲಾಖೆ ವಕ್ತಾರರು, “ಫ್ರಾನ್ಸ್‌ನ ಮಾಜಿ ಅಧ್ಯಕ್ಷರು ನೀಡಿದ ಮಾಹಿತಿ ಪರಿಶೀಲಿಸ ಲಾಗುತ್ತಿದೆ’ ಎಂದು ಬರೆದುಕೊಂಡಿದ್ದಾರೆ.  ತಕ್ಷಣವೇ ಅದಕ್ಕೆ ಟ್ವೀಟ್‌ ಮೂಲಕ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್‌ ನಾಯಕ ಮನೀಶ್‌ ತಿವಾರಿ, “2012ರಲ್ಲಿ ಪ್ರತಿ ರಫೇಲ್‌ ಯುದ್ಧ ವಿಮಾನದ ಬೆಲೆ 560 ಕೋಟಿ ರೂ. ಇದ್ದದ್ದು 2015ರಲ್ಲಿ 1,690 ಕೋಟಿ ರೂ.ಗೆ ಹೇಗೆ ಏರಿಕೆಯಾಯಿತು ಎಂಬ ಬಗ್ಗೆ ಫ್ರಾನ್ಸ್‌  ಮಾಜಿ ಅಧ್ಯಕ್ಷರೇ ನಮಗೆ ವಿವರಿಸಬೇಕಷ್ಟೆ. ಕೇವಲ 1,100 ಕೋಟಿ ರೂ. ಏರಿಕೆ? ಯೂರೋ ಕರೆನ್ಸಿಗೆ ರೂಪಾ ಯಿ ಲೆಕ್ಕಾಚಾರದ ಸಮಸ್ಯೆ ಉಂಟಾಗಿರಲಿ ಕ್ಕಿಲ್ಲವೇನೋ?’ ಎಂದು ಬರೆದುಕೊಂಡಿದ್ದಾರೆ.

ಪ್ರಧಾನಿಯಿಂದಲೇ ಬದಲು: ಫ್ರಾನ್ಸ್‌ ಮಾಜಿ ಅಧ್ಯಕ್ಷರ ಸ್ಪಷ್ಟನೆ ಬಳಿಕ ಟ್ವೀಟ್‌ ಮಾಡಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ “ಮೋದಿಯವರೇ ಖುದ್ದಾಗಿ ಒಪ್ಪಂದದಲ್ಲಿ ಬದಲಾವಣೆ ಮಾಡಿದ್ದಾರೆ. ಈ ಬಗ್ಗೆ ಅವರು ರಹಸ್ಯ ಮಾತುಕತೆ ನಡೆಸಿದ್ದಾರೆ. ದಿವಾಳಿ ಹೊಂದಿದ ಅನಿಲ್‌ ಅಂಬಾನಿಗೆ ಒಪ್ಪಂದವನ್ನು ಅವರೇ ಖುದ್ದಾಗಿ ಹಸ್ತಾಂತರಿಸಿದ್ದಾರೆ ಎಂದು ಮಾಹಿತಿ ಕೊಟ್ಟಿರುವ ಫ್ರಾನ್ಸ್‌ ಮಾಜಿ ಅಧ್ಯಕ್ಷರಿಗೆ ಧನ್ಯವಾದ. ಪ್ರಧಾನಿ ದೇಶಕ್ಕೆ ಮೋಸ ಮಾಡಿದ್ದಾರೆ. ಜತೆಗೆ ಸೈನಿಕರಿಗೆ ಅವಮಾನ ಮಾಡಿದ್ದಾರೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next