Advertisement

ಇರಾನ್‌ ತೈಲ ಬಳಕೆಗೆ ಮಿತಿ

06:00 AM Jun 29, 2018 | |

ವಾಷಿಂಗ್ಟನ್‌/ಹೊಸದಿಲ್ಲಿ: ಇರಾನ್‌ನಿಂದ ಭಾರೀ ಪ್ರಮಾಣದಲ್ಲಿ ಕಚ್ಚಾ ತೈಲ ಆಮದು ತಗ್ಗಿಸಲು ಭಾರತ ಸರಕಾರ ನಿರ್ಧರಿಸಿದೆ. ಇರಾನ್‌ ತೈಲ ಆಮದು ಸ್ಥಗಿತಗೊಳಿಸಲು ಅಮೆರಿಕ ನ.4ರ ಗಡುವು ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

Advertisement

ಯುರೇನಿಯಂ ಅಭಿವೃದ್ಧಿ ಆರೋಪಗಳ ಹಿನ್ನೆಲೆಯಲ್ಲಿ ಇರಾನ್‌ ಮೇಲೆ ಆರ್ಥಿಕ ನಿಷೇಧ ಹೇರಲು ಅಮೆರಿಕ ನಿರ್ಧರಿಸಿದ್ದ ಹಿನ್ನೆಲೆಯಲ್ಲಿ ಭಾರತ, ಚೀನಕ್ಕೆ ನ.4ರ ಒಳಗಾಗಿ ತೈಲ ಆಮದು ಪ್ರಮಾಣ ತಗ್ಗಿಸಬೇಕೆಂದು ಬುಧವಾರ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಚ್ಚರಿಕೆ ನೀಡಿದ್ದರು. ಅದಕ್ಕೆ ಪೂರಕವಾಗಿ ಹೊಸದಿಲ್ಲಿಯಲ್ಲಿ ಗುರುವಾರ ಸಭೆ ನಡೆಸಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾ ಲಯದ ಹಿರಿಯ ಅಧಿಕಾರಿಗಳು, “ಕುವೈತ್‌ ಮತ್ತು ಸೌದಿ ಅರೇಬಿಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಆಮದು ಮಾಡಿಕೊಳ್ಳಬೇಕು. ಇರಾನ್‌ನಿಂದ ಖರೀದಿ ಪ್ರಮಾಣ ತಗ್ಗಿಸಬೇಕು’ ಎಂದು ಸರಕಾರಿ ಸ್ವಾಮ್ಯದ ಮತ್ತು ಖಾಸಗಿ ಸ್ವಾಮ್ಯದ ತೈಲ ಕಂಪೆನಿಗಳು, ರಿಫೈನರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌, ಮಂಗಳೂರು ರಿಫೈನರೀಸ್‌ ಮತ್ತು ಪೆಟ್ರೋಕೆಮಿಕಲ್ಸ್‌ (ಎಂಆರ್‌ಪಿಎಲ್‌) ರಷ್ಯಾದ ತೈಲ ಕಂಪನಿ ರೋಸ್ನೆಫ್ಟ್ ಪ್ರವರ್ತಿತ ಭಾರತ ಮೂಲದ ತೈಲ ಸಂಸ್ಥೆ ನಯರಾ ಎನರ್ಜಿ ಇರಾನ್‌ನಿಂದ ಕಚ್ಚಾ ತೈಲ ಆಮದು ಪ್ರಮಾಣ ತಗ್ಗಿಸಲು ಮುಂದಾಗಿವೆ.

ಅಗತ್ಯ ಕ್ರಮ:  ಇದೇ ವೇಳೆ ಇರಾನ್‌ನಿಂದ ಕಚ್ಚಾ ತೈಲ ಆಮದು ಪ್ರಮಾಣ ಕಡಿತಗೊಳಿಸುವ ಬಗ್ಗೆ ಅಮೆರಿಕದ ಕಟ್ಟಪ್ಪಣೆ ಕುರಿತು ಪ್ರತಿಕ್ರಿಯೆ ನೀಡಿದ ವಿದೇಶಾಂಗ ಇಲಾಖೆ ವಕ್ತಾರ ರವೀಶ್‌ ಕುಮಾರ್‌, “ದೇಶದ ತೈಲೋತ್ಪನ್ನಗಳು ಮತ್ತು ಇಂಧನ ಸುರಕ್ಷತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಅಮೆರಿಕ ಸರಕಾರ ನ.4ರ ಒಳಗಾಗಿ ಇರಾನ್‌ನಿಂದ ಕಚ್ಚಾ ತೈಲ ಖರೀದಿ ಸಂಪೂರ್ಣ ನಿಲ್ಲಿಸಬೇಕು ಎಂದು ಮಾತ್ರ ಹೇಳಿತ್ತು. ಸಂಬಂಧ ಕಡಿತಗೊಳಿಸುವ ಬಗ್ಗೆ ಸೂಚಿಸಿರಲಿಲ್ಲ’ ಎಂದಿದ್ದಾರೆ. ಈ ಬಗ್ಗೆ ಎಲ್ಲರ ಜತೆಯೂ ಮಾತುಕತೆ ನಡೆಸುತ್ತೇವೆ ಎಂದೂ ಹೇಳಿದ್ದಾರೆ. 

ರಾಷ್ಟ್ರೀಯ ಹಿತಾಸಕ್ತಿ ಮುಖ್ಯ: ಅಮೆರಿಕದ ಎಚ್ಚರಿಕೆಗೆ ಪ್ರತಿಕ್ರಿಯೆ ನೀಡಿದ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌, ರಾಷ್ಟ್ರೀಯ ಹಿತಾಸಕ್ತಿ ಗಮನದಲ್ಲಿರಿಸಿಕೊಂಡು ಕೇಂದ್ರ ಸರಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ. ಇರಾನ್‌ನಿಂದ ತೈಲ ಆಮದು ಪ್ರಮಾಣ ಮೇ ನಲ್ಲಿ ಪ್ರತಿ ದಿನ 7.05 ಲಕ್ಷ ಬ್ಯಾರೆಲ್‌ಗೆ ಏರಿಕೆಯಾಗಿತ್ತು. 

Advertisement

ದಿನಾಂಕ ಶೀಘ್ರ ಮರುನಿಗದಿ
ಅಮೆರಿಕ- ಭಾರತ ನಡುವಿನ ವಿದೇಶಾಂಗ ಮತ್ತು ರಕ್ಷಣಾ ಖಾತೆ ಸಚಿವರ ನಡುವಿನ 2+2 ಮಾತುಕತೆ ಬಗ್ಗೆ ಶೀಘ್ರ ದಿನಾಂಕ ಮರು ನಿಗದಿಮಾಡುವ ಬಗ್ಗೆ  ಅಮೆರಿಕ ವಿದೇಶಾಂಗ ಸಚಿವ ಮೈಕ್‌ ಪೊಪೊÂà ಅವರು ಸಚಿವೆ ಸುಷ್ಮಾ ಸ್ವರಾಜ್‌ ಜತೆ ಫೋನ್‌ನಲ್ಲಿ ಮಾತುಕತೆ ನಡೆಸಿದ್ದಾರೆ. ಈ ನಡುವೆ ವಾಷಿಂಗ್ಟನ್‌ನಲ್ಲಿ ಮಾತನಾಡಿದ ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರ, ಮುಂದೂಡಿಕೆಗೆ ಕಾರಣ ನೀಡಿಲ್ಲ. ಈ ಬಗ್ಗೆ 2 ದೇಶಗಳ ಸಚಿವರು ಮಾತನಾಡಿಕೊಂಡಿದ್ದಾರೆ ಎಂದಷ್ಟೇ ಹೇಳಿದ್ದಾರೆ. ಅಮೆರಿಕದ ಹಲವು ತಜ್ಞರೂ ಸಭೆ ಮುಂದೂಡಿಕೆಯಾದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ನಡುವಿನ ಮಾತುಕತೆ ಹಿನ್ನೆಲೆಯಲ್ಲಿ ಸಭೆ ಮುಂದೂಡಿಕೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಪ್ರಧಾನಿಗೆ ಕಾರಣ ಗೊತ್ತು
ಮುಂದಿನ ವಾರ ಅಮೆರಿಕದಲ್ಲಿ ನಡೆಯಬೇಕಾಗಿದ್ದ ಅಮೆರಿಕ-ಭಾರತ ಮಾತುಕತೆ ರದ್ದಾಗಿರುವುದಕ್ಕೆ ಕಾರಣ ಪ್ರಧಾನಿ ಮೋದಿಗೆ ಗೊತ್ತು ಎಂದು ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿ ನಿಕ್ಕಿ ಹ್ಯಾಲೆ ಹೇಳಿದ್ದಾರೆ. “ಎನ್‌ಡಿಟಿವಿ’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರಿಗೆ ಗೊತ್ತಿರುವ ವಿಚಾರ ಶೀಘ್ರದಲ್ಲಿಯೇ ಜಗತ್ತಿಗೇ ಗೊತ್ತಾಗಲಿದೆ ಎಂದಿದ್ದಾರೆ. “ಇಂಥ ಘಟನೆಗಳು ನಡೆಯುತ್ತವೆ. ಇದರ ಹೊರತಾಗಿಯೂ ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯ ಈ ಹಿಂದೆ ಸದೃಢವಾಗಿರಲಿಲ್ಲ ಎನ್ನುವುದು ನನ್ನ ಭಾವನೆ. ಭಾರತದ ಅಭಿಪ್ರಾಯವೂ ಇದೇ ಆಗಿದೆ ಎಂದುಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next