Advertisement

ಭಾರತೀಯ ಅಂಚೆಯಲ್ಲಿ 2000ಕ್ಕೂ ಅಧಿಕ ಖಾಲಿ ಹುದ್ದೆಗಳು.!

11:36 AM Jul 22, 2021 | Team Udayavani |

ನವ ದೆಹಲಿ : ಜಿಡಿಎಸ್ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಇಂಡಿಯಾ ಪೋಸ್ಟ್ ಅರ್ಜಿಗಳನ್ನು ಆಹ್ವಾನ ಮಾಡಿದೆ.

Advertisement

ಪಶ್ಚಿಮ ಬಂಗಾಳದ ಅಂಚೆ ವೃತ್ತದಲ್ಲಿ, ಒಟ್ಟು 2,357 ಹುದ್ದೆಗಳು ಖಾಲಿ ಹುದ್ದೆಗಳಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಇಂಡಿಯಾ ಪೋಸ್ಟ್‌ ನ ಅಧಿಕೃತ ವೆಬ್‌ ಸೈಟ್‌ ನಲ್ಲಿ indiapost.gov.in ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ : ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 41,383 ಕೋವಿಡ್ ಪ್ರಕರಣ ಪತ್ತೆ, 507 ಮಂದಿ ಸಾವು

ಬ್ರಾಂಚ್ ಪೋಸ್ಟ್ ಮಾಸ್ಟರ್ (ಬಿಪಿಎಂ), ಸಹಾಯಕ ಶಾಖೆ ಪೋಸ್ಟ್ ಮಾಸ್ಟರ್ (ಎಬಿಪಿಎಂ), ಮತ್ತು ಡಾಕ್ ಸೇವಕ್ ಅವರ ಹಲವಾರು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ಖಾಲಿ ಹುದ್ದೆಗಳಿಗೆ ಅರ್ಹತಾ ಮಾನದಂಡಗಳು  ಏನು..?  

Advertisement

ಭಾರತದ ಯಾವುದೇ ಪ್ರದೇಶಗಳಿಂದ ಭಾರತದ ಯಾವುದೇ ಮಾನ್ಯತೆ ಪಡೆದ ಶಾಲಾ ಶಿಕ್ಷಣ ಮಂಡಳಿಯಿಂದ ಗಣಿತ, ಸ್ಥಳೀಯ ಭಾಷೆ ಬಂಗಾಳಿ ಮತ್ತು ಇಂಗ್ಲಿಷ್‌ ನಲ್ಲಿ ಉತ್ತೀರ್ಣ ಅಂಕಗಳೊಂದಿಗೆ ಎಸ್ ಎಸ್ ಎಲ್ ಸಿ ತರಗತಿ ಮಾಧ್ಯಮಿಕ ಶಾಲಾ ಪರೀಕ್ಷೆಯ ಪ್ರಮಾಣಪತ್ರದಲ್ಲಿ ಉತ್ತೀರ್ಣಗೊಂಡ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಇನ್ನು, ಕನಿಷ್ಠ 9ನೇ ತರಗತಿಯವರೆಗೆ  ಸ್ಥಳೀಯ ಭಾಷೆಯನ್ನು ಅಧ್ಯಯನ ಮಾಡಿರಬೇಕು ಎಂದು ಹೇಳಲಾಗಿದೆ. ಅಭ್ಯರ್ಥಿಗಳು 18 ರಿಂದ 40 ವರ್ಷ ವಯಸ್ಸಿನವರಾಗಿರಬೇಕು.

ಒಸಿ / ಒಬಿಸಿ / ಇಡಬ್ಲ್ಯೂಎಸ್ ಪುರುಷ / ಟ್ರಾನ್ಸ್-ಮೆನ್ ವಿಭಾಗಕ್ಕೆ ಅರ್ಜಿ ಶುಲ್ಕ 100 ರೂ, ಆದರೆ ಎಲ್ಲಾ ಮಹಿಳಾ / ಮಂಗಳಮುಖಿ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂದು ಸೂಚಿಸಲಾಗಿದೆ.

ಇದನ್ನೂ ಓದಿ : ರೈತರ ಪ್ರತಿಭಟನೆ :ಜಂತರ್ ಮಂತರ್ ನಲ್ಲಿ ನಮ್ಮದೇ ಸಂಸತ್ ಅಧಿವೇಶನ ಮಾಡ್ತೇವೆ ಎಂದ ರೈತ ಮುಖಂಡರು

Advertisement

Udayavani is now on Telegram. Click here to join our channel and stay updated with the latest news.

Next