Advertisement
ಪಶ್ಚಿಮ ಬಂಗಾಳದ ಅಂಚೆ ವೃತ್ತದಲ್ಲಿ, ಒಟ್ಟು 2,357 ಹುದ್ದೆಗಳು ಖಾಲಿ ಹುದ್ದೆಗಳಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಇಂಡಿಯಾ ಪೋಸ್ಟ್ ನ ಅಧಿಕೃತ ವೆಬ್ ಸೈಟ್ ನಲ್ಲಿ indiapost.gov.in ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
Related Articles
Advertisement
ಭಾರತದ ಯಾವುದೇ ಪ್ರದೇಶಗಳಿಂದ ಭಾರತದ ಯಾವುದೇ ಮಾನ್ಯತೆ ಪಡೆದ ಶಾಲಾ ಶಿಕ್ಷಣ ಮಂಡಳಿಯಿಂದ ಗಣಿತ, ಸ್ಥಳೀಯ ಭಾಷೆ ಬಂಗಾಳಿ ಮತ್ತು ಇಂಗ್ಲಿಷ್ ನಲ್ಲಿ ಉತ್ತೀರ್ಣ ಅಂಕಗಳೊಂದಿಗೆ ಎಸ್ ಎಸ್ ಎಲ್ ಸಿ ತರಗತಿ ಮಾಧ್ಯಮಿಕ ಶಾಲಾ ಪರೀಕ್ಷೆಯ ಪ್ರಮಾಣಪತ್ರದಲ್ಲಿ ಉತ್ತೀರ್ಣಗೊಂಡ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಇನ್ನು, ಕನಿಷ್ಠ 9ನೇ ತರಗತಿಯವರೆಗೆ ಸ್ಥಳೀಯ ಭಾಷೆಯನ್ನು ಅಧ್ಯಯನ ಮಾಡಿರಬೇಕು ಎಂದು ಹೇಳಲಾಗಿದೆ. ಅಭ್ಯರ್ಥಿಗಳು 18 ರಿಂದ 40 ವರ್ಷ ವಯಸ್ಸಿನವರಾಗಿರಬೇಕು.
ಒಸಿ / ಒಬಿಸಿ / ಇಡಬ್ಲ್ಯೂಎಸ್ ಪುರುಷ / ಟ್ರಾನ್ಸ್-ಮೆನ್ ವಿಭಾಗಕ್ಕೆ ಅರ್ಜಿ ಶುಲ್ಕ 100 ರೂ, ಆದರೆ ಎಲ್ಲಾ ಮಹಿಳಾ / ಮಂಗಳಮುಖಿ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂದು ಸೂಚಿಸಲಾಗಿದೆ.
ಇದನ್ನೂ ಓದಿ : ರೈತರ ಪ್ರತಿಭಟನೆ :ಜಂತರ್ ಮಂತರ್ ನಲ್ಲಿ ನಮ್ಮದೇ ಸಂಸತ್ ಅಧಿವೇಶನ ಮಾಡ್ತೇವೆ ಎಂದ ರೈತ ಮುಖಂಡರು