Advertisement

ವರ್ಷಕ್ಕೆರಡು ಸಲ ಪ್ರವಾಸ ಹೋದ್ರೆ ಭಾರತೀಯರಿಗೆ ಖುಷಿಯೋ ಖುಷಿ

09:40 AM Oct 01, 2019 | Team Udayavani |

ಹೊಸದಿಲ್ಲಿ: ವರ್ಷಕ್ಕೊಂದು ಬಾರಿ ಸುದೀರ್ಘ‌ ರಜೆ ತೆಗೆದುಕೊಂಡು ಪ್ರವಾಸ ಹೋಗೋದು ಹೆಚ್ಚಿನವರ ಅಭ್ಯಾಸ. ಆದರೀಗ ಭಾರತೀಯರು ವರ್ಷಕ್ಕೆರಡು ಬಾರಿ ಪ್ರವಾಸ ಹೋಗುವುದನ್ನು ರೂಢಿಸಿಕೊಳ್ತಿದ್ದಾರಂತೆ. ಸುದೀರ್ಘ‌ ಒಂದೇ ಬಾರಿಯ ಪ್ರವಾಸಕ್ಕಿಂತ ತುಸು ಕಡಿಮೆ ಅವಧಿಯ ಪ್ರವಾಸದಲ್ಲಿ ಹೆಚ್ಚು ಮಜಾ ಇದೆ ಎಂದು ಅವರು ಕಂಡುಕೊಂಡಿದ್ದಾರಂತೆ.

Advertisement

ಹೊಸ ಸಮೀಕ್ಷೆಯೊಂದು ಇದರ ಬಗ್ಗೆ ಬೆಳಕು ಚೆಲ್ಲಿದೆ. 7-10 ದಿನಗಳ ಪ್ರವಾಸಕ್ಕಿಂತ 3-6 ದಿನದ ಎರಡು ಬಾರಿ ಪ್ರವಾಸ ನಡೆಸುವುದು ಉತ್ತಮ ಎಂದು ಜನರು ಹೇಳಿದ್ದಾರಂತೆ. ಇಂಡಿಯಾ ಹಾಲಿಡೇ ರಿಪೋರ್ಟ್‌ 2019 ಹೆಸರಿನ ನಿಯತಕಾಲಿಕೆಯಲ್ಲಿ ಈ ವಿಚಾರ ಪ್ರಕಟಗೊಂಡಿದೆ.

ಭಾರತೀಯರು ಹೀಗೆ ಪ್ರವಾಸ ಹೋಗುವ ವೇಳೆ, ಅಡ್ವೆಂಚರ್‌ ಟೂರ್‌, ಒಬ್ಬರೇ ಪ್ರವಾಸ ಹೋಗುವುದು, ಪ್ರವಾಸಿ ಸಂಸ್ಥೆಗಳ ನೆರವಿನೊಂದಿಗೆ ಪ್ರವಾಸ ಹೋಗುವುದನ್ನು ಇಷ್ಟ ಪಡುತ್ತಾರಂತೆ. ಇನ್ನು ಸುದೀರ್ಘ‌ ದಿನ ಪ್ರವಾಸ ಹೋಗುವುದನ್ನು 56 ವರ್ಷ ಮೇಲ್ಪಟ್ಟವರು ಹೆಚ್ಚು ಇಷ್ಟಪಡುತ್ತಾರಂತೆ.
ಹಾಗೆಯೇ ದ್ವಾರಕಾ, ಮಧುರೈ, ರಾಮೇಶ್ವರ, ಶಿರಡಿ, ಪುಷ್ಕರ್‌, ಮಥುರಾ, ಉಜ್ಜೆ„ನಿ, ವಾರಾಣಸಿಗೆ ಹೆಚ್ಚು ಜನ ಹೋಗುತ್ತಾರೆ. ಈ ಸ್ಥಳಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ ಎಂದು ಸಮೀಕ್ಷೆ ತಿಳಿಸಿದೆ.

ಇಷ್ಟೇ ಅಲ್ಲದೆ ರಿಲ್ಯಾಕ್ಸ್‌ ಮಾಡುವುದಕ್ಕೆ ಪ್ರವಾಸ ಹೋಗುವುದಾಗಿ ಶೇ.68ರಷ್ಟು ಮಂದಿ ಹೇಳಿದ್ದಾರಂತೆ. ಒಮೆ ¾ ಶೇ.80ರಷ್ಟು ಮಂದಿ ಪ್ರವಾಸದ ವೇಳೆ ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡ್‌ ಮೂಲಕ ಖರ್ಚುಗಳನ್ನು ನಿಭಾಯಿಸುವುದಾಗಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next