Advertisement

ಐಸಿಸಿ ಸಭೆಯಲ್ಲಿ ಭಾರತ-ಪಾಕ್‌ ವಿಶ್ವಕಪ್‌ ವಿವಾದ ಚರ್ಚೆ?

12:30 AM Feb 21, 2019 | Team Udayavani |

ಹೊಸದಿಲ್ಲಿ: ಈ ಬಾರಿ ಇಂಗ್ಲೆಂಡ್‌ನ‌ಲ್ಲಿ ನಡೆಯುವ ಏಕದಿನ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಪಾಕಿಸ್ಥಾನ ವಿರುದ್ಧ ಭಾರತ ಆಡಬಾರದು ಎಂಬ ಆಗ್ರಹ ಜೋರಾಗಿದೆ. ಪುಲ್ವಾಮದಲ್ಲಿ 40ಕ್ಕೂ ಅಧಿಕ ಸಿಆರ್‌ಪಿಎಫ್ ಯೋಧರು, ಪಾಕ್‌ ಪ್ರೇರಿತ ಉಗ್ರಗಾಮಿಗಳಿಂದ ಹತ್ಯೆಗೊಳಗಾದ ಬೆನ್ನಲ್ಲೇ ಇಂಥದೊಂದು ಕೂಗು ಎದ್ದಿದೆ. 

Advertisement

ಫೆ. 27ರಿಂದ ದುಬಾೖನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಸಭೆ ನಡೆಯಲಿದ್ದು, ಆಗ ಈ ವಿವಾದ ಚರ್ಚೆಯಾಗುವ ಸಾಧ್ಯತೆಯಿದೆ ಎಂದು ಐಸಿಸಿ ಮೂಲಗಳು ತಿಳಿಸಿವೆ.

ಚರ್ಚೆಯ ವೇಳೆ ಭಾರತ-ಪಾಕಿಸ್ಥಾನ ಕ್ರಿಕೆಟ್‌ ಮಂಡಳಿಗಳು ಮಾತುಕತೆ ನಡೆಸುವ ಸಾಧ್ಯತೆ ಇದೆ. ಇದುವರೆಗೆ ಬಿಸಿಸಿಐ ತಾನು ಆಡುವುದಿಲ್ಲವೆಂದು ಐಸಿಸಿಗೆ ತಿಳಿಸಿಲ್ಲ. ಒಂದು ವೇಳೆ ಕೇಂದ್ರ ಸರಕಾರ ಆಡಬಾರದು ಎಂಬ ನಿರ್ಣಯ ತೆಗೆದುಕೊಂಡರೆ, ಅದಕ್ಕೆ ತಾನು ಬದ್ಧವಾಗಿರುವುದಾಗಿ ಬಿಸಿಸಿಐ ಮೂಲಗಳು ತಿಳಿಸಿವೆ. ಇತ್ತೀಚೆಗಷ್ಟೇ ಐಸಿಸಿ ಸಿಇಒ ಡೇವ್‌ ರಿಚಡ್ಸìನ್‌ ಕೂಡ, ತಮ್ಮ ಮುಂದೆ ಅಂತಹ ಯಾವುದೇ ಚಿಂತನೆಗಳಿಲ್ಲ ಎಂದು ತಿಳಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ವಿಶ್ವಕಪ್‌ ಮೇ 30ಕ್ಕೆ ಆರಂಭವಾಗಿ ಜು. 14ಕ್ಕೆ ಮುಗಿಯುತ್ತದೆ. ಭಾರತ-ಪಾಕಿಸ್ಥಾನ ಪಂದ್ಯವಿರುವುದು ಜೂ. 16ಕ್ಕೆ. ಅಂದರೆ, ಹೆಚ್ಚು-ಕಡಿಮೆ ಮೂರೂವರೆ ತಿಂಗಳು ಬಾಕಿಯಿದೆ. ಆದ್ದರಿಂದ ಇಷ್ಟು ಬೇಗ ನಿರ್ಧಾರ ತೆಗೆದುಕೊಳ್ಳದೇ, ಕಾದು ನೋಡುವ ತಂತ್ರವನ್ನು ಬಿಸಿಸಿಐ ಅನುಸರಿಸುತ್ತಿದೆ ಎನ್ನಲಾಗಿದೆ.

ಆಡದಿದ್ದರೆ ಅಂಕ ನಷ್ಟ
ಈ ಬಾರಿಯ ವಿಶ್ವಕಪ್‌ “ರೌಂಡ್‌ ರಾಬಿನ್‌’ ಮಾದರಿಯಲ್ಲಿದೆ. ಅಂದರೆ ಒಟ್ಟು ಆಡುವ 10 ತಂಡಗಳು, ಉಳಿದೆಲ್ಲ ತಂಡಗಳೊಂದಿಗೆ ಲೀಗ್‌ ಹಂತದಲ್ಲಿ ಆಡುತ್ತವೆ. ಅಗ್ರ 4 ಸ್ಥಾನ ಪಡೆದ ತಂಡಗಳಿಗೆ ಸೆಮಿಫೈನಲ್‌ ಅವಕಾಶ ಸಿಗುತ್ತದೆ. ಆದ್ದರಿಂದ ಐಸಿಸಿ ಏನನ್ನೂ ಮಾಡುವ ಸ್ಥಿತಿಯಲ್ಲಿಲ್ಲ.

Advertisement

ಅಕಸ್ಮಾತ್‌ ಭಾರತ ತಂಡ ಪಾಕಿಸ್ಥಾನ ವಿರುದ್ಧ ಆಡದೇ ಹೋದರೆ ಆಗ ಅಂಕವನ್ನು ಕಳೆದಕೊಳ್ಳಬೇಕಾಗುತ್ತದೆ. ಪಾಕಿಸ್ಥಾನಕ್ಕೆ ಪುಕ್ಕಟೆಯಾಗಿ ಅಂಕ ಲಭಿಸುತ್ತದೆ. 1996ರಲ್ಲಿ ಕೆಲವು ತಂಡಗಳು ಗಲಭೆ ಪೀಡಿತ ಶ್ರೀಲಂಕಾಕ್ಕೆ ತೆರಳದಿರಲು ನಿರ್ಧರಿಸಿದಾಗ ಲಂಕಾ ಪಂದ್ಯವಾಡದೆಯೇ ಅಂಕ ಸಂಪಾದಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.ಆದರೆ ಈ ಬಾರಿ ಐಸಿಸಿ ಯಾವ ನಿರ್ಧಾರಕ್ಕ ಬಂದೀತು ಎಂಬ ನಿಟ್ಟಿನಲ್ಲಿ ಮುಂದಿನ ಸಭೆ ಹೆಚ್ಚು ಮಹತ್ವ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next