Advertisement

ಭಾರತ-ಪಾಕ್‌ ಪರಮಾಣು ಶಸ್ತ್ರಾಸ್ತ್ರ ಮಾಹಿತಿ ವಿನಿಮಯ

09:51 AM Jan 03, 2020 | Team Udayavani |

ಹೊಸದಿಲ್ಲಿ/ಇಸ್ಲಾಮಾಬಾದ್‌: ಭಾರತ ಮತ್ತು ಪಾಕಿಸ್ಥಾನ ಬುಧವಾರ ತಮ್ಮ ತಮ್ಮ ದೇಶಗಳಲ್ಲಿರುವ ಪರಮಾಣು ಶಸ್ತ್ರಾಸ್ತ್ರಗಳ ವಿವರಗಳನ್ನು ವಿನಿಮಯ ಮಾಡಿಕೊಂಡಿವೆ. ಈ ಬಗ್ಗೆ ಹೊಸದಿಲ್ಲಿಯಲ್ಲಿ ಮತ್ತು ಇಸ್ಲಾಮಾಬಾದ್‌ನಲ್ಲಿ ಎರಡೂ ದೇಶಗಳ ವಿದೇಶಾಂಗ ಸಚಿವಾಲಯಗಳು ಪ್ರಕಟನೆ ಹೊರಡಿಸಿವೆ.

Advertisement

ಈ ಬಗ್ಗೆ 1988ರ ಡಿ.31ರಂದು ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. 1991 ಜ.27ರಿಂದ ಅದನ್ನು ಅನುಸರಿಸಿಕೊಂಡು ಬರಲಾಗಿದೆ. ಈ ಒಪ್ಪಂದದ ಅನ್ವಯ ಪರಸ್ಪರ ಪರಮಾಣು ಶಸ್ತ್ರಾಸ್ತ್ರಗಳನ್ನು ಪ್ರಯೋಗ ಮಾಡದೇ ಇರುವ ಬಗ್ಗೆ ಸಹಮತಕ್ಕೆ ಬರಲಾಗಿತ್ತು. ಪ್ರಸಕ್ತ ವರ್ಷ ಒಪ್ಪಂದದ 29ನೇ ವರ್ಷವಾಗಿದೆ.

ಪಟ್ಟಿ ಹಸ್ತಾಂತರ: ಮತ್ತೂಂದು ಬೆಳವಣಿಗೆಯಲ್ಲಿ ಪಾಕಿಸ್ಥಾನ ಭಾರತಕ್ಕೆ 282 ಮಂದಿ ಭಾರತೀಯ ಕೈದಿಗಳ ವಿವರಗಳನ್ನು ನೀಡಿದೆ. ಹೊಸದಿಲ್ಲಿಯಲ್ಲಿ ಭಾರತ ಸರಕಾರದ ವತಿಯಿಂದಲೂ ಕೂಡ ಪಾಕ್‌ ಹೈಕಮಿಷನ್‌ ಕಚೇರಿಗೆ ಆ ದೇಶದ ಬಂಧಿತರ ಪಟ್ಟಿಯ ವಿವರ ಸಲ್ಲಿಸಿದೆ. ಈ ಬಗ್ಗೆ 2008ರ ಮೇನಲ್ಲಿ ಸಹಿ ಹಾಕಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next