Advertisement

ಭಾರತ-ಪಾಕ್‌ ಬಾಂಧವ್ಯ ವಿಚಾರ ಪ್ರತ್ಯೇಕ ಎಂದ ಅಮೆರಿಕ

09:53 AM Sep 28, 2022 | Team Udayavani |

ವಾಷಿಂಗ್ಟನ್‌: ಭಾರತ ಮತ್ತು ಪಾಕಿಸ್ತಾನ ವಿವಿಧ ರೀತಿಯಲ್ಲಿ ಅಮೆರಿಕದ ಮಿತ್ರ ರಾಷ್ಟ್ರಗಳು. ಎರಡೂ ದೇಶಗಳ ಬಾಂಧವ್ಯವನ್ನು ನಾವು ಪ್ರತ್ಯೇಕವಾಗಿ ಪರಿಗಣಿಸುವುದಿಲ್ಲ ಎಂದು ಅಮೆರಿಕ ವಿದೇಶಾಂಗ ಸಚಿವಾಲಯದ ವಕ್ತಾರ ನೆಡ್‌ ಪ್ರೈಸ್‌ ಹೇಳಿದ್ದಾರೆ.

Advertisement

ಪಾಕಿಸ್ತಾನಕ್ಕೆ ಎಫ್-16 ಯುದ್ಧ ವಿಮಾನಗಳನ್ನು ನೀಡಿದ್ದಕ್ಕೆ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ವಾಷಿಂಗ್ಟನ್‌ನಲ್ಲಿಯೇ ಬಹಿರಂಗವಾಗಿಯೇ ಆಕ್ಷೇಪ ಮಾಡಿದ್ದರು. ಜತೆಗೆ ಯಾರನ್ನೂ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಅದಕ್ಕೆ ಪ್ರತಿಕ್ರಿಯಿಸಿರುವ ಅಮೆರಿಕದ ನೆಡ್‌ ಪ್ರೈಸ್‌, “ಪಾಕಿಸ್ತಾನದ ಜತೆಗಿನ ಬಾಂಧವ್ಯವನ್ನು ನಾವು ಪರಿಶೀಲಿಸುವುದಿಲ್ಲ. ಅದರ ಜತೆಗೆ ಭಾರತದ ಜತೆಗೆ ನಾವು ಹೊಂದಿರುವ ಬಾಂಧವ್ಯವನ್ನೂ ಪರಿಶೀಲಿಸುವುದಿಲ್ಲ. ಎರಡೂ ದೇಶಗಳು ವಿವಿಧ ರೀತಿಯಲ್ಲಿ ಸಹಭಾಗಿ ರಾಷ್ಟ್ರಗಳೇ ಆಗಿವೆ’ ಎಂದಿದ್ದಾರೆ.

ಈ ನಡುವೆ ಅಮೆರಿಕದ ವಿದೇಶಾಂಗ ಸಚಿವ ಲೊಲೊಯ್ಡ ಆಸ್ಟಿನ್‌ ಮತ್ತು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಮಂಗಳವಾರ ಮಾತುಕತೆ ನಡೆಸಿದ್ದಾರೆ. ರಕ್ಷಣಾ ಕ್ಷೇತ್ರದಲ್ಲಿ ದ್ವಿಪಕ್ಷೀಯ ಬಾಂಧವ್ಯ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next