Advertisement

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌: ಸೈನಾ, ಪ್ರಣಯ್‌ ಗೆಲುವಿನ ಆರಂಭ

10:48 PM Jan 12, 2022 | Team Udayavani |

ಹೊಸದಿಲ್ಲಿ: “ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ’ಯಲ್ಲಿ ಸೈನಾ ನೆಹ್ವಾಲ್‌, ಪ್ರಣಯ್‌, ಲಕ್ಷ್ಯ ಸೇನ್‌ ದ್ವಿತೀಯ ಸುತ್ತು ತಲುಪಿದ್ದಾರೆ.

Advertisement

ಜೆಕ್‌ ಗಣರಾಜ್ಯದ ಎದುರಾಳಿ ತೆರೆಝಾ ಸ್ವಬಿಕೋವಾ ದ್ವಿತೀಯ ಗೇಮ್‌ ವೇಳೆ ಗಾಯಾಳಾಗಿ ಪಂದ್ಯ ತ್ಯಜಿಸಿದ ಕಾರಣ ಸೈನಾಗೆ ಮುನ್ನಡೆ ಲಭಿಸಿತು. ಆಗ ಸೈನಾ 22-20, 1-0 ಮುನ್ನಡೆಯಲ್ಲಿದ್ದರು.

ಸೈನಾ ದೀರ್ಘ‌ ಕಾಲದ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಆಡಲಿಳಿದಿದ್ದರು. ಇವರ ಮುಂದಿನ ಎದುರಾಳಿ ಭಾರತದವರೇ ಆದ ಮಾಳವಿಕಾ ಬನ್ಸೋಡ್‌. ಇನ್ನೊಂದು ಪಂದ್ಯದಲ್ಲಿ ಮಾಳವಿಕಾ ಆತಿಥೇಯ ನಾಡಿನ ಸಮಿಯಾ ಇಮಾದ್‌ ಫಾರೂಖಿ ಅವರನ್ನು 21-18, 21-9ರಿಂದ ಹಿಮ್ಮೆಟ್ಟಿಸಿದರು.

ಲಕ್ಷ್ಯ, ಪ್ರಣಯ್‌ ಮುನ್ನಡೆ
ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಎಚ್‌.ಎಸ್‌. ಪ್ರಣಯ್‌ ಸ್ಪೇನ್‌ನ ಪಾಬ್ಲೊ ಅಬಿಯನ್‌ ಅವರನ್ನು 21-14, 21-7 ಅಂತರದಿಂದ ಹಿಮ್ಮೆಟಿಸಿದರು. ಲಕ್ಷ್ಯಸೇನ್‌ ಈಜಿಪ್ಟ್ ನ ಅದಾಮ್‌ ಹತೇಮ್‌ ಎಲ್ಗಮಲ್‌ ಅವರನ್ನು 21-15, 21-7ರಿಂದ ಮಣಿಸಿದರು.

ಮಹಿಳಾ ಡಬಲ್ಸ್‌ ವಿಭಾಗದಲ್ಲಿ ಅಶ್ವಿ‌ನಿ ಪೊನ್ನಪ್ಪ-ಸಿಕ್ಕಿ ರೆಡ್ಡಿ ಜೋಡಿ ದ್ವಿತೀಯ ಸುತ್ತಿಗೆ ಪ್ರವೇಶ ಪಡೆದಿದೆ.

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next