ಹೊಸದಿಲ್ಲಿ: ಡೆನ್ಮಾರ್ಕ್‌ನ ವಿಕ್ಟರ್ ಆ್ಯಕ್ಸೆಲ್ಸೆನ್ ಮತ್ತು ಜಪಾನಿನ ಅಕಾನೆ ಯಮಗುಚಿ ಅವರು ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಕೂಟದ ಫೈನಲ್ ಹಂತಕ್ಕೇರಿದ್ದಾರೆ. ಸತತ ಎರಡನೇ ಪ್ರಶಸ್ತಿ ಗೆಲ್ಲುವ ಧಾವಂತದಲ್ಲಿರುವ ಅವರಿಬ್ಬರು ಅದ್ಭುತ ಆಟದ ಪ್ರದರ್ಶನ ನೀಡುತ್ತ ಬಂದಿದ್ದಾರೆ.
ವನಿತೆಯರ ಸಿಂಗಲ್ಸ್‌ನಲ್ಲಿ ವಿಶ್ವದ ನಂಬರ್ ವನ್ ಯಮಗುಚಿ ಅವರು ಥಾಯ್ಲೆಂಡಿನ ಹಾಲಿ ಚಾಂಪಿಯನ್ ಸುದನಿದಾ ಕಾಟೆತಾಂಗ್ ಅವರನ್ನು 21-17, 21-16 ಗೇಮ್‌ಗಳಿಂದ ಸೋಲಿಸಿ ಫೈನಲಿಗೇರಿದರು. ಪುರುಷರ ವಿಭಾಗದಲ್ಲಿ ವಿಶ್ವದ ನಂಬರ್ ವನ್ ಆ್ಯಕ್ಸೆಲ್ಸೆನ್ ಅವರು ನಾಲ್ಕನೇ ಶ್ರೇಯಾಂಕದ ಇಂಡೋನೇಷ್ಯಾದ ಜೋನಾಥನ್ ಕ್ರಿಸ್ಟೀ ಅವರನ್ನು 21-6, 21-12 ಗೇಮ್‌ಗಳಿಂದ ಉರುಳಿಸಿದರು.
ಫೈನಲ್ ಹೋರಾಟದಲ್ಲಿ ಯಮಗುಚಿ ಅವರು ಕೊರಿಯದ ಆ್ಯನ್ ಸೆಯಾಂಗ್ ಅವರನ್ನು ಎದುರಿಸಲಿದ್ದಾರೆ. ಕಳೆದ ವಾರ ನಡೆದ ಮಲೇಷ್ಯಾ ಓಪನ್‌ನ ಫೈನಲ್‌ನಲ್ಲೂ ಅವರಿಬ್ಬರು ಮುಖಾಮಖೀಯಾಗಿದ್ದರು. ಪುರುಷರ ಫೈನಲ್‌ನಲ್ಲಿ ಆ್ಯಕ್ಸೆಲ್ಸೆನ್ ಅವರು ಥಾಯ್ಲೆಂಡಿನ ಕುನÉವುಟ್ ವಿತಿಸರ್ನ್ ಅವರನ್ನು ಎದುರಿಸಲಿದ್ದಾರೆ.