Advertisement

Climate: ಹವಾಮಾನ ರಕ್ಷಣೆಗೆ 100 ಬಿಲಿಯನ್‌ ಡಾಲರ್‌ ಮೀಸಲು ವಾಗ್ಧಾನಕ್ಕೆ ಭಾರತ ಆಕ್ಷೇಪ

12:05 AM Dec 10, 2023 | Team Udayavani |

ದುಬೈ: ಹವಾಮಾನ ರಕ್ಷಣೆಗೆ ಸಂಬಂಧಿಸಿದಂತೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು 100 ಬಿಲಿಯನ್‌ ಅಮೆರಿಕನ್‌ ಡಾಲರ್‌ ಮೊತ್ತವನ್ನು ಮೀಸಲಾಗಿ ಇರಿಸಿವೆ ಎಂಬ ವಾದವನ್ನು ಭಾರತ ಪ್ರಶ್ನಿಸಿದೆ. ಇಲ್ಲಿ ಉಲ್ಲೇಖೀಸಿರುವ “ಹವಾ ಮಾನ ವಿತ್ತೀಯ ನೆರವು” (climate finance) ಎಂಬ ಅಂಶವನ್ನು ಸೂಕ್ತ ರೀತಿ ವ್ಯಾಖ್ಯಾನಿಸಿಲ್ಲ ಎಂದು ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್‌ ಟೀಕಿಸಿದ್ದಾರೆ.

Advertisement

ದುಬೈನಲ್ಲಿ ನಡೆಯುತ್ತಿರುವ ವಿಶ್ವ ಹವಾಮಾನ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಗತ್ತಿನ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಹವಾಮಾನ ಬದಲಾವಣೆ ನಿಟ್ಟಿನಲ್ಲಿ ಮುಂದಡಿ ಇಟ್ಟಾಗಲೇ ಅದು ಸೂಕ್ತ ಎನಿಸಲಿದೆ. ಹವಾಮಾನ ರಕ್ಷಣೆ ಮತ್ತು ಪರಿಸರ ರಕ್ಷಣೆ ವಿಚಾರದಲ್ಲಿ ಭಾರತ ಸಮಾನ ನಿಲುವು ಹೊಂದಿದೆ ಎಂದು ಪ್ರತಿಪಾದಿಸಿದರು.

2005ರಿಂದ 2019ರ ಅವಧಿಯಲ್ಲಿ ದೇಶದ ಒಟ್ಟು ಉತ್ಪಾದನೆ ಪ್ರಮಾಣದ ಶೇ.33 ಪ್ರಮಾಣವನ್ನು ಪರಿಸರ ಸಂರಕ್ಷಣೆ ಮತ್ತು ಇಂಗಾಲ ಪ್ರಮಾಣದ ತಗ್ಗಿಸಲು ವಿನಿಯೋಗ ಮಾಡಿದೆ ಎಂದು ಸಚಿವ ಭೂಪೇಂದ್ರ ಯಾದವ್‌ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next