Advertisement

ಭಾರತ –ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯ ಡ್ರಾ : ಜಯದ ಸನಿಹದಲ್ಲಿದ್ದ ಟೀಂ ಇಂಡಿಯಾಗೆ ನಿರಾಸೆ

07:00 PM Nov 29, 2021 | Team Udayavani |
1 ಮತ್ತೆ ಲಾಕ್ ಡೌನ್ ಮಾಡುವ ಯಾವುದೇ ಚಿಂತೆನೆ ಇಲ್ಲ: ಸಚಿವ ಕೆ.ಸುಧಾಕರ್ ಕೋವಿಡ್ ಒಂದು ಮತ್ತು ಎರಡನೇ ಅಲೆಯಿಂದಾಗಿ ಅನಾರೋಗ್ಯ ಸಮಸ್ಯೆ, ಲಾಕ್ ಡೌನ್ ನಿಂದ ಆರ್ಥಿಕವಾಗಿ ಈಗಾಗಲೇ ಜನರು ಬಹಳಷ್ಟು ನೊಂದಿದ್ದಾರೆ. ಬಹಳ ನಷ್ಟ ಅನುಭವಿಸಿದ್ದಾರೆ. ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ, ಹೀಗಾಗಿ ಮತ್ತೆ ಮತ್ತೆ ಆತಂಕ, ಸಮಸ್ಯೆ ಸೃಷ್ಟಿ ಮಾಡುವ ಕೆಲಸ ಮಾಡುವುದಿಲ್ಲ, ರಾಜ್ಯದಲ್ಲಿ ಲಾಕ್ ಡೌನ್ ಹೇರುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.  
  1. ಭದ್ರಾ ಯೋಜನೆಗೆ ರಾಷ್ಟ್ರೀಯ ಮಾನ್ಯತೆ?
ಮಹತ್ವದ ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮಾನ್ಯತೆ ನೀಡುವ ಕ್ಷಣ ಹತ್ತಿರವಾಗಿದೆ. ಸೋಮವಾರ ಕೇಂದ್ರದ ಉನ್ನತ ಮಟ್ಟದ ಸಮಿತಿ ಸಭೆ ಸೇರಿ ಒಪ್ಪಿಗೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆ ಬಳಿಕ ಕೇಂದ್ರ ಸಚಿವ ಸಂಪುಟ ಸಭೆಗೆ ಈ ಪ್ರಸ್ತಾವನೆ ರವಾನೆಯಾಗಲಿದೆ.  
  1. ಕೃಷಿ ಕಾಯ್ದೆ ರದ್ದು: ಮಸೂದೆ ಅಂಗೀಕಾರ
ಸೋಮವಾರ ಸಂಸತ್ತಿನ ಚಳಿಗಾಲದ ಅಧಿವೇಶನದ ಆರಂಭಗೊಂಡಿದೆ. ಮೊದಲ ದಿನವಾದ ಇಂದು ಮೂರು ಕೃಷಿ ಕಾಯ್ದೆಯನ್ನು ರದ್ದು ಮಾಡುವ ಮಸೂದೆ, ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ. ಧ್ವನಿ ಮತದ ಮೂಲಕ ಅಂಗೀಕಾರಗೊಂಡಿರುವುದಾಗಿ ವರದಿ ತಿಳಿಸಿದೆ.  
  1. ಸಂಧಾನದ ಹಿಂದೆ ಮೋಸದ ಛಾಯೆ
ಗಡಿ ವಿವಾದಕ್ಕೆ ಸಂಧಾನವೇ ಪರಿಹಾರ ಎನ್ನುತ್ತಲೇ ಚೀನವು ಲಡಾಖ್‌ನಲ್ಲಿ ತನ್ನ ಸ್ಥಾನ ಭದ್ರ ಪಡಿಸುತ್ತಿದೆ. ಸದ್ದಿಲ್ಲದೇ ಪೂರ್ವ ಭಾಗದ ಆಕ್ಸಾಯ್‌ಚಿನ್‌ನಲ್ಲಿ ಮಿಲಿಟರಿ ಬಳಕೆಗಾಗಿ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸುತ್ತಿದೆ. ಈ ರೀತಿ ಚೀನವು ಗಾಲ್ವಾನ್‌ನಲ್ಲಿ ಪೆಟ್ಟು ತಿಂದ ಬಳಿಕ ಹಲವು ಬಾರಿ ಪ್ರಚೋದಕ ಕಿಡಿಗೇಡಿತನ ಪ್ರದರ್ಶಿಸಿದೆ.  
  1. 10ಕ್ಕೂ ಹೆಚ್ಚು ದೇಶಗಳಿಗೆ ಒಮಿಕ್ರಾನ್‌
ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಕೊರೊನಾದ ಹೊಸ ರೂಪಾಂತರ “ಒಮಿಕ್ರಾನ್‌’ ಕ್ಷಿಪ್ರಗತಿಯಲ್ಲಿ ವ್ಯಾಪಿಸತೊಡಗಿದೆ. ಅನೇಕ ನಿರ್ಬಂಧಗಳ ನಡುವೆಯೂ ಈ ಬೋಟ್ಸ್‌ವಾನಾ ವೈರಸ್‌ ವೇಗವಾಗಿ ಹಬ್ಬುತ್ತಿದೆ. ಈ ವರೆಗೆ 10ಕ್ಕೂ ಅಧಿಕ ದೇಶಗಳಿಗೆ ದಾಂಗುಡಿಯಿಟ್ಟಿದೆ ಎಂದು ವರದಿಯಾಗಿದೆ.  
  1. ದೇಶದಲ್ಲಿ ಮತ್ತೆ ಹೆಚ್ಚಿದ ಕೋವಿಡ್ 19 ಹೊಸ ಪ್ರಕರಣಗಳ ಸಂಖ್ಯೆ!
ದೇಶದಲ್ಲಿ ಕಳೆದ 24 ಗಂಟೆಯಲ್ಲಿ 8,774 ಹೊಸ ಕೋವಿಡ್ 19 ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಶನಿವಾರದ ವರದಿಗಿಂತ ಶೇ.5.5ರಷ್ಟು ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚು ಪತ್ತೆಯಾಗಿದೆ. ಈ ಮಾಹಿತಿಯನ್ನು ಕೇಂದ್ರ ಆರೋಗ್ಯ ಇಲಾಖೆ ಹಂಚಿಕೊಂಡಿದೆ.  
  1. ಪ್ರೇಮಂ ಪೂಜ್ಯಂನತ್ತ ಸ್ಟೂಡೆಂಟ್ಸ್‌ ಗ್ಯಾಂಗ್‌
ಅಪ್ಪಟ ಲವ್‌ಸ್ಟೋರಿಯಾಗಿ ಮೂಡಿಬಂದಿರುವ “ಪ್ರೇಮಂ ಪೂಜ್ಯಂ’ ಚಿತ್ರ ಫ್ಯಾಮಿಲಿ ಆಡಿಯನ್ಸ್‌ ಮನಗೆದ್ದಿದೆ. ಈಗ ಈ ಚಿತ್ರಕ್ಕೆ ಕಾಲೇಜ್‌ ಸ್ಟೂಡೆಂಟ್ಸ್‌ ಕೂಡ ಫಿದಾ ಆಗಿದ್ದಾರೆ. ಈ ಮೂಲಕ ಅಪ್ಪಟ ಪ್ರೇಮಕಥೆಯೊಂದು ಎಲ್ಲಾ ವರ್ಗದ ಪ್ರೇಕ್ಷಕರ ಮನಗೆದ್ದಂತಾಗಿದೆ.  
  1. ಭಾರತದ ಜಯಕ್ಕೆ ಅಡ್ಡಿಯಾದ ರವೀಂದ್ರ ಮತ್ತು ಮಂದಬೆಳಕು: ಕಾನ್ಪುರ ಟೆಸ್ಟ್ ಡ್ರಾನಲ್ಲಿ ಅಂತ್ಯ
ಕಾನ್ಪುರ: ಅಂತಿಮ ಎಸೆತದವರೆಗೂ ರೋಚಕತೆಯಿಂದ ಸಾಗಿದ ಕಾನ್ಪುರ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. ಜಯದ ಅತ್ಯಂತ ಸನಿಹದವರೆಗೆ ಸಾಗಿದ್ದ ಟೀಂ ಇಂಡಿಯಾ ಕೊನೆಗೆ ಡ್ರಾಗೆ ಸಮಾಧಾನಪಡಬೇಕಾಯಿತು. ಕೊನೆಯಲ್ಲಿ ಕ್ರೀಸ್ ಕಚ್ಚಿ ನಿಂತ ರಚಿನ್ ರವೀಂದ್ರ ಮತ್ತು ಮಂದ ಬೆಳಕಿನ ಕಾರಣ ಭಾರತ ಸರಣಿಯಲ್ಲಿ ಮುನ್ನಡೆ ಸಾಧಿಸಲು ವಿಫಲವಾಯಿತು.
Advertisement

Udayavani is now on Telegram. Click here to join our channel and stay updated with the latest news.

Next