Advertisement
ಇದು ಭಾರತ, ನ್ಯೂಜಿಲ್ಯಾಂಡ್ ಪಾಲಿನ ಕೊನೆಯ ಲೀಗ್ ಪಂದ್ಯ. ಎರಡೂ ತಂಡಗಳು ಈಗಾಗಲೇ ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ. ಇಲ್ಲಿ ಗೆದ್ದ ತಂಡ “ಎ’ ವಿಭಾಗದ ಅಗ್ರಸ್ಥಾನಿಯಾಗಲಿದೆ. ಪ್ರಚಂಡ ಪ್ರದರ್ಶನ ಕಾಯ್ದುಕೊಂಡು ಬಂದಿರುವ ಹಾಲಿ ಚಾಂಪಿಯನ್ ಭಾರತ ಎರಡೂ ಲೀಗ್ ಪಂದ್ಯಗಳನ್ನು ಅಧಿಕಾರಯುತವಾಗಿಯೇ ಗೆದ್ದಿದೆ. ಶ್ರೀಲಂಕಾವನ್ನು 90 ರನ್ನುಗಳಿಂದ, ದುರ್ಬಲ ಜಪಾನನ್ನು 10 ವಿಕೆಟ್‌ಗಳಿಂದ ಮಣಿಸಿದೆ. ಈಗ ಕಿವೀಸ್ ಮೇಲೂ ಸವಾರಿ ಮಾಡಿ ಹ್ಯಾಟ್ರಿಕ್ ಸಾಧಿಸುವ ಯೋಜನೆಯಲ್ಲಿದೆ.
ನ್ಯೂಜಿಲ್ಯಾಂಡಿಗೆ ಜಪಾನ್ ಎದುರಿನ ಆರಂಭದ ಪಂದ್ಯದಲ್ಲೇ ಅದೃಷ್ಟ ಕೈಕೊಟ್ಟಿತ್ತು. ಮಳೆಯಿಂದಾಗಿ ಈ ಪಂದ್ಯ ರದ್ದಾದರಿಂದ ಅಂಕವನ್ನು ಹಂಚಿಕೊಳ್ಳಬೇಕಾದ ಸಂಕಟ ಎದುರಾಗಿತ್ತು. ಆದರೆ ಶ್ರೀಲಂಕಾವನ್ನು ಪರಾಭವಗೊಳಿಸಿ ಮುಂದಿನ ಸುತ್ತು ಪ್ರವೇಶಿಸುವಲ್ಲಿ ಯಶಸ್ವಿಯಾಯಿತು. ಭಾರತದ ಸಾಮರ್ಥ್ಯದ ಬಗ್ಗೆ ಎರಡು ಮಾತಿಲ್ಲ. ಪ್ರಿಯಂ ಗರ್ಗ್ ಪಡೆ ಕೂಟದಲ್ಲೇ ಹೆಚ್ಚು ಬಲಿಷ್ಠವಾಗಿ ಗೋಚರಿ ಸುತ್ತಿದೆ. ಬ್ಯಾಟಿಂಗ್, ಬೌಲಿಂಗ್ ಎರಡೂ ಅಪಾಯಕಾರಿಯಾಗಿದೆ. ಹೀಗಾಗಿ 2018ರ ತವರಿನ ಆವೃತ್ತಿಯಲ್ಲಿ 8ನೇ ಸ್ಥಾನಕ್ಕೆ ಕುಸಿದಿದ್ದ ನ್ಯೂಜಿಲ್ಯಾಂಡ್ ಪಾಲಿಗೆ ಭಾರತದ ಸವಾಲು ಸುಲಭದ್ದಲ್ಲ. ಆದರೆ ಶ್ರೀಲಂಕಾ ಮತ್ತು ಜಪಾನ್‌ಗೆ ಹೋಲಿಸಿದರೆ ಕಿವೀಸ್ ಹೆಚ್ಚು ಬಲಿಷ್ಠ.