Advertisement

ಕಾಮನ್ವೆಲ್ತ್‌ ಗೇಮ್ಸ್‌ಗೂ ರಾಣಿ ಗೈರು

10:30 PM Jun 23, 2022 | Team Udayavani |

ಹೊಸದಿಲ್ಲಿ: ಭಾರತದ ವನಿತಾ ಹಾಕಿ ತಂಡದ ನಾಯಕಿ ರಾಣಿ ರಾಮ್‌ಪಾಲ್‌ ಕಾಮನ್ವೆಲ್ತ್‌ ಗೇಮ್ಸ್‌ ಪಂದ್ಯಾವಳಿಯಿಂದಲೂ ಹೊರಗುಳಿಯಲಿದ್ದಾರೆ. ಅವರು ಸಂಪೂರ್ಣ ಫಿಟ್‌ನೆಸ್‌ಗೆ ಮರಳದ ಹಿನ್ನೆಲೆಯಲ್ಲಿ ಗೋಲ್‌ಕೀಪರ್‌ ಸವಿತಾ ಪುನಿಯ ತಂಡವನ್ನು ಮುನ್ನಡೆಸಲಿದ್ದಾರೆ. ಉಪನಾಯಕಿ ಆಗಿರುವವರು ಡಿಫೆಂಡರ್‌ ದೀಪ್‌ ಗ್ರೇಸ್‌ ಎಕ್ಕ.

Advertisement

ಉಳಿದಂತೆ ಮುಂಬರುವ ವಿಶ್ವಕಪ್‌ ಪಂದ್ಯಾವಳಿಗೆ ಆಯ್ದ ಬಹುತೇಕ ಆಟಗಾರ್ತಿಯರೇ ಇದ್ದಾರೆ. 2 ಬದಲಾವಣೆಯಷ್ಟೇ ಕಂಡುಬಂದಿದೆ. ಬಿಛೂ ದೇವಿ ಖರಿಮಮ್‌ ಬದಲು ರಜನಿ ಎಟಿಮಾರ್ಪು ಬಂದಿದ್ದಾರೆ. ಮಿಡ್‌ಫಿàಲ್ಡರ್‌ ಸೋನಿಕಾ ಬದಲು ಫಾರ್ವರ್ಡ್‌ ಆಟಗಾರ್ತಿ ಸಂಗೀತಾ ಕುಮಾರಿ ಆಯ್ಕೆಯಾಗಿದ್ದಾರೆ.

ಭಾರತ “ಎ’ ವಿಭಾಗದಲ್ಲಿ ಇಂಗ್ಲೆಂಡ್‌, ಕೆನಡಾ, ವೇಲ್ಸ್‌ ಮತ್ತು ಘಾನಾ ತಂಡಗಳೊಂದಿಗೆ ಸ್ಥಾನ ಪಡೆದಿದೆ. ಮೊದಲ ಪಂದ್ಯವನ್ನು ಜು. 29ರಂದು ಘಾನಾ ವಿರುದ್ಧ ಆಡಲಿದೆ.

ಕಳೆದ ಗೋಲ್ಡ್‌ಕೋಸ್ಟ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತ ಕಂಚಿನ ಪದಕ ಸ್ಪರ್ಧೆಯಲ್ಲಿ ಇಂಗ್ಲೆಂಡ್‌ಗೆ ಶರಣಾಗಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಈ ಬಾರಿ ಪೋಡಿಯಂ ಏರುವ ವಿಶ್ವಾಸ ಹೊಂದಿದೆ.

ಕಾಮನ್ವೆಲ್ತ್‌ ಗೇಮ್ಸ್‌ ಜು. 28ರಿಂದ ಆ. 8ರ ತನಕ ನಡೆಯಲಿದೆ. ಇದಕ್ಕೂ ಮೊದಲು ವನಿತಾ ವಿಶ್ವಕಪ್‌ ಹಾಕಿ ಪಂದ್ಯಾವಳಿ ಸಾಗಲಿದೆ (ಜು. 1-17).

Advertisement

ಭಾರತ ಹಾಕಿ ತಂಡ :

ಗೋಲ್‌ಕೀಪರ್: ಸವಿತಾ ಪುನಿಯ (ನಾಯಕಿ), ರಜನಿ ಎಟಿಮಾರ್ಪು.

ಡಿಫೆಂಡರ್: ದೀಪ್‌ ಗ್ರೇಸ್‌ ಎಕ್ಕ, ಗುರ್ಜೀತ್‌ ಕೌರ್‌, ನಿಕ್ಕಿ ಪ್ರಧಾನ್‌, ಉದಿತಾ.

ಮಿಡ್‌ಫೀಲ್ಡರ್: ನಿಶಾ, ಸುಶೀಲಾ ಚಾನು, ಮೋನಿಕಾ, ನೇಹಾ, ಜ್ಯೋತಿ, ನವಜೋತ್‌ ಕೌರ್‌, ಸಲೀಮಾ ಟೇಟೆ.

ಫಾರ್ವರ್ಡ್ಸ್‌: ವಂದನಾ ಕಟಾರಿಯಾ, ಲಾಲ್ರೆಮಿÕಯಾಮಿ, ನವನೀತ್‌ ಕೌರ್‌, ಶರ್ಮಿಳಾ ದೇವಿ, ಸಂಗೀತಾ ಕುಮಾರಿ.

Advertisement

Udayavani is now on Telegram. Click here to join our channel and stay updated with the latest news.

Next