Advertisement

ಫೈನಲ್‌ಗೆ ಇಂಡಿಯಾ ಲೆಜೆಂಡ್ಸ್‌

08:11 PM Sep 29, 2022 | Team Udayavani |

ರಾಯ್‌ಪುರ: ಆಸ್ಟ್ರೇಲಿಯವನ್ನು 5 ವಿಕೆಟ್‌ಗಳಿಂದ ಮಣಿಸಿದ ಭಾರತ “ಲೆಜೆಂಡ್ಸ್‌ ಕ್ರಿಕೆಟ್‌’ ಫೈನಲ್‌ಗೆ ಲಗ್ಗೆ ಇರಿಸಿದೆ.

Advertisement

ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯ ಲೆಜೆಂಡ್ಸ್‌ 5 ವಿಕೆಟಿಗೆ 171 ರನ್‌ ಮಾಡಿದರೆ, ಇಂಡಿಯಾ ಲೆಜೆಂಡ್ಸ್‌ 19.2 ಓವರ್‌ಗಳಲ್ಲಿ 5 ವಿಕೆಟಿಗೆ 175 ರನ್‌ ಬಾರಿಸಿತು.

ಆರಂಭಕಾರ ನಮನ್‌ ಓಜಾ ಅಜೇಯ 90 ರನ್‌ (62 ಎಸೆತ 7 ಬೌಂಡರಿ, 5 ಸಿಕ್ಸರ್‌), ಇರ್ಫಾನ್‌ ಪಠಾಣ್‌ ಕೇವಲ 12 ಎಸೆತಗಳಿಂದ ಅಜೇಯ 37 ರನ್‌ (2 ಬೌಂಡರಿ, 4 ಸಿಕ್ಸರ್‌) ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಸಚಿನ್‌ ತೆಂಡುಲ್ಕರ್‌ 10, ಸುರೇಶ್‌ ರೈನಾ 11, ಯುವರಾಜ್‌ ಸಿಂಗ್‌ 18 ರನ್‌ ಮಾಡಿದರು.

ಆಸ್ಟ್ರೇಲಿಯ ಪರ ನಾಯಕ ವಾಟ್ಸನ್‌ 30, ಡೂಲನ್‌ 35, ಡಂಕ್‌ 46, ವೈಟ್‌ ಅಜೇಯ 30 ರನ್‌ ಹೊಡೆದರು.

ಶುಕ್ರವಾರ ಶ್ರೀಲಂಕಾ-ವೆಸ್ಟ್‌ ಇಂಡೀಸ್‌ ನಡುವಿನ ವಿಜೇತ ತಂಡವನ್ನು ಭಾರತ ಶನಿವಾರದ ಪ್ರಶಸ್ತಿ ಸಮರದಲ್ಲಿ ಎದುರಿಸಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next