Advertisement

ಭಾರತ –ಜಪಾನ್‌ ಜಂಟಿ ಸಮರಾಭ್ಯಾಸ: ಪಾಕ್‌ಗೆ ಸಡ್ಡು

11:30 AM Oct 30, 2017 | Harsha Rao |

ಹೊಸದಿಲ್ಲಿ: ಭಾರತದ ವಿರುದ್ಧ ಚೀನ ಮತ್ತು ಪಾಕಿಸ್ಥಾನ ಪದೇ ಪದೆ ಕ್ಯಾತೆ ತೆಗೆಯುತ್ತಿರುವ ನಡುವೆಯೇ ಭಾರತ-ಜಪಾನ್‌ ಜಂಟಿ ಸಮರಾಭ್ಯಾಸ ಆರಂಭವಾಗಿದೆ. ಇತ್ತೀಚೆಗೆ ಜಪಾನ್‌ ಪ್ರಧಾನಿ ಬುಲೆಟ್‌ ಟ್ರೈನ್‌ ಯೋಜನೆಗೆ ಶಿಲಾನ್ಯಾಸ ನೆರವೇರಿಸಲು ಬಂದಿದ್ದ ವೇಳೆ ಎರಡೂ ದೇಶಗಳ ನಡುವೆ ರಕ್ಷಣಾ ಬಾಂಧವ್ಯ ವೃದ್ಧಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದಕ್ಕೆ ಪೂರಕವಾಗಿ ಜಪಾನ್‌ನ ಪಿ-3ಸಿ ಓರಿಯನ್‌ ವಿಮಾನಗಳು ಮತ್ತು ಭಾರತೀಯ ನೌಕಾಪಡೆಯ ಪಿ-18 ಐ ಹಡಗುಗಳು ಮೂರು ದಿನಗಳ ಸಮರಾಭ್ಯಾಸವನ್ನು ಭಾನುವಾರದಿಂದ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಆರಂಭಿಸಿವೆ. 

Advertisement

ಶಾಂತಿಸಾಗರದ ಪ್ರದೇಶದಲ್ಲಿ ಚೀನ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳುತ್ತಿರುವ ಬೆನ್ನಲ್ಲೇ ಈ ಸಮರಾಭ್ಯಾಸ ನಡೆಯುತ್ತಿರುವುದು ಮಹತ್ವ ಪಡೆದಿದೆ. ಪಾಕಿಸ್ಥಾನ ನೌಕಾಪಡೆ ದಶಕಗಳಿಂದ ಬಳಕೆ ಮಾಡುತ್ತಿರುವ ಪಿ-3 ವಿಮಾನದ ಬಳಕೆಯನ್ನು ಪರೀಕ್ಷಿಸಿಕೊಳ್ಳುವ ನಿಟ್ಟಿನಲ್ಲೂ ಇದು ಮಹತ್ವದ್ದಾಗಿದೆ. ಅದಕ್ಕೆ ಪೂರಕವಾಗಿ ಭಾರತ, ಅಮೆರಿಕ ಮತ್ತು ಜಪಾನ್‌ ತ್ರಿಪಕ್ಷೀಯವಾಗಿ ಸಮರಾಭ್ಯಾಸ ನಡೆಸುತ್ತಿರುವುದು ಕೂಡ ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಪ್ರಬಲ ಮೈತ್ರಿಕೂಟ ಸ್ಥಾಪಿಸುವ ನಿಟ್ಟಿನಲ್ಲಿಯೇ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next