Advertisement
ಕಳೆದ ತ್ತೈಮಾಸಿಕದಲ್ಲಿ ಭಾರತ ಶೇ. 7.7ರ ಪ್ರಗತಿ ದಾಖಲಿಸಿದ್ದು, ಈ ವಿತ್ತ ವರ್ಷದಲ್ಲಿ ಸರಾಸರಿ ಶೇ. 7ರಷ್ಟು ಜಿಡಿಪಿ ಪ್ರಗತಿ ಸಾಧಿಸುವ ನಿರೀಕ್ಷೆಯಿದೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಇಂಗ್ಲೆಂಡ್‌ನ ಜಿಡಿಪಿ ಬೆಳವಣಿಗೆ ಜನವರಿ-ಮಾರ್ಚ್ ತ್ತೈಮಾಸಿಕದಲ್ಲಿ ಶೇ. 0.1ರಷ್ಟಾಗಿದೆ. ಮೆರಿಲ್ ಲಿಂಚ್ ಜಾಗತಿಕ ಸಂಶೋಧನೆ ಮುನ್ಸೂಚನೆಯ ಪ್ರಕಾರ, ಈ ವರ್ಷವೇ ಭಾರತವು ಆರ್ಥಿಕತೆಯಲ್ಲಿ ಫ್ರಾನ್ಸ್ ಅನ್ನು ಹಿಂದಿಕ್ಕಲಿದೆ. 2019ರ ಅವಧಿಯಲ್ಲಿ ಇಂಗ್ಲೆಂಡ್ ಅನ್ನು ಹಿಂದಿಕ್ಕಲಿದೆ. ಇನ್ನೊಂದೆಡೆ ಮಾರ್ಗನ್ ಸ್ಟಾನ್ಲ ವರದಿಯ ಪ್ರಕಾರ ಮುಂದಿನ ಹತ್ತು ವರ್ಷಗಳಲ್ಲಿ ಭಾರತ 400 ಲಕ್ಷ ಕೋಟಿ ರೂ. ದಾಟಲಿದ್ದು, ಜರ್ಮನಿ ಮತ್ತು ಜಪಾನನ್ನು ಹಿಂದಿಕ್ಕಲಿದೆ.
ಕಳೆದ ತ್ತೈಮಾಸಿಕದಲ್ಲಿ ಜಿಡಿಪಿ ಶೇ. 7.7ರಷ್ಟು ಏರಿಕೆ ಕಂಡಿದ್ದರ ಹಿಂದೆ ಸರ್ಕಾರದ ಶ್ರಮವೇ ಹೆಚ್ಚಿದೆ ಎಂದು ಹೇಳಲಾಗಿದೆ. ಅಭಿವೃದ್ಧಿಯ ಅಂಕಿ ಅಂಶದ ಪ್ರಕಾರ ಸಾಮಾನ್ಯವಾಗಿ ಒಟ್ಟು ಮೌಲ್ಯ ವರ್ಧನೆ (ಜಿವಿಎ), ಜಿವಿಎ ಮೇಲೆ ಸರ್ಕಾರದ ವೆಚ್ಚ, ನಿರ್ಮಾಣ ಕ್ಷೇತ್ರ ಮತ್ತು ಕೇಂದ್ರ, ರಾಜ್ಯ ಸರ್ಕಾರಗಳ ವಿತ್ತೀಯ ಕೊರ ತೆಯು ಪ್ರಮುಖ ಅಂಶವಾಗಿರುತ್ತದೆ. ಈ ಪೈಕಿ ಜಿವಿಎ ಖಾಸಗಿ ವಲಯದ ಅಭಿವೃದ್ಧಿಯನ್ನು ಸೂಚಿಸುತ್ತಿದ್ದು, ಇದು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಉತ್ಪಾದನೆ ಮತ್ತು ಕೃಷಿ ವಲಯ ಪ್ರಗತಿ ಕಂಡಿದ್ದರೂ, ರಫ್ತು ಮತ್ತು ಖಾಸಗಿ ವಲಯ ಕುಸಿದಿದೆ. ಹೀಗಾಗಿ ಸರ್ಕಾರದ ವೆಚ್ಚವೇ ಕಳೆದ ತ್ತೈಮಾಸಿಕದಲ್ಲಿ ಅಭಿವೃದ್ಧಿ ದರ ಏರಿಕೆಗೆ ಕಾರಣವಾಗಿದೆ ಎಂದು ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.