Advertisement

ಭಾರತ ಸ್ನೇಹಕ್ಕೂ ಬದ್ಧ-ಸಮರಕ್ಕೂ ಸಿದ್ಧ: ಬೆಳಮಗಿ

06:01 PM Jul 30, 2022 | Team Udayavani |

ಕಲಬುರಗಿ: ಭಾರತ ಸ್ನೇಹಕ್ಕೂ ಬದ್ಧ, ಸಮರಕ್ಕೂ ಸಿದ್ಧ ಎಂದು ಜಾಗತಿಕ ಮಟ್ಟದಲ್ಲಿ ಸಾಬೀತು ಪಡಿಸಿದ ದಿನವೇ ಕಾರ್ಗಿಲ್‌ ವಿಜಯ ದಿವಸ್‌. ಪಾಕಿಸ್ತಾನಿ ನುಸುಳುಕೋರರ ಹುಟ್ಟಡಗಿಸಿ ಭಾರತೀಯ ಯೋಧರು ವಿಜಯ ಪತಾಕೆ ಹಾರಿಸಿದ ದಿನವಿದು ಎಂದು ಮಾಜಿ ಸಚಿವ ರೆವುನಾಯಕ ಬೆಳಮಗಿ ವ್ಯಾಖ್ಯಾನಿಸಿದರು.

Advertisement

ನಗರದ ಕಲಾ ಮಂಡಳದಲ್ಲಿ ಕಲ್ಯಾಣ ಕರ್ನಾಟಕ ಸಮರ ಸೇನೆ ಹಮ್ಮಿಕೊಂಡಿದ್ದ ಕಾರ್ಗಿಲ್‌ ವಿಜಯ ದಿನ ಕಾರ್ಯಕ್ರಮ ಉದ್ಘಾಟಿಸಿ, ಮಾಜಿ ಯೋಧರನ್ನು ಸನ್ಮಾನಿಸಿ ಅವರು ಮಾತನಾಡಿದರು.

“ಕಾರ್ಗಿಲ್‌ ವಿಜಯ ದಿವಸ್‌’ ಭಾರತೀಯ ಯೋಧರ ತ್ಯಾಗ, ದೇಶ ಪ್ರೇಮ, ಸಾಹಸ, ಪರಾಕ್ರಮ, ಸಮರ್ಪಣೆ ಭಾವವನ್ನು ನೆನಪಿಸುತ್ತದೆ. ಕಾರ್ಗಿಲ್‌ ಯುದ್ಧ ಮುಕ್ತಾಯವಾಗಿ 23ವರ್ಷಗಳೇ ಕಳೆದರೂ ದೇಶದ ಪ್ರತಿಯೊಬ್ಬ ನಾಗರಿಕರೂ ಹೆಮ್ಮೆ ಪಡುವಂತಹ ಅವಿಸ್ಮರಣೀಯ ದಿನ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಯೋಧ ಮಹೇಶ್ವರರಾವ್‌, ಶ್ರೀನಗರದಿಂದ ಸುಮಾರು 205ಕಿ.ಮೀ ದೂರದಲ್ಲಿರುವ ಸುಮಾರು 16,000ಅಡಿ ಎತ್ತರದ ಹಿಮಚ್ಛಾದಿತ ಪರ್ವತ ಶ್ರೇಣಿಯಲ್ಲಿ, ಕಡಿದಾದ ಕಣಿವೆ ಪ್ರದೇಶದಲ್ಲಿ ಕಾರ್ಗಿಲ್‌ ಯುದ್ಧ ನಡೆದಿತ್ತು. ಇದು ಜಗತ್ತಿನ ಅತ್ಯಂತ ದುರ್ಗಮ ಸ್ಥಳಗಳಲ್ಲಿ ಒಂದಾಗಿದೆ.

ಪರ್ವತ ಶ್ರೇಣಿ ಮೇಲಿದ್ದ ಪಾಕ್‌ ಪಡೆಗಳು ಸುಲಭವಾಗಿ ಭಾರತೀಯ ಸೈನಿಕರ ಚಲನವಲನ ಗುರುತಿಸಿ ಅವರ ಮೇಲೆ ಬಾಂಬ್‌, ಶೆಲ್‌ ದಾಳಿ ನಡೆಸುತ್ತಿದ್ದರು. ಪಾಕ್‌ ಯೋಧರ ಕಣ್ಣಿಗೆ ಬೀಳದಂತೆ ಭೀಕರ ಚಳಿಯಲ್ಲಿ, ಶಸ್ತ್ರಾಸ್ತ್ರಗಳೊಂದಿಗೆ ದುರ್ಗಮ ಪರ್ವತಗಳನ್ನು ಏರುವುದು ಭಾರೀ ಸವಾಲಿನ ಕೆಲಸವಾಗಿತ್ತು. ಆದರೆ ಈ ಎಲ್ಲ ಅಡೆತಡೆ ಮೀರಿದ ಭಾರತೀಯ ಯೋಧರು ವೀರಾವೇಶದಿಂದ ಹೋರಾಡಿ ಗೆಲುವು ಸಾಧಿಸಲಾಯಿತು ಎಂದು ನೆನಪು ಮಾಡಿಕೊಂಡರು.

Advertisement

ಸೇನೆಯ ಸಂಸ್ಥಾಪಕ ಅಧ್ಯಕ್ಷ ಮಂಜುನಾಥ ನಾಲವಾರಕರ್‌ ಸ್ವಾಗತಿಸಿದರು. ಕೊಡೇಕಲ್‌ನ ದಾವಲ್‌ ಮಲೀಕ್‌ ಅಜ್ಜ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸೈನಿಕ ಶಿವಲಿಂಗಪ್ಪ ಗೌಳಿ, ಮಾಜಿ ಮಹಾಪೌರ ಶರಣು ಮೋದಿ, ಎಚ್ಕೆಸಿಸಿಐ ಕಾರ್ಯದರ್ಶಿ ಶರಣು ಪಪ್ಪಾ, ಆಹಾರ ಸುರಕ್ಷತಾ ಅ ಧಿಕಾರಿ ಡಾ| ಅರ್ಚನಾ ಕಮಲಾಪೂರ, ಜಗನ್ನಾಥ ಸೂರ್ಯವಂಶಿ ಇದ್ದರು. ಪದಾ ಧಿಕಾರಿಗಳಾದ ಸಾದಿಕ್‌ ಅಲಿ ದೇಶಮುಖ, ಪ್ರಹ್ಲಾದ್‌ ಹಡಗಿಲಕರ್‌, ಚರಣರಾಜ ರಾಠೊಡ, ಅಮರದೀಪ ಕೊಳ್ಳೂರ್‌, ನಾಗರಾಜ ಮಡಿವಾಳ್‌ ಹಾಗೂ ಇನ್ನಿತರರು ಇದ್ದರು.

ಜಾತಿ, ಧರ್ಮಗಳಾಚೆಗೆ ಸ್ವಾಭಿಮಾನದ ಸಂಕೇತವಾಗಿ ಬೆಳೆದು ನಿಲ್ಲುವುದೇ ದೇಶ ಪ್ರೇಮ. ಅಂತಹ ದೇಶ ಪ್ರೇಮಿಗಳು ತಮ್ಮ ಜೀವ ಲೆಕ್ಕಿಸದೇ ಕಾರ್ಗಿಲ್‌ನಲ್ಲಿ ಪಾಕಿಸ್ತಾನವನ್ನು ಸದೆ ಬಡಿದು ದೇಶದ ಜನ ಹಮ್ಮೆಪಡುವಂತಹ ಕೆಲಸ ಮಾಡಿದ್ದಾರೆ. ಇದು ಭೂಮಿ ಇರುವವರೆಗೂ ಸದಾ ನೆನಪಿನಲ್ಲಿರುತ್ತದೆ. ಅಂತಹ ಸೈನಿಕರನ್ನು ಸನ್ಮಾನಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.
ದಾವಲ್‌ ಮಲೀಕ್‌ ಅಜ್ಜ, ಕೊಡೇಕಲ್‌

Advertisement

Udayavani is now on Telegram. Click here to join our channel and stay updated with the latest news.

Next