Advertisement
ಅಷ್ಟೇ ಅಲ್ಲ, ಈ ಕ್ಷೇತ್ರದಲ್ಲಿ ಭಾರತದ ಸ್ಪರ್ಧಾತ್ಮಕತೆಗೂ ಹೊಡೆತ ಬೀಳಲಿದೆ. ಜಿಎಸ್‌ಪಿ (ಜನರಲೈಸ್ಡ್ ಸಿಸ್ಟಂ ಆಫ್ ಪ್ರಿಫರೆನ್ಸಸ್) ಎಂದು ಈ ಯೋಜನೆಯನ್ನು ಕರೆಯಲಾಗಿ ದ್ದು, ಇದರ ಅಡಿಯಲ್ಲಿ ಸುಮಾರು 3 ಸಾವಿರ ಸಾಮಗ್ರಿಗಳನ್ನು ತೆರಿಗೆ ಇಲ್ಲದೇ ಅಮೆರಿಕ ಆಮದು ಮಾಡಿಕೊಳ್ಳುತ್ತದೆ.
ಅಮೆರಿಕದ ಸಾಮಗ್ರಿಯ ಮೇಲೆ ಶೇ. 25 ತೆರಿಗೆ
ಬೀಜಿಂಗ್: ಅಮೆರಿಕ ಹಾಗೂ ಚೀನಾ ವ್ಯಾಪಾರ ಯುದ್ಧ ತೀವ್ರತೆ ಪಡೆದುಕೊಳ್ಳುತ್ತಿದ್ದು, ಈಗ ಅಮೆರಿಕದ 4 ಲಕ್ಷ ಕೋಟಿ ರೂ. ಮೌಲ್ಯದ ಸಾಮಗ್ರಿಗಳ ಮೇಲೆ ಚೀನಾ ಶೇ. 25 ರಷ್ಟು ತೆರಿಗೆ ಹೆಚ್ಚಳ ಮಾಡಿದೆ. ಕಳೆದ ತಿಂಗಳಷ್ಟೇ ಅಮೆರಿಕವು 12 ಲಕ್ಷ ಕೋಟಿ ರೂ. ಮೌಲ್ಯದ ಚೀನಾ ಸಾಮಗ್ರಿಗಳ ಆಮದಿನ ಮೇಲೆ ಶೇ. 25 ರಷ್ಟು ತೆರಿಗೆ ವಿಧಿಸಿತ್ತು. ಇದಕ್ಕೆ ಪ್ರತೀಕಾರವಾಗಿ ಚೀನಾ ಈ ಕ್ರಮ ಕೈಗೊಂಡಿದೆ. ಕ್ರೀಡಾ ಸಾಮಗ್ರಿ, ಸಂಗೀತ ಸಲಕರಣೆ, ವೈನ್, ವಜ್ರ, ಪೀಠೊಪಕರಣ, ಬಟ್ಟೆ ಹಾಗೂ ಆಟಿಕೆಗಳ ಮೇಲೆ ಈ ತೆರಿಗೆ ವಿಧಿಸಲಾಗಿದೆ. ಅಮೆರಿಕದ ನಿರ್ಧಾರಕ್ಕೆ ಈ ಹಿಂದೆಯೇ ಆಕ್ರೋಶ ವ್ಯಕ್ತಪಡಿಸಿದ್ದ ಚೀನಾ, ‘ಅಮೆರಿಕವು ಆರ್ಥಿಕ ಭಯೋತ್ಪಾದನೆ’ ಸೃಷ್ಟಿಸುತ್ತಿದೆ ಎಂದು ಆರೋಪಿಸಿತ್ತು. ಈ ನಡುವೆಯೇ, ಅಮೆರಿಕದೊಂದಿಗಿನ ವ್ಯಾಪಾರ ಮಾತುಕತೆ ಕುರಿತು ತನ್ನ ನಿಲುವಿನ ಬಗ್ಗೆ ಭಾನುವಾರ ಶ್ವೇತಪತ್ರ ಹೊರಡಿಸುವುದಾಗಿ ಚೀನಾ ಹೇಳಿದೆ.
ಪರಿಣಾಮವೇನು?
ಮೂಲಗಳ ಪ್ರಕಾರ ಭಾರತದ ಮೇಲೆ ಅಮೆರಿಕದ ಈ ನಿರ್ಧಾರದಿಂದ ಪರಿಣಾಮ ಅತ್ಯಂತ ಕನಿಷ್ಠ. ಕೇವಲ 5.6 ಶತಕೋಟಿ ಡಾಲರ್ ವಹಿವಾಟಿನಲ್ಲಿ 190 ಮಿಲಿಯನ್ ಡಾಲರ್ ಮೊತ್ತದ ವಹಿವಾಟು ಮಾತ್ರ ಈ ಸೌಲಭ್ಯವನ್ನು ಬಳಸಿಕೊಳ್ಳುತ್ತದೆ. ಭಾರತದ ರಫ್ತು ವಹಿವಾಟು ಲ್ಯಾಟಿನ್ ಅಮೆರಿಕ ಮತ್ತು ಆಫ್ರಿಕಾ ದೇಶಗಳಲ್ಲಿ ಹೆಚ್ಚಿದ್ದು, ದಕ್ಷಿಣ ದೇಶಗಳಿಗೂ ಇತ್ತೀಚಿನ ದಿನಗಳಲ್ಲಿ ರಫ್ತು ಪ್ರಮಾಣ ಹೆಚ್ಚುತ್ತಿದೆ. ಆದರೆ ಕೆಲವೇ ವಲಯದ ಆಮದುದಾರರಿಗೆ ಇದರಿಂದ ಪರಿಣಾಮ ಉಂಟಾಗುವ ಸಾಧ್ಯತೆಯಿದೆ.
ಜಾರಿಗೆ ಇನ್ನೂ ಇದೆ ಅವಕಾಶ
ಜೂನ್ 5 ರಿಂದಲೇ ಈ ನೀತಿ ಅನ್ವಯವಾಗುವುದಿಲ್ಲ. ಸಾಮಾನ್ಯವಾಗಿ ಇದನ್ನು ಘೋಷಣೆ ಮಾಡಿದ ನಂತರ 60 ದಿನಗಳ ಕಾಲಾವಕಾಶ ಇರುತ್ತದೆ. ಇದಕ್ಕೆ ಅಮೆರಿಕದ ಸಂಸತ್ತು ಅನುಮೋದನೆ ನೀಡಬೇಕಿರುತ್ತದೆ. ಆ ನಂತರವೇ ಇದಕ್ಕೆ ಅಧ್ಯಕ್ಷರು ಸಹಿ ಹಾಕುತ್ತಾರೆ. 2018ರಲ್ಲಿ ಭಾರತದ ಸುಮಾರು 29 ಸಾಮಗ್ರಿಗಳ ಮೇಲೆ ತೆರಿಗೆ ಹೆಚ್ಚಿಸಲು ನಿರ್ಧರಿಸಲಾಗಿತ್ತು. ಆದರೆ ಈ ನಿರ್ಧಾರ ಇನ್ನೂ ಜಾರಿಗೆ ಬಂದಿಲ್ಲ. ವಾಣಿಜ್ಯ ಕಾರ್ಯದರ್ಶಿ ಅನೂಪ್ ವಾಧ್ವಾನ್ ಹೇಳುವಂತೆ ಭಾರತ ಸರ್ಕಾರವು ಅಮೆರಿಕದೊಂದಿಗೆ ಮಾತುಕತೆ ಮುಂದುವರಿಸಲಿದೆ. ಶೀಘ್ರದಲ್ಲೇ ಇದಕ್ಕೆ ಪರಿಹಾರವನ್ನೂ ಕಂಡುಕೊಳ್ಳುತ್ತೇವೆ. ಈ ಸಂಬಂಧ ಚರ್ಚೆಗೆ ಅಮೆರಿಕ ಎಂದಿಗೂ ಮುಕ್ತವಾಗಿದೆ ಎಂದಿದ್ದಾರೆ.