ಭಾರತ ವಿಶ್ವದ 7ನೇ ಅತ್ಯಂತ ಪ್ರಾಚೀನ ರಾಷ್ಟ್ರವೆಂದು ವರದಿಯೊಂದು ಬಹಿರಂಗಪಡಿಸಿದೆ. ವಿಶ್ವದ ಯಾವೆಲ್ಲ ರಾಷ್ಟ್ರಗಳಲ್ಲಿ ಮೊದಲಿಗೆ ಆಡಳಿತಾತ್ಮಕ ರೂಪುರೇಷೆ ಸಿದ್ಧಗೊಂಡಿದೆ ಎಂಬುದರ ಅವಧಿಯನ್ನು ಪರಿಗಣಿಸಿ, ವರ್ಲ್ಡ್ ಪಾಪ್ಯುಲೇಶನ್ ರಿವ್ಯೂ (ಡಬ್ಲ್ಯೂಪಿಆರ್)ಸಂಸ್ಥೆಯು ತನ್ನ ವರದಿಯನ್ನು ಬಿಡುಗಡೆಗೊಳಿಸಿದ್ದು, ಭಾರತ ವಿಶ್ವದಲ್ಲೇ ಅತ್ಯಂತ ಪ್ರಾಚೀನವಾದ 7ನೇ ರಾಷ್ಟ್ರವಾಗಿದೆ ಎಂದಿದೆ.
ಕ್ರಿ.ಪೂ 2000ದ ಯುಗದಲ್ಲಿ ಸ್ಥಾಪನೆ :
ಡಬ್ಲೂéಪಿಆರ್ ಪ್ರಕಾರ ಭಾರತದಲ್ಲಿ ಮೊದಲಬಾರಿಗೆ ಸಂಘಟಿತ ಆಡಳಿತ ಆರಂಭಗೊಂಡಿದ್ದು, ಕ್ರಿಸ್ತಪೂರ್ವ ಯುಗ 2000ದಲ್ಲಿ ಎನ್ನಲಾಗಿದೆ. ಈ ಪಟ್ಟಿಯಲ್ಲಿ ಭಾರತ 7ನೇ ಸ್ಥಾನದಲ್ಲಿದ್ದರೆ,ಕ್ರಿ.ಪೂ 3,200ರಲ್ಲೇ ಸಂಘಟಿತ ಆಡಳಿತದ ಮೂಲಕ ಇರಾನ್ ಅಗ್ರ ಪ್ರಾಚೀನ ರಾಷ್ಟ್ರ ಎಂಬ ಖ್ಯಾತಿಗೆ ಪಾತ್ರವಾಗಿದೆ.
ಸಂಘಟಿತ ಆಡಳಿತ ಪ್ರಾಚೀನ ರಾಷ್ಟ್ರಗಳು:
Related Articles
ರಾಷ್ಟ್ರ ಆಡಳಿತ ಆರಂಭ ಅವಧಿ
ಇರಾನ್ ಕ್ರಿ.ಪೂ. 3,200
ಈಜಿಪ್ಟ್ ಕ್ರಿ.ಪೂ. 3,100
ವಿಯೆಟ್ನಾಂ ಕ್ರಿ.ಪೂ. 2,879
ಉತ್ತರ ಕೊರಿಯಾ ಕ್ರಿ.ಪೂ. 2,333
ಚೀನಾ ಕ್ರಿ.ಪೂ. 2070
ಭಾರತ ಕ್ರಿ.ಪೂ. 2,000
ಜಾರ್ಜಿಯಾ ಕ್ರಿ.ಪೂ. 1,300
ಇಸ್ರೇಲ್ ಕ್ರಿ.ಪೂ. 1,300
ಸುಡಾನ್ ಕ್ರಿ.ಪೂ. 1,070
ಅಫ್ಘಾನಿಸ್ತಾನ ಕ್ರಿ.ಪೂ. 678
ಏಕಾಧಿಪತ್ಯ ಆಡಳಿತ ಹೊಂದಿದ್ದ ಅಗ್ರ 5 ಪ್ರಾಚೀನ ರಾಷ್ಟ್ರಗಳು :
ಜಪಾನ್ ಕ್ರಿ.ಪೂ. 660
ಚೀನಾ ಕ್ರಿ.ಪೂ. 221
ಸ್ಯಾನ್ ಮಾರಿನೋ ಕ್ರಿ.ಶ. 301
ಫ್ರಾನ್ಸ್ ಕ್ರಿ.ಶ. 843
ಆಸ್ಟ್ರಿಯಾ ಕ್ರಿ.ಶ. 976