Advertisement

ಅಮೆರಿಕದಿಂದ ತೈಲ ಆಮದು ಪ್ರಮಾಣ ಹೆಚ್ಚಳ

09:36 AM Oct 24, 2019 | Team Udayavani |

ಹೊಸದಿಲ್ಲಿ: ಪಶ್ಚಿಮ ಏಷ್ಯಾದಲ್ಲಿ ರಾಜಕೀಯ ಕಾರಣಗಳಿಂದ ತೈಲ ಪೂರೈಕೆಯಲ್ಲಿ ವ್ಯತ್ಯಯವಾದ ಹಿನ್ನೆಲೆಯಲ್ಲಿ, ಅಮೆರಿಕದಿಂದ ಭಾರತದ ತೈಲ ಆಮದು ಪ್ರಮಾಣವು ಪ್ರಸಕ್ತ ಹಣಕಾಸು ವರ್ಷದಲ್ಲಿ 10 ಬಿಲಿಯನ್‌ ಡಾಲರ್‌ಗೆ ಏರಿಕೆಯಾಗುವ ನಿರೀಕ್ಷೆಯಿದೆ. 2018-19 ರಲ್ಲಿ ಕಚ್ಚಾತೈಲ, ಎಲ್‌ಎನ್‌ಜಿ ಮತ್ತು ಅಡುಗೆ ಅನಿಲದ ಒಟ್ಟು ಆಮದು 7.2 ಬಿಲಿಯನ್‌ ಡಾಲರ್‌ ಆಗಿದೆ.

Advertisement

ಪ್ರಸ್ತುತ ಹಣಕಾಸು ವರ್ಷದಲ್ಲಿ, ಇದು 10 ಬಿಲಿಯನ್‌ ಡಾಲರ್‌ಗೆ ಏರುವ ನಿರೀಕ್ಷೆಯಿದೆ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದ್ದಾರೆ. ರಾಜಕೀಯ ಕಾರಣ ಗಳಿಂದ ಪಶ್ಚಿಮ ಏಷ್ಯಾದ ತೈಲ ಪೂರೈಕೆಯಲ್ಲಿ ವ್ಯತ್ಯಯವಾದ ಸಮಯದಲ್ಲೇ ಅಮೆರಿಕದ ಉತ್ಪಾದನೆ ಹೆಚ್ಚಳವಾಗಿದೆ.

ಹೀಗಾಗಿ ಭಾರತದ ಅಗತ್ಯಕ್ಕೆ ಅನುಗುಣವಾಗಿ ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಅಮೆರಿಕ- ಭಾರತದ ಪಾಲುದಾರಿಕೆ ವೇದಿಕೆ ಹಮ್ಮಿಕೊಂಡಿದ್ದ ವಾರ್ಷಿಕ ನಾಯಕತ್ವ ಸಮ್ಮೇಳನದಲ್ಲಿ ಮಾತನಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next