Advertisement

ಮತ್ತೆ ಕುಸಿದ ಆಸೀಸ್ ಬ್ಯಾಟಿಂಗ್: ಭಾರತದ ಹಿಡಿತದಲ್ಲಿ ಮೆಲ್ಬರ್ನ್ ಟೆಸ್ಟ್

12:37 PM Dec 28, 2020 | keerthan |

ಮೆಲ್ಬರ್ನ್: ಭಾರತದ ಬಿಗು ಬೌಲಿಂಗ್ ದಾಳಿಗೆ ಆಸೀಸ್ ಬ್ಯಾಟಿಂಗ್ ಕ್ರಮಾಂಕ ಮತ್ತೊಮ್ಮೆ ಕುಸಿತ ಕಂಡಿದೆ. ಇದರೊಂದಿಗೆ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಜಯಗಳಿಸುವುದು ಬಹುತೇಕ ಖಾತ್ರಿಯಾಗಿದೆ.

Advertisement

ಮೂರನೇ ದಿನದಾಟದ ಮುಕ್ತಾಯಕ್ಕೆ ಆಸೀಸ್ ಆರು ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿದೆ. ಸದ್ಯ ಕೇವಲ 2 ರನ್ ಮುನ್ನಡೆಯಲ್ಲಿದೆ. ಕ್ಯಾಮರೂನ್ ಗ್ರೀನ್ ಮತ್ತು ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ನಡೆಸುತ್ತಿದ್ದಾರೆ. ನಾಲ್ಕನೇ ದಿನದ ಆರಂಭದಲ್ಲಿ ಆಸೀಸ್ ನ್ನು ಆಲ್ ಔಟ್ ಮಾಡಿದರೆ ಭಾರತಕ್ಕೆ ಸುಲಭ ಗೆಲುವು ನಿಶ್ಚಿತ.

131 ರನ್ ಮುನ್ನಡೆ

ಐದು ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿದ್ದಲ್ಲಿಂದ ಮೂರನೇ ದಿನದಾಟ ಆರಂಭಿಸಿದ ಭಾರತ ತಂಡ ಆರಂಭದಲ್ಲಿ ನಾಯಕ ರಹಾನೆ ವಿಕೆಟ್ ಕಳೆದುಕೊಂಡಿತು. 112 ರನ್ ಗಳಿಸಿದ್ದ ವೇಳೆ ರಹಾನೆ ರನ್ ಔಟ್ ಆದರು. ನಿನ್ನೆ 40 ರನ್ ಗಳಿಸಿ ಆಡುತ್ತಿದ್ದ ಜಡೇಜಾ ಅರ್ಧಶತಕ ಪೂರೈಸಿ ತಾನೂ ಔಟಾದರು (57 ರನ್). ಬಾಲಂಗೋಚಿಗಳ ವಿಕೆಟ್ ಬೇಗನೇ ಪತನವಾಯಿತು.

ಇದನ್ನೂ ಓದಿ:ಐಪಿಎಲ್‌: 10 ತಂಡಗಳ ಲೆಕ್ಕಾಚಾರ ಹೇಗಿದ್ದೀತು? ತಂಡಗಳು ಯಾರ ಪಾಲಿಗೆ?

Advertisement

ಭಾರತ 326 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಇದರೊಂದಿಗೆ 131 ರನ್ ಮುನ್ನಡೆ ಸಾಧಿಸಿದೆ. ಆಸೀಸ್ ಪರ ಸ್ಟಾರ್ಕ್ ಮತ್ತು ಲಯಾನ್ ತಲಾ ಮೂರು ವಿಕೆಟ್, ಕಮಿನ್ಸ್ ಎರಡು ಮತ್ತು ಹೇಜಲ್ ವುಡ್ ಒಂದು ವಿಕೆಟ್ ಕಬಳಿಸಿದರು.

ಬಿಗು ದಾಳಿ

ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸೀಸ್ ಗೆ ಮತ್ತೆ ಆರಂಭಿಕ ಆಘಾತ ಎದುರಾಯಿತು. ಜೋ ಬರ್ನ್ಸ್ ಕೇವಲ 4 ರನ್ ಗೆ ಔಟಾದರು. ವೇಡ್ (40 ರನ್), ಲಬುಶೇನ್ (28 ರನ್) ಗಳಿಸಿ ಸ್ವಲ್ಪ ಆಧರಿಸಿದರು. ಆದರೆ ನಂತರ ಸ್ಮಿತ್, ಹೆಡ್, ಪೇನ್ ರೂಪದಲ್ಲಿ ಸತತ ವಿಕೆಟ್ ಕಳೆದುಕೊಂಡಿತು.

ಸದ್ಯ ಗ್ರೀನ್ (17 ರನ್) ಮತ್ತು ಕಮಿನ್ಸ್ ( 15 ರನ್) ಆಡುತ್ತಿದ್ದಾರೆ. ಭಾರತದ ಪರ ಜಡೇಜಾ ಎರಡು ವಿಕೆಟ್ ಪಡೆದರೆ, ಉಳಿದೆಲ್ಲಾ ಬೌಲರ್ ಗಳು ತಲಾ ಒಂದು ವಿಕೆಟ್ ಕಬಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next