Advertisement

ಸೌಹಾರ್ದ ಫುಟ್ ಬಾಲ್‌ ಪಂದ್ಯ; ಸಿಂಗಾಪುರ ವಿರುದ್ಧ ಡ್ರಾ ಸಾಧಿಸಿದ ಭಾರತ

11:20 PM Sep 24, 2022 | Team Udayavani |

ಹೊ ಚಿ ಮಿನ್‌ ಸಿಟಿ: ಭಾರತವು ಹಂಗ್‌ ಥಿನ್‌ ಕೂಟಕ್ಕಾಗಿ ನಡೆದ ಫಿಫಾ ಇಂಟರ್‌ನ್ಯಾಶನಲ್‌ ಸೌಹಾರ್ದ ಫ‌ುಟ್‌ಬಾಲ್‌ ಪಂದ್ಯದಲ್ಲಿ ತನಗಿಂತ ಕಡಿಮೆ ರ್‍ಯಾಂಕಿನ ಸಿಂಗಾಪುರ ವಿರುದ್ಧ 1-1 ಗೋಲಿನಿಂದ ಡ್ರಾ ಸಾಧಿಸಿತು.

Advertisement

ಪಂದ್ಯದುದ್ದಕ್ಕೂ ಭಾರತೀಯರು ಪ್ರಾಬಲ್ಯ ಮೆರೆದರೂ ಗೋಲು ದಾಖಲಿಸಲು ವಿಫ‌ಲರಾದರು. ಇಕ್ಸಾನ್‌ ಫ‌ಂದಿ 37ನೇ ನಿಮಿಷದಲ್ಲಿ 25 ಯಾರ್ಡ್‌ ದೂರದಿಂದ ಫ್ರಿ ಕಿಕ್‌ ಮೂಲಕ ಗೋಲನ್ನು ಹೊಡೆದು ಸಿಂಗಾಪುರಕ್ಕೆ ಮುನ್ನಡೆ ಒದಗಿಸಿದರು. ಈ ಗೋಲನ್ನು ತಡೆಯಲು ಭಾರತದ ಗೋಲ್‌ಕೀಪರ್‌ ಗುರುಪ್ರೀತ್‌ ಸಿಂಗ್‌ ಸಂಧು ಬಹಳಷ್ಟು ಪ್ರಯತ್ನ ಮಾಡಿದರೂ ಯಶಸ್ಸು ದೊರಕಲಿಲ್ಲ.

ಸಿಂಗಾಪುರದ ಗೋಲಿನ ಮುನ್ನಡೆಯ ಸಂಭ್ರಮ ಹೆಚ್ಚು ಹೊತ್ತು ಇರಲಿಲ್ಲ. ಆರು ನಿಮಿಷಗಳ ಬಳಿಕ ಆಶಿಕ್‌ ಕುರುನಿಯನ್‌ ಗೋಲನ್ನು ಹೊಡೆದು ಸಮಬಲ ಸ್ಥಾಪಿಸಿದರು. ಈ ಗೋಲು ಹೊಡೆಯಲು ನಾಯಕ ಸುನೀಲ್‌ ಚೇಟ್ರಿ ನೆರವಾಗಿದ್ದರು.

ಸಿಂಗಾಪುರ ಈ ಮೊದಲು ನಡೆದ ಪಂದ್ಯದಲ್ಲಿ ವಿಯೆಟ್ನಾಂ ವಿರುದ್ಧ 0-4 ಗೋಲುಗಳಿಂದ ಸೋತಿತ್ತು. ಭಾರತ ಅಂತಿಮ ಸೌಹಾರ್ದ ಪಂದ್ಯದಲ್ಲಿ ಮಂಗಳವಾರ ವಿಯೆಟ್ನಾಂ ತಂಡವನ್ನು ಎದುರಿಸಲಿದೆ.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next