Advertisement

ಭಾರತ ಇಂದು ನಿರ್ಭೀತ ಮತ್ತು ನಿರ್ಣಾಯಕ, ಸದೃಢ ಸರ್ಕಾರ ಹೊಂದಿದೆ: ರಾಷ್ಟ್ರಪತಿ ಮುರ್ಮು

12:51 PM Jan 31, 2023 | Team Udayavani |

ನವದೆಹಲಿ: ಭಾರತ ಇಂದು ನಿರ್ಭೀತ ಮತ್ತು ನಿರ್ಣಾಯಕ ಸರ್ಕಾರವನ್ನು ಹೊಂದಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ (ಜನವರಿ 31) ಸಂಸತ್ ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತ ತಿಳಿಸಿದರು.

Advertisement

ಇದನ್ನೂ ಓದಿ:ಮಂಗಳೂರು: ಮೊಬೈಲ್‌ ಬಳಸುವಾಗ ತಾಯಿ ಗದರಿದ್ದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ 14 ವರ್ಷದ ಬಾಲಕ  

ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು ಶೀಘ್ರದಲ್ಲಿಯೇ ಒಂಬತ್ತು ವರ್ಷ ಪೂರೈಸಲಿದೆ. ಪ್ರತಿಯೊಬ್ಬ ಭಾರತೀಯನು ಆತ್ಮವಿಶ್ವಾಸದ ಉತ್ತುಂಗದಲ್ಲಿರುವುದು ಇಂದಿನ ದೊಡ್ಡ ಬದಲಾವಣೆಯಾಗಿದೆ. ಭಾರತ ಇಂದು ಜಗತ್ತಿನ ಸಮಸ್ಯೆಗಳನ್ನು ಪರಿಹರಿಸುವ ಶಕ್ತಿಯಾಗಿ ಬೆಳೆದಿದೆ ಎಂದು ಮುರ್ಮು ಹೇಳಿದರು.

ಇಂದು ಭಾರತವು ಸ್ಥಿರ, ನಿರ್ಭೀತ, ನಿರ್ಣಾಯಕ ಸರ್ಕಾರವನ್ನು ಹೊಂದಿದ್ದು, ಅದು ದೊಡ್ಡ ಕನಸುಗಳನ್ನು ಈಡೇರಿಸುವತ್ತ ಕಾರ್ಯನಿರ್ವಹಿಸುತ್ತಿದೆ. ಭಾರತವು ಇಂದು ಪ್ರಾಮಾಣಿಕರನ್ನು ಗೌರವಿಸುವ ಮತ್ತು ಬಡವರ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಅವರನ್ನು ಶಾಶ್ವತವಾಗಿ ಸಬಲೀಕರಣಗೊಳಿಸಲು ಸರ್ಕಾರ ಕೆಲಸ ಮಾಡುತ್ತಿದೆ ಎಂದರು.

ಪ್ರಜಾಪ್ರಭುತ್ವದಲ್ಲಿ ಭ್ರಷ್ಟಾಚಾರ ಅತೀ ದೊಡ್ಡ ಶತ್ರು ಎಂಬುದನ್ನು ನನ್ನ ಸರ್ಕಾರ ಸ್ಪಷ್ಟ ನಿಲುವು ಹೊಂದಿದೆ. ಈ ಹಿಂದಿನ ವರ್ಷಗಳಲ್ಲಿ ಭ್ರಷ್ಟಾಚಾರ ನಿರ್ಮೂಲನೆಗಾಗಿ ಹಲವು ದಿಟ್ಟ ಕ್ರಮಗಳನ್ನು ಕೈಗೊಂಡಿದೆ ಎಂದು ಮುರ್ಮು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next