Advertisement

ವರ್ಷಾಂತ್ಯಕ್ಕೆ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬರಲಿವೆ ಚೀತಾ

08:21 PM May 30, 2022 | Team Udayavani |

ನವದೆಹಲಿ: ದೇಶದಲ್ಲಿ ಅಳಿದು ಹೋಗಿರುವ ಚೀತಾ ಸಂತತಿಯನ್ನು ಮತ್ತೆ ಅಭಿವೃದ್ಧಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

Advertisement

ಅದಕ್ಕಾಗಿ ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾ ಜತೆಗೆ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ. ಅದರ ಪ್ರಕಾರ ದಕ್ಷಿಣ ಆಫ್ರಿಕಾದಿಂದ 12, ನಮೀಬಿಯದಿಂದ 8 ಚೀತಾಗಳನ್ನು ಭಾರತ ತರಿಸಿಕೊಳ್ಳಲಿದೆ.

ಇವುಗಳನ್ನು ಮಧ್ಯಪ್ರದೇಶದ ಕುನೊ ಪಾಲ್ಪುರ ಅಭಯಾರಣ್ಯಕ್ಕೆ ಈ ವರ್ಷಾಂತ್ಯದಲ್ಲಿ ಬಿಡುವ ನಿರೀಕ್ಷೆಯಿದೆ.

ಈ ಕುರಿತ ಮಾತುಕತೆ ಅಂತಿಮಗೊಂಡಿದ್ದು ಈ ವರ್ಷ ಏಪ್ರಿಲ್‌ನಲ್ಲಿ. ಭಾರತದ ಪರಿಸರ ಸಂರಕ್ಷಣಾ ಅಧಿಕಾರಿಗಳು ದ.ಆಫ್ರಿಕಾ, ನಮೀಬಿಯಕ್ಕೆ ಪ್ರವಾಸ ಮಾಡಿದ್ದ ವೇಳೆ ಈ ತೀರ್ಮಾನಕ್ಕೆ ಬರಲಾಗಿದೆ.

ಈ ಪ್ರಸ್ತಾವಕ್ಕೆ ಅಂತಿಮಮುದ್ರೆ ಒತ್ತಲು ಕಳುಹಿಸಿಕೊಡಲಾಗಿದೆ ಎಂದು ಮೂಲಗಳು ಹೇಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next