Advertisement

ಜಾಗತಿಕ ಹಸಿವಿನ ಸೂಚ್ಯಂಕ: ಭಾರತ 107ಕ್ಕೆ ಕುಸಿತ

09:03 PM Oct 15, 2022 | Team Udayavani |

ನವದೆಹಲಿ: ಜರ್ಮನಿ ಮತ್ತು ಐರ್ಲೆಂಡ್‌ ಸಂಸ್ಥೆಗಳು ಜಂಟಿಯಾಗಿ ಬಿಡುಗಡೆ ಮಾಡಿರುವ ಜಾಗತಿಕ ಹಸಿವಿನ ಸೂಚ್ಯಂಕ-2022ರಲ್ಲಿ ಭಾರತದ ರ್‍ಯಾಂಕಿಂಗ್‌ ಇನ್ನಷ್ಟು ಕುಸಿದಿದೆ. ಕಳೆದ ವರ್ಷ 101ನೇ ಸ್ಥಾನದಲ್ಲಿದ್ದ ಭಾರತ ಈ ವರ್ಷ 107ಕ್ಕಿಳಿದಿದೆ.

Advertisement

ಐರ್ಲೆಂಡ್‌ನ‌ ಕನ್ಸರ್ನ್ ವರ್ಲ್xವೈಡ್‌ ಮತ್ತು ಜರ್ಮನಿಯ ವೆಲ್ಟ್ ಹಂಗರ್‌ ಹಿಲ್ಫೆ ಸೇರಿ ತಯಾರಿಸಿರುವ ಈ ಸೂಚ್ಯಂಕ ಹಸಿವು ಮತ್ತು ಅಪೌಷ್ಟಿಕತೆಯ ಮಾಹಿತಿ ನೀಡುತ್ತದೆ. ಒಟ್ಟು 121 ರಾಷ್ಟ್ರಗಳ ಪೈಕಿ ಭಾರತ 107ನೇ ಸ್ಥಾನ ಪಡೆದಿದೆ. ಅಚ್ಚರಿಯೆಂದರೆ, ಹಸಿವಿನ ಮಟ್ಟದಲ್ಲಿ ಭಾರತ 29.1 ಸ್ಕೋರ್‌ ಗಳಿಸಿದ್ದು, ಇದನ್ನು “ಗಂಭೀರ’ ಎಂದು ಪರಿಗಣಿಸಲಾಗಿದೆ.

ಭಾರತವು ಪಾಕಿಸ್ತಾನ, ಬಾಂಗ್ಲಾ, ಶ್ರೀಲಂಕಾಗಿಂತಲೂ ಕಳಪೆ ಸಾಧನೆ ಮಾಡಿದೆ. ಏಷ್ಯಾದ ರಾಷ್ಟ್ರಗಳಲ್ಲಿ ಅಫ್ಘಾನಿಸ್ತಾನ ಮಾತ್ರವೇ ಭಾರತಕ್ಕಿಂತ ಕೆಳಗಿನ ಸ್ಥಾನದಲ್ಲಿದೆ.

ಕೇಂದ್ರದ ಮಾಜಿ ವಿತ್ತಸಚಿವ ಪಿ.ಚಿದಂಬರಂ ಈ ಕುಸಿತವನ್ನು ಕಟುವಾಗಿ ಟೀಕಿಸಿದ್ದು, ದೇಶದ 22.4 ಕೋಟಿ ಮಂದಿ ಅಪೌಷ್ಟಿಕತೆ ಹೊಂದಿದ್ದಾರೆ. ಮೋದಿಯವರು ಹಸಿವು, ಅಪೌಷ್ಟಿಕತೆಯಂತಹ ನಿಜವಾದ ವಿಷಯವನ್ನು ಯಾವಾಗ ಪರಿಗಣಿಸುವುದು ಎಂದು ಪ್ರಶ್ನಿಸಿದ್ದಾರೆ.

ಮಾನದಂಡವೇ ಸರಿಯಿಲ್ಲ: ಕೇಂದ್ರ
ಜಾಗತಿಕ ಹಸಿವು ಸೂಚ್ಯಂಕವನ್ನು ಸಿದ್ಧಪಡಿಸಿದ ಮಾನದಂಡವೇ ಸರಿಯಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಭಾರತದ ವರ್ಚಸ್ಸಿಗೆ ಕಳಂಕ ತರಲು ಅವೈಜ್ಞಾನಿಕವಾಗಿ ಈ ಸೂಚ್ಯಂಕ ಸಿದ್ಧಪಡಿಸಲಾಗಿದೆ. ಈ ವಾರ್ಷಿಕ ವರದಿಯಲ್ಲಿ ತಪ್ಪು ಮಾಹಿತಿಗಳೇ ತುಂಬಿರುತ್ತವೆ ಎಂದೂ ಆಕ್ರೋಶ ವ್ಯಕ್ತಪಡಿಸಿದೆ. ಕಳೆದ ವರ್ಷದ ಈ ಸೂಚ್ಯಂಕವನ್ನೂ ಕೇಂದ್ರ ಸರ್ಕಾರ ವಿರೋಧಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next