Advertisement

ಲಡಾಖ್ ಪ್ರವಾಸ: ಚೀನಗೆ ಮಹತ್ವದ ಸಂದೇಶ ರವಾನಿಸಿದ ದಲೈ ಲಾಮಾ

08:06 PM Jul 15, 2022 | Team Udayavani |

ಶ್ರೀನಗರ: ಹಲವು ವರ್ಷಗಳ ತರುವಾಯ, ಬುದ್ಧ ಧರ್ಮ ಗುರು ದಲೈ ಲಾಮಾ ಅವರು ಗುರುವಾರ ಲಡಾಖ್‌ಗೆ ಬಂದಿಳಿದಿದ್ದು, ಚೀನಕ್ಕೆ ಸಂದೇಶವೊಂದನ್ನು ಕೊಟ್ಟಿದ್ದಾರೆ.

Advertisement

“ನಾನು ಟಿಬೆಟ್‌ನ ಸಂಪೂರ್ಣ ಸ್ವಾತಂತ್ರ್ಯವನ್ನು ಕೇಳುತ್ತಿಲ್ಲ. ಬದಲಾಗಿ ಚೀನದಲ್ಲಿ ಬುದ್ಧ ಧರ್ಮದ ಸ್ವಾಯುತ್ತತೆಯನ್ನು ಕಾಪಾಡಿಕೊಳ್ಳುವುದಕ್ಕೆ ಅವಕಾಶವನ್ನು ಮಾತ್ರವೇ ಕೇಳುತ್ತಿದ್ದೇನೆ. ಚೀನದಲ್ಲಿರುವ ಅನೇಕ ರಾಷ್ಟ್ರೀಯವಾದಿಗಳು ನನ್ನನ್ನು ಪ್ರತ್ಯೇಕತಾವಾದಿ ಎಂದು ಪರಿಗಣಿಸಿದ್ದಾರೆ. ಆದರೆ ಚೀನದ ಜನ ಸಾಮಾನ್ಯರಿಗೆ ನನ್ನ ಬಯಕೆಯೇನು ಎನ್ನುವುದು ಅರ್ಥವಾಗುತ್ತಿದೆ’ ಎಂದು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದುಹಾಕಿದ ನಂತರ ಇದೇ ಮೊದಲನೇ ಬಾರಿಗೆ ಲಡಾಖ್‌ಗೆ ತೆರಳಿರುವ ದಲೈಲಾಮಾ ಅವರು ಒಂದು ತಿಂಗಳ ಕಾಲ ಲೇಹ್‌ನಲ್ಲಿ ವಾಸ ಹೂಡಲಿದ್ದಾರೆ. ಅವರ ಅವರ ಈ ಭೇಟಿ, ಚೀನಕ್ಕೆ ಇರುಸು ಮುರುಸು ತಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next