ಹೊಸದಿಲ್ಲಿ: ಲಡಾಖ್ ನಲ್ಲಿ ಪ್ರದೇಶದಲ್ಲಿ ಬೀಜಿಂಗ್ ತನ್ನ ಮಿಲಿಟರಿ ಮೂಲ ಸೌಕರ್ಯವನ್ನು ಹೆಚ್ಚಿಸಿರುವುದರಿಂದ ಈ ಪ್ರದೇಶದಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವೆ ಹೆಚ್ಚಿನ ಘರ್ಷಣೆಗಳು ಸಂಭವಿಸಬಹುದು ಎಂದು ರಾಯಿಟರ್ಸ್ ವರದಿ ಮಾಡಿದೆ.
ವರದಿಯು ಇತ್ತೀಚೆಗೆ ಉನ್ನತ ಪೊಲೀಸ್ ಅಧಿಕಾರಿಗಳ ಸಮ್ಮೇಳನದಲ್ಲಿ ‘ಬೇಲಿಯಿಲ್ಲದ ಭೂ ಗಡಿಗೆ ಸಂಬಂಧಿಸಿದ ಭದ್ರತಾ ಸಮಸ್ಯೆಗಳು’ ವಿಷಯದ ಅಡಿಯಲ್ಲಿ ಸಲ್ಲಿಸಲಾದ ಲಡಾಖ್ ಪೊಲೀಸರ ಹೊಸ ಗೌಪ್ಯ ಸಂಶೋಧನಾ ಪ್ರಬಂಧದ ಭಾಗವಾಗಿದೆ.
ಜನವರಿ 20-22 ರವರೆಗೆ ಗುಪ್ತಚರ ಇಲಾಖೆ (ಐಬಿ) ಆಯೋಜಿಸಿದ್ದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಿದ್ದರು.
ಗಡಿ ಪ್ರದೇಶಗಳಲ್ಲಿ ಸ್ಥಳೀಯ ಪೊಲೀಸರು ಸಂಗ್ರಹಿಸಿದ ಗುಪ್ತಚರ ಮತ್ತು ಭಾರತ-ಚೀನಾ ಮಿಲಿಟರಿ ಉದ್ವಿಗ್ನತೆಯ ಮಾದರಿಯನ್ನು ಆಧರಿಸಿದ ಮೌಲ್ಯಮಾಪನದಿಂದ ಲಡಾಖ್ ನಲ್ಲಿ ಎರಡು ರಾಷ್ಟ್ರಗಳ ನಡುವೆ ಹೆಚ್ಚಿನ ಚಕಮಕಿಗಳು ನಡೆಯಲಿವೆ ಎಂದು ಸೂಚಿಸುತ್ತದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
Related Articles
ಇದನ್ನೂ ಓದಿ:ಐಸಿಸಿ ವನಿತಾ ಟಿ20 ವಿಶ್ವಕಪ್: ಮತ್ತೊಂದು ಎತ್ತರಕ್ಕೆ ತಲುಪಿದ ವನಿತಾ ಕ್ರಿಕೆಟ್
2020ರಲ್ಲಿ ಲಡಾಖ್ ನಲ್ಲಿ ಭಾರತ ಮತ್ತು ಚೀನಿ ಸೈನಿಕರ ನಡುವೆ ನಡೆದಿದ್ದ ಸಂಘರ್ಷದಲ್ಲಿ ಕನಿಷ್ಠ 24 ಮಂದಿ ಸಾವನ್ನಪ್ಪಿದ್ದರು. ಆ ಬಳಿಕ ಕಳೆದ ಡಿಸೆಂಬರ್ ನಲ್ಲಿ ಅರುಣಾಚಲ ಪ್ರದೇಶದಲ್ಲಿ ಘರ್ಷಣೆ ನಡೆದಿತ್ತು.
ಚೀನೀ ಭಾಗದಲ್ಲಿ ಪಿಎಲ್ ಎ ಬೃಹತ್ ಮೂಲಸೌಕರ್ಯ ನಿರ್ಮಿಸುತ್ತಿದೆ. ಎರಡೂ ಸೇನೆಗಳು ಪರಸ್ಪರರ ಪ್ರತಿಕ್ರಿಯೆ, ಫಿರಂಗಿಗಳ ಶಕ್ತಿ ಮತ್ತು ಸೈನ್ಯದ ಸಜ್ಜುಗೊಳಿಸುವ ಸಮಯವನ್ನು ಪರೀಕ್ಷಿಸುತ್ತಿವೆ” ಎಂದು ರಾಯಿಟರ್ಸ್ ಹೇಳಿದೆ.