Advertisement

ಭಾರತ-ಇಂಗ್ಲೆಂಡ್‌: ಇಂದಿನಿಂದ ಟಿ20 ಹೋರಾಟ

12:45 AM Jul 07, 2022 | Team Udayavani |

ಸೌತಾಂಪ್ಟನ್‌: ಪ್ರಚಂಡ ಫಾರ್ಮ್ ನಲ್ಲಿರುವ ಇಂಗ್ಲೆಂಡ್‌ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ ಗುರುವಾರದಿಂದ ಆರಂಭವಾಗಲಿದೆ.

Advertisement

ಮುಂಬರುವ ವಿಶ್ವಕಪ್‌ಗಾಗಿ ಶ್ರೇಷ್ಠ ತಂಡವನ್ನು ಆಯ್ಕೆ ಮಾಡಲು ಈ ಸರಣಿ ಭಾರತದ ಪಾಲಿಗೆ ಅತ್ಯಂತ ಉಪಯುಕ್ತವಾಗಲಿದೆ. ಹಿನ್ನೆಲೆಯಲ್ಲಿ ಯಾವುದೇ ಪ್ರಯೋಗಕ್ಕೆ ಇಳಿಯದೇ ಬಲಿಷ್ಠ ತಂಡವನ್ನು ಕಣಕ್ಕೆ ಇಳಿಸುವ ಸಾಧ್ಯತೆಯಿದೆ.

ಕೋವಿಡ್‌-19 ಸೋಂಕಿಗೆ ಒಳಗಾದ ಅನಂತರ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಐದನೇ ಟೆಸ್ಟ್‌ ಕಳೆದು ಕೊಂಡಿದ್ದ ನಾಯಕ ರೋಹಿತ್‌ ಶರ್ಮ ಗುರುವಾರದ ಮೊದಲ ಟಿ20ಯಲ್ಲಿ ಕಾಣಿಸಿಕೊಳ್ಳುವ ನಿರೀಕ್ಷ ಯಿದೆ.

ಟೆಸ್ಟ್‌ ಆಟಗಾರರಾದ ವಿರಾಟ್‌ ಕೊಹ್ಲಿ, ಜಸ್‌ಪ್ರೀತ್‌ ಬುಮ್ರಾ, ರವೀಂದ್ರ ಜಡೇಜ, ಶ್ರೇಯಸ್‌ ಅಯ್ಯರ್‌ ಮತ್ತು ರಿಷಬ್‌ ಪಂತ್‌ ದ್ವಿತೀಯ ಪಂದ್ಯದ ವೇಳೆ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಅವರೆಲ್ಲರ ಅನುಪಸ್ಥಿತಿಯಿಂದಾಗಿ ಋತುರಾಜ್‌ ಗಾಯಕ್ವಾಡ್‌ ಮತ್ತು ಸಂಜು ಸ್ಯಾಮ್ಸನ್‌ ಅವರಿಗೆ ತಮ್ಮ ಸಾಮ ರ್ಥ್ಯವನ್ನು ಪ್ರದರ್ಶಿಸಲು ಇನ್ನೊಂದು ಅವಕಾಶ ಲಭಿಸಿದೆ. ಗುರುವಾರದ ಪಂದ್ಯದಲ್ಲಿ ಭರ್ಜರಿ ಆಟ ಆಡಿದರೆ ಮುಂದಿನ ಪಂದ್ಯಗಳಿಗೂ ಅವರನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ. ರೋಹಿತ್‌ ತಂಡಕ್ಕೆ ಮರಳಿದೆ ಗಾಯ ಕ್ವಾಡ್‌ ಅವರು ಇಶಾನ್‌ ಕಿಶನ್‌ ಜತೆ ಇನ್ನಿಂಗ್ಸ್‌ ಆರಂಭಿಸುವ ಸಾಧ್ಯತೆ ಕಡಿಮೆ. ಇಶಾನ್‌ ಕಿಶನ್‌ ತನಗೆ ಸಿಕ್ಕಿದ ಅವಕಾಶದಲ್ಲಿ ಉತ್ತಮ ನಿರ್ವಹಣೆಯನ್ನು ನೀಡಿದ್ದಾರೆ. ಹೀಗಾಗಿ ಅವರು ಮೀಸಲು ಆರಂಭಿಕರಾಗಿ ತಂಡದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ.

Advertisement

ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ತಂಡಕ್ಕೆ ಮರಳುವುದು ಖಚಿತ. ದೀಪಕ್‌ ಹೂಡಾ ಇನ್ನೊಮ್ಮೆ ಪಂದ್ಯ ಗೆಲ್ಲಿಸಿಕೊಡುವ ಸಾಮರ್ಥ್ಯ ಪ್ರದರ್ಶಿಸುವ ಗುರಿ ಇಟ್ಟುಕೊಂಡಿದ್ದಾರೆ. ಅಯರ್‌ಲ್ಯಾಂಡ್‌ ವಿರುದ್ಧ ಹೂಡಾ ಶತಕ ಮತ್ತು ಅಜೇಯ 47 ರನ್‌ ಗಳಿಸಿದ್ದರಿಂದ ಅವರ ಆಯ್ಕೆ ಬಗ್ಗೆ ತಂಡ ವ್ಯವಸ್ಥಾಪಕರಿಗೆ ಹೆಚ್ಚಿನ ಒತ್ತಡವಿದೆ.
ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಮೊದಲು ಭಾರತವು ಸುಮಾರು 15 ಟಿ20 ಪಂದ್ಯಗಳನ್ನು ಆಡಲಿದೆ. ಪ್ರಸ್ತುತ ಸರಣಿಯಲ್ಲಿ ಇಂಗ್ಲೆಂಡ್‌ ವಿರುದ್ಧ ಮೂರು, ವೆಸ್ಟ್‌ಇಂಡೀಸ್‌ ವಿರುದ್ಧ ಐದು (ಜುಲೈ 29-ಆ. 7), ಏಷ್ಯಾ ಕಪ್‌ನಲ್ಲಿ ಸುಮಾರು 5 ಮತ್ತು ಆಸ್ಟ್ರೇಲಿಯ ವಿರುದ್ಧ ಮೂರು ಪಂದ್ಯಗಳಲ್ಲಿ ಆಡಲಿದೆ.

ಮಾರ್ಗನ್‌ ನಿವೃತ್ತಿಯ ಅನಂತರ ಈ ಸರಣಿಯು ಬಟ್ಲರ್‌ ನಾಯಕತ್ವದಲ್ಲಿ ಇಂಗ್ಲೆಂಡಿನ ಮೊದಲ ಸರಣಿಯಾಗಿದೆ. ಈ ಸರಣಿಯಲ್ಲಿ ತಂಡ ಯಾವ ರೀತಿಯ ನಿರ್ವಹಣೆ ನೀಡುತ್ತದೆ ಎಂಬುದನ್ನು ನೋಡ ಬೇಕಾಗಿದೆ. ಬೆನ್‌ ಸ್ಟೋಕ್ಸ್‌ ಮತ್ತು ಜಾನಿ ಬೇರ್‌ಸ್ಟೋ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಬಟ್ಲರ್‌ ಮತ್ತು ಲಿಯಮ್‌ ಲಿವಿಂಗ್‌ಸ್ಟೋನ್‌ ತಂಡವನ್ನು ಆಧರಿಸುವ ಸಾಧ್ಯತೆಯಿದೆ.

ತಂಡಗಳು:
ಭಾರತ: ರೋಹಿತ್‌ ಶರ್ಮ (ನಾಯಕ), ಇಶಾನ್‌ ಕಿಶನ್‌, ಋತುರಾಜ್‌ ಗಾಯಕ್ವಾಡ್‌, ಸಂಜು ಸ್ಯಾಮ್ಸನ್‌, ಸೂರ್ಯಕುಮಾರ್‌ ಯಾದವ್‌, ದೀಪಕ್‌ ಹೂಡಾ, ರಾಹುಲ್‌ ತ್ರಿಪಾಠಿ, ದಿನೇಶ್‌ ಕಾರ್ತಿಕ್‌, ಹಾರ್ದಿಕ್‌ ಪಾಂಡ್ಯ, ವೆಂಕಟೇಶ್‌ ಅಯ್ಯರ್‌, ಯಜುವೇಂದ್ರ ಚಹಲ್‌, ಅಕ್ಷರ್‌ ಪಟೇಲ್‌, ರವಿ ಬಿಷ್ಣೋಯಿ, ಭುವನೇಶ್ವರ್‌ ಕುಮಾರ್‌, ಹರ್ಷಲ್‌ ಪಟೇಲ್‌, ಆವೇಶ್‌ ಖಾನ್‌, ಅರ್ಷದೀಪ್‌ ಸಿಂಗ್‌, ಉಮ್ರಾನ್‌ ಮಲಿಕ್‌.

ಇಂಗ್ಲೆಂಡ್‌: ಜಾಸ್‌ ಬಟ್ಲರ್‌ (ನಾಯಕ), ಮೊಯಿನ್‌ ಅಲಿ, ಹ್ಯಾರಿ ಬ್ರೂಕ್‌, ಸ್ಯಾಮ್‌ ಕರನ್‌, ರಿಚರ್ಡ್‌ ಗ್ಲೀಸನ್‌, ಕ್ರಿಸ್‌ ಜೋರ್ಡಾನ್‌, ಲಿಯಮ್‌ ಲಿವಿಂಗ್‌ಸ್ಟೋನ್‌, ಡೇವಿಡ್‌ ಮಾಲನ್‌, ಟೈಮಲ್‌ ಮಿಲ್ಸ್‌, ಮ್ಯಾಥ್ಯೂ ಪಾರ್ಕಿನ್ಸನ್‌, ಜಾಸನ್‌ ರಾಯ್‌, ಪಿಲ್‌ ಸಾಲ್ಟ್, ರೀ ಟೋಪ್ಲೆ, ಡೇವಿಡ್‌ ವಿಲ್ಲಿ.

ಪಂದ್ಯ ಆರಂಭ: ರಾತ್ರಿ 10.30ಕ್ಕೆ

Advertisement

Udayavani is now on Telegram. Click here to join our channel and stay updated with the latest news.

Next