Advertisement

ಮುಂದಿನ ವರ್ಷ ನಡೆಯಲಿದೆ ಭಾರತ-ಇಂಗ್ಲೆಂಡ್‌ 5ನೇ ಟೆಸ್ಟ್‌

10:43 PM Oct 22, 2021 | Team Udayavani |

ಲಂಡನ್‌: ಕೋವಿಡ್‌-19 ಕಾರಣ ಕಳೆದ ಇಂಗ್ಲೆಂಡ್‌ ಪ್ರವಾಸದ ವೇಳೆ 5ನೇ ಟೆಸ್ಟ್‌ ಪಂದ್ಯದಿಂದ ಭಾರತ ಹಿಂದೆ ಸರಿದದ್ದು ದೊಡ್ಡ ಸುದ್ದಿಯಾಗಿತ್ತು. ಈ ಟೆಸ್ಟ್‌ ಪಂದ್ಯಕ್ಕೀಗ ಕಾಲ ಕೂಡಿ ಬಂದಿದೆ. ಮುಂದಿನ ವರ್ಷದ ಜುಲೈಯಲ್ಲಿ ಈ ಪಂದ್ಯವನ್ನು ಆಯೋಜಿಸಲಾಗುವುದು ಎಂದು ಇಸಿಬಿ ತಿಳಿಸಿದೆ.

Advertisement

2022ರ ಜುಲೈಯಲ್ಲಿ ಭಾರತ ತಂಡ ಸೀಮಿತ ಓವರ್‌ ಪಂದ್ಯಗಳ ಸರಣಿಗಾಗಿ ಇಂಗ್ಲೆಂಡಿಗೆ ಆಗಮಿಸಲಿದೆ. ಈ ಸಂದ ರ್ಭದಲ್ಲಿ ಉಳಿದೊಂದು ಟೆಸ್ಟ್‌ ಪಂದ್ಯವನ್ನು ನಡೆಸಿ ಸರಣಿಯನ್ನು ಪರಿಪೂರ್ಣಗೊಳಿಸಲಾಗುವುದು. ಇದಕ್ಕೆ ಬಿಸಿಸಿಐ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಇಸಿಬಿ ಶುಕ್ರವಾರ ಪ್ರಕಟಿಸಿದೆ.

ಈ ಟೆಸ್ಟ್‌ ಪಂದ್ಯ ಜುಲೈ ಒಂದ ರಂದು ಆರಂಭವಾಗಲಿದೆ. ಆದರೆ ಪಂದ್ಯದ ತಾಣವನ್ನು ಮ್ಯಾಂಚೆಸ್ಟರ್‌ನಿಂದ ಎಜ್‌ಬಾಸ್ಟನ್‌ಗೆ ಸ್ಥಳಾಂತರಿ ಸಲಾಗಿದೆ. 5 ಪಂದ್ಯಗಳ ಸರಣಿಯಲ್ಲಿ ಭಾರತ 2-1 ಮುನ್ನಡೆಯಲ್ಲಿದೆ.

ಇದನ್ನೂ ಓದಿ:ಎರಡೂ ಡೋಸ್‌ ಲಸಿಕೆ ಪಡೆದವರಿಗಷ್ಟೇ ಹಜ್‌ ಯಾತ್ರೆಗೆ ಅನುಮತಿ

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next