ಅಹಮದಾಬಾದ್: ಆಸ್ಟ್ರೇಲಿಯ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಅಂತ್ಯಕ್ಕೆ ಭಾರತ ತನ್ನ ಮೊದಲ ಇನಿಂಗ್ಸ್‌ನಲ್ಲಿ 3 ವಿಕೆಟ್ ನಷ್ಟಕ್ಕೆ 289 ರನ್ ಗಳಿಸಿದೆ. ಆತಿಥೇಯರು ಇನ್ನೂ 191 ರನ್‌ಗಳಿಂದ ಹಿನ್ನಡೆಯಲ್ಲಿದೆ.
ಭರ್ಜರಿ ಶತಕ ಸಿಡಿಸಿದ ಶುಭಮನ್ ಗಿಲ್ ತಮ್ಮ ಎರಡನೇ ಟೆಸ್ಟ್ ಶತಕ (128) ಬಾರಿಸಿದರು.235 ಎಸೆತಗಳಲ್ಲಿ12 ಬೌಂಡರಿ ಮತ್ತು 1 ಸಿಕ್ಸರ್ ಅವರ ಇನ್ನಿಂಗ್ಸ್ ನಲ್ಲಿ ಸೇರಿತ್ತು. ಲಿಯಾನ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಗೆ ಔಟಾದರು. ಚೇತೇಶ್ವರ ಪೂಜಾರ (42) ಮತ್ತು ರೋಹಿತ್ ಶರ್ಮಾ (35) ರನ್ ಗಳಿಸಿ ಔಟಾದರು. 59 ರನ್ ಗಳಿಸಿರುವ ವಿರಾಟ್ ಕೊಹ್ಲಿ ಮತ್ತು 16 ರನ್ ಗಳಿಸಿರುವ ರವೀಂದ್ರ ಜಡೇಜಾ ನಾಲ್ಕನೇ ದಿನದಾಟ ಆರಂಭಿಸಲಿದ್ದಾರೆ.
ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 480 ರನ್ ಗಳಿಸಿತ್ತು.