Advertisement

ಭಾರತಕ್ಕೆ ವಿಟೋ ಅಧಿಕಾರ ಏಕಿಲ್ಲ?

08:15 AM Feb 18, 2018 | |

ಹೊಸದಿಲ್ಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಅಮೆರಿಕಕ್ಕೆ ಇರುವ ವಿಟೋ ಅಧಿಕಾರ ಭಾರತಕ್ಕೆ ಏಕೆ ಇಲ್ಲ ಎಂದು ಇರಾನ್‌ ಅಧ್ಯಕ್ಷ ಹಸನ್‌ ರೊಹಾನಿ ಪ್ರಶ್ನಿಸಿದ್ದಾರೆ. ಹೊಸದಿಲ್ಲಿಯಲ್ಲಿ ಇರಾನ್‌ ರಾಯಭಾರ ಕಚೇರಿ ಶನಿವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೆಲವೇ ಕೆಲವು ರಾಷ್ಟ್ರಗಳ ಕೈಯಲ್ಲಿ ಇಂಥ ಅಧಿಕಾರ ಇದೆ. ಇದು ಎಂಥ ಜಾಗತಿಕ ವ್ಯವಸ್ಥೆ ಎಂದು ಪ್ರಶ್ನಿಸಿದರು. ಅಂಥ ಅಧಿಕಾರ ಇರುವ ರಾಷ್ಟ್ರಗಳ ಕೈಯಲ್ಲಿ ಪರಮಾಣು ಶಸ್ತ್ರಾಸ್ತ್ರಗಳಿವೆ ಎಂದು ಪರೋಕ್ಷವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳನ್ನು ಚುಚ್ಚಿದರು. 

Advertisement

ಇರಾನ್‌ನ ವಿದೇಶಿ ನೀತಿಯ ಬಗ್ಗೆ ಮಾತನಾಡಿದ ಅವರು, ಉತ್ತಮ ವಿದೇಶಾಂಗ ನೀತಿ ಹೊಂದಿರಬೇಕಾದರೆ ನೀತಿಗಳು ರಾಷ್ಟ್ರೀಯ ಹಿತಾಸಕ್ತಿಗಿಂತ ಮೇಲ್‌ಸ್ತರದಲ್ಲಿರಬೇಕು ಎಂದು ಹೇಳಿದ್ದಾರೆ. ಎಲ್ಲಾ ದೇಶಗಳಿಗೆ ಸಮನಾಗಿ ನ್ಯಾಯ ಸಿಗದೇ ಇದ್ದರೆ ಯುದ್ಧ, ದಾಳಿ ಮುಂದುವರಿಯುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಮೆರಿಕ ಸರಕಾರಕ್ಕೆ ನೇರ ಎಚ್ಚರಿಕೆ ಸಂದೇಶ ರವಾನಿಸಿದ ಇರಾನ್‌ ಅಧ್ಯಕ್ಷ ಹಸನ್‌ ರೊಹಾನಿ, ಸಿರಿಯಾ ವ್ಯವಹಾರದಲ್ಲಿ ಅಮೆರಿಕ ವಿನಾಕಾರಣ ಹಸ್ತಕ್ಷೇಪ ಮಾಡುತ್ತಿದೆ ಎಂದು ಟೀಕಿಸಿದರು. ಉಗ್ರ ಸಂಘಟನೆ ಐಸಿಸ್‌ ಅಮೆರಿಕಕ್ಕೇ ಬೆದರಿಕೆಯಾಗಿದೆ ಎಂದಿದ್ದಾರೆ.

“ಅಮೆರಿಕ ಜತೆ ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿ ತಡೆ ಬಗ್ಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈಗ ಅವರ ಅಹಂಕಾರಕ್ಕೆ ಅವಕಾಶವೇ ಇಲ್ಲ’ ಎಂದು ಹೇಳಿದ್ದಾರೆ. ಒಂದು ವೇಳೆ ಅವರೇ ಒಪ್ಪಂದ ಉಲ್ಲಂ ಸಿದರೆ ವಿಷಾದಿಸುವ ದಿನ ಬರಲಿದೆ ಎಂದು ಎಚ್ಚರಿಸಿದ್ದಾರೆ. 

ಭಯೋತ್ಪಾದನೆ ವಿರುದ್ಧ ಸಮರ: ಮಾತುಕತೆ ಬಳಿಕ ಜಂಟಿ ಪತ್ರಿಕಾಗೋಷ್ಠಿ ನಡೆಸಿದ  ಪ್ರಧಾನಿ ಮೋದಿ ಹಾಗೂ ಇರಾನ್‌ ಅಧ್ಯಕ್ಷ ಹಸನ್‌ ರೊಹಾನಿ, ಭಯೋತ್ಪಾದನೆ ವಿರುದ್ಧ ಸಮರಕ್ಕೆ ನಾವು ಬದ್ಧರಾಗಿದ್ದು, ಉಗ್ರವಾದವನ್ನು ಹಾಗೂ ಅದಕ್ಕೆ ಬೆಂಬಲ ಕೊಡುವವರನ್ನು ಖಂಡಿಸುತ್ತೇವೆ ಎಂದು ಘೋಷಿಸಿದರು. “ವಿಶ್ವವೇ ಭಯೋತ್ಪಾದನೆಯಿಂದ ಮುಕ್ತಿ ಪಡೆಯಬೇಕು. ಸೈಬರ್‌ ಅಪರಾಧ, ತೀವ್ರವಾದಿತ್ವ , ಭಯೋತ್ಪಾದನೆ ಮತ್ತು ಇತರ ಅಂತಾರಾಷ್ಟ್ರೀಯ ಸಂಘಟಿತ ಅಪರಾಧಗಳ ವಿರುದ್ಧ ಹೋರಾಟ ನಡೆಸಲು ತೀರ್ಮಾನಿಸಿದ್ದೇವೆ’ ಎಂದು ಪ್ರಧಾನಿ ಮೋದಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next