Advertisement

ಸಮರಾಭ್ಯಾಸ ನಿರ್ಣಯ ಹಕ್ಕು ಚೀನಾಕ್ಕಿಲ್ಲ: ಕೇಂದ್ರ

08:30 PM Dec 01, 2022 | Team Udayavani |

ನವದೆಹಲಿ: ಭಾರತ ಯಾರ ಜತೆಗೆ ಸಮರಾಭ್ಯಾಸ ನಡೆಸಬೇಕು, ಬೇಡ ಎಂದು ಹೇಳುವ ವಿಟೋ ಅಧಿಕಾರ ಚೀನಾಕ್ಕೆ ಇಲ್ಲ. ಆ ದೇಶ ಮೊದಲು ತಾನು ಯಾವ ಹಂತಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿದೆ ಎಂಬ ಬಗ್ಗೆ ವಿಚಾರಿಸಿಕೊಳ್ಳಲಿ ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ.

Advertisement

ಅಮೆರಿಕದ ಜತೆಗೆ ಉತ್ತರಾಖಂಡದ ಔಲಿಯಲ್ಲಿ ನಡೆಯುತ್ತಿರುವ ಸಮರಾಭ್ಯಾಸಕ್ಕೆ ಚೀನಾ ಆಕ್ಷೇಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಂ ಬಗಚಿ ಸಮರಾಭ್ಯಾಸ ಹಾಗೂ 1993 ಮತ್ತು 1996 ಒಪ್ಪಂದಗಳಿಗೂ ಯಾವುದೇ ಸಂಬಂಧ ಇಲ್ಲ. ಯಾರ ಜತೆಗೆ ಭಾರತ ಸಮರಾಭ್ಯಾಸ ನಡೆಸಬೇಕು ಎಂದು ನಿರ್ಧಾರ ಮಾಡುವ ಆ ದೇಶಕ್ಕೆ ಇಲ್ಲವೆಂದಿದ್ದಾರೆ.

ಇದೇ ವೇಳೆ ಚೀನಾದಲ್ಲಿ ಕೊರೊನಾ ನಿಯಮಗಳ ವಿರುದ್ಧದ ಪ್ರತಿಭಟನೆಗಳ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಅವರು,  ಆ ದೇಶದ ಕೊರೊನಾ ನಿಯಂತ್ರಣ ಕ್ರಮಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next