Advertisement

ಭಾರತ ಅಪಾಯಕಾರಿ ತಂಡ: ಥಾಮಸ್‌ ಬ್ರಿಲ್ಸ್‌

10:11 AM Feb 07, 2020 | Team Udayavani |

ಭುವನೇಶ್ವರ: ತವರಿನಂಗಳದಲ್ಲಿ ಭಾರತ ಹೆಚ್ಚು ಅಪಾಯಕಾರಿ ತಂಡವಾಗಿ ಗೋಚರಿಸಲಿದೆ ಎಂಬುದಾಗಿ ವಿಶ್ವ ಚಾಂಪಿಯನ್‌ ಬೆಲ್ಜಿಯಂ ಹಾಕಿ ತಂಡದ ನಾಯಕ ಥಾಮಸ್‌ ಬ್ರಿಲ್ಸ್‌ ಅಭಿಪ್ರಾಯ ಪಟ್ಟಿದ್ದಾರೆ. ಎಫ್ಐಎಚ್‌ ಹಾಕಿ ಪ್ರೊ ಲೀಗ್‌ ಪಂದ್ಯಾವಳಿಗಾಗಿ ಭಾರತಕ್ಕೆ ಬಂದಿಳಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತಾಡುತ್ತಿದ್ದರು.

Advertisement

“ನೆದರ್ಲೆಂಡ್ಸ್‌ ಎದುರಿನ ಆರಂಭಿಕ ಲೀಗ್‌ನಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿತ್ತು. ಇದು ಭಾರತದ ಮನೋಬಲವನ್ನು ಹೆಚ್ಚಿಸಿದೆ. ನಮ್ಮ ಪಾಲಿಗೆ ಎಚ್ಚರಿಕೆಯ ಗಂಟೆಯಾಗಿದೆ’ ಎಂದು ಬ್ರಿಲ್ಸ್‌ ಹೇಳಿದರು.

“ಭಾರತ ಅತ್ಯಂತ ಚುರುಕಿನ ಆಟವಾಡು ತ್ತಿದೆ. ಅವರ ಡಚ್ಚರೆದುರಿನ ಕಾದಾಟವನ್ನು ಕಂಡಿದ್ದೇವೆ. ಹೀಗಾಗಿ ಅವರು ನಮಗೂ ದೊಡ್ಡ ಸವಾಲಾಗುವುದರಲ್ಲಿ ಅನುಮಾನ ವಿಲ್ಲ. ಭಾರತವೊಂದು ಕಠಿನ ಎದುರಾಳಿ. ಆದರೆ ಇಂಥ ಕಠಿನ ಸ್ಪರ್ಧಿಗಳೆದುರು ಆಡಲು ನಾವು ಕಾದು ಕುಳಿತಿದ್ದೇವೆ. ಇದರಿಂದ ಮುಂಬರುವ ಒಲಿಂಪಿಕ್ಸ್‌ ವೇಳೆ ನಮ್ಮ ಆಟದಲ್ಲಿ ಸುಧಾರಣೆ ಆಗಲಿದೆ. ಪ್ರೊ ಲೀಗ್‌ ಟೂರ್ನಿ ಟೋಕಿಯೊ ಒಲಿಂಪಿಕ್ಸ್‌ ಸಿದ್ಧತೆಗೆ ಅತ್ಯುತ್ತಮ ವೇದಿಕೆ’ ಎಂಬುದು ಬೆಲ್ಜಿಯಂ ಕಪ್ತಾನನ ಅನಿಸಿಕೆ.

ಬೆಲ್ಜಿಯಂ ಇದಕ್ಕೂ ಮೊದಲು ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್‌ ವಿರುದ್ಧ ಅವರದೇ ಅಂಗಳದಲ್ಲಿ ಜಯ ಸಾಧಿ ಸಿದ ವಿಶ್ವಾಸದಲ್ಲಿದ್ದರೂ ಭಾರತ ದೆದುರಿನ ಸವಾಲು ಭಿನ್ನ ಎಂಬುದಾಗಿ ಬ್ರಿಲ್ಸ್‌ ಅಭಿಪ್ರಾಯಪಟ್ಟಿದ್ದಾರೆ. ಕೋಚ್‌ ಶೇನ್‌ ಮೆಕ್‌ಲಿಯೋಡ್‌ ಕೂಡ ಬ್ರಿಲ್ಸ್‌ ಅಭಿ ಪ್ರಾಯವನ್ನು ಸಮರ್ಥಿಸಿದರು.

ಸ್ಮರಣೀಯ ತಾಣ
ಭಾರತ-ಬೆಲ್ಜಿಯಂ ನಡುವಿನ ಪಂದ್ಯ ಫೆ. 8 ಮತ್ತು 9ರಂದು “ಕಳಿಂಗ ಸ್ಟೇಡಿಯಂ’ ನಲ್ಲಿ ನಡೆಯಲಿದೆ. ಭುವನೇಶ್ವರದ ಈ ಸ್ಟೇಡಿಯಂನಲ್ಲೇ ಬೆಲ್ಜಿಯಂ 2018ರಲ್ಲಿ ತನ್ನ ಮೊದಲ ವಿಶ್ವಕಪ್‌ ಕಿರೀಟವನ್ನು ಏರಿಸಿಕೊಂಡಿತ್ತು!

Advertisement

“ಮತ್ತೆ ಭುವನೇಶ್ವರಕ್ಕೆ ಮರಳಿದ್ದೇವೆ. ನಮ್ಮ ಸ್ಮರಣೀಯ ನೆನಪುಗಳ ಗಣಿ ಇದಾಗಿದೆ. ಇಲ್ಲಿನ ಟಫ್ì ಮೇಲೆ ಕಾಲಿಡುತ್ತಿದ್ದಂತೆಯೇ ನೆನಪುಗಳೆಲ್ಲ ಉಕ್ಕಿ ಬರಲಿದೆ. ಇದು ವಿಶ್ವದ ಅತ್ಯುತ್ತಮ ಹಾಕಿ ಸ್ಟೇಡಿಯಂಗಳಲ್ಲಿ ಒಂದು’ ಎಂದೂ ಬ್ರಿಲ್ಸ್‌ ಪ್ರಶಂಸಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next