Advertisement

ದೇಶಕ್ಕೆ ಕಾದಿದೆ ಬಿಸಿಗಾಳಿ ಆಪತ್ತು; ಮಾನವನ ಮಿತಿಗಿಂತ ಹೆಚ್ಚಿನ ಶಾಖ

10:29 PM Dec 07, 2022 | Team Udayavani |

ತಿರುವನಂತಪುರ: ಮುಂದಿನ ದಿನಗಳಲ್ಲಿ ಮಾನವನ ಶಾಖ ತಡೆದುಕೊಳ್ಳುವ ಮಿತಿಗಿಂತ ಹೆಚ್ಚಿನ ಶಾಖವನ್ನು ದೇಶದ ಜನರು ಅನುಭವಿಸಲಿದ್ದಾರೆ ಎನ್ನುವ ಎಚ್ಚರಿಕೆಯನ್ನು ವಿಶ್ವಬ್ಯಾಂಕ್‌ ವರದಿ ನೀಡಿದೆ.

Advertisement

“ಭಾರತದ ತಂಪಾಗಿಸುವ ವಲಯದಲ್ಲಿನ ಹವಾಮಾನ ಹೂಡಿಕೆಯ ಅವಕಾಶಗಳು’ ಎಂಬ ಶೀರ್ಷಿಕೆಯ ವಿಶ್ವ ಬ್ಯಾಂಕ್‌ ವರದಿಯು, ಮುಂಬರುವ ದಿನಗಳಲ್ಲಿ ದೇಶವು ಹೆಚ್ಚಿನ ತಾಪಮಾನವನ್ನು ಅನುಭವಿಸಲಿದೆ ಎಂದು ಹೇಳಿದೆ.

“2022ರ ಏಪ್ರಿಲ್‌ನಲ್ಲಿ, ಭಾರತವು ಬಿಸಿಗಾಳಿಯ ತೀವ್ರತೆಯನ್ನು ಅನುಭವಿಸಿತ್ತು. ರಾಜಧಾನಿ ನವದೆಹಲಿಯಲ್ಲಿ ತಾಪಮಾನವು 46 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿತ್ತು. ಮಾರ್ಚ್‌ನಲ್ಲೂ ಹೆಚ್ಚು ತಾಪಮಾನ ದಾಖಲಾಗಿತ್ತು,’ ಎಂದು ವರದಿ ಹೇಳಿದೆ.

ಕೇರಳ ಸರ್ಕಾರದ ಸಹಭಾಗಿತ್ವದಲ್ಲಿ ವಿಶ್ವಬ್ಯಾಂಕ್‌ ಆಯೋಜಿಸಿರುವ ಎರಡು ದಿನಗಳ ಭಾರತದ ಹವಾಮಾನ ಮತ್ತು ಅಭಿವೃದ್ಧಿ ಪಾಲುದಾರರ ಸಭೆ ಯಲ್ಲಿ ಈ ವರದಿಯನ್ನು ಬಿಡುಗಡೆ ಮಾಡಲಾಗುತ್ತದೆ.

ಭಾರತದಲ್ಲಿ ಬಿಸಿಗಾಳಿಯ ಪರಿಸ್ಥಿತಿಯು ಮಾನವನ ಬದುಕುಳಿಯುವ ಮಿತಿಯನ್ನು ಮೀರಬಹುದು. ದಕ್ಷಿಣ ಏಷ್ಯಾದಾದ್ಯಂತ ತಾಪಮಾನ ಹೆಚ್ಚಳದ ಬಗ್ಗೆ ಅನೇಕ ಹವಾಮಾನ ವಿಜ್ಞಾನಿಗಳು ದೀರ್ಘ‌ಕಾಲದಿಂದ ಎಚ್ಚರಿಕೆ ನೀಡುತ್ತಾ ಬಂದಿದ್ದಾರೆ. ತೀವ್ರ ಬಿಸಿಗಾಳಿಯೂ ಈಗ ಅದನ್ನು ಸಾಬೀತು ಮಾಡಿದೆ ಎಂದು ವರದಿ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next