Advertisement

ಅಗ್ನಿ III ಅಣ್ವಸ್ತ್ರ ಕ್ಷಿಪಣಿ ಯಶಸ್ವೀ ರಾತ್ರಿ ಪರೀಕ್ಷೆ

09:56 AM Dec 02, 2019 | Hari Prasad |

ಭುವನೇಶ್ವರ: ಅಣ್ವಸ್ತ್ರವನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿರುವ ಅಗ್ನಿ- III ಬ್ಯಾಲಿಸ್ಟಿಕ್ ಕ್ಷಿಪಣಿಯ ಪರೀಕ್ಷೆಯನ್ನು ಒಡಿಸ್ಸಾದ ಸಮುದ್ರ ತೀರದಲ್ಲಿ ಯಶಸ್ವಿಯಾಗಿ ಪ್ರಯೋಗಿಸಲಾಗಿದೆ. ಈ ಪರೀಕ್ಷೆಯ ಇನ್ನೊಂದು ವಿಶೇಷವೆಂದರೆ ರಾತ್ರಿ ವೇಳೆಯಲ್ಲಿ ಈ ಪರೀಕ್ಷೆಯನ್ನು ನಡೆಸಿರುವುದು. ಇದರಿಂದಾಗಿ ನಮ್ಮ ಸಶಸ್ತ್ರ ಪಡೆಗಳಿಗೆ ಇನ್ನಷ್ಟು ವಿಶೇಷ ಬಲ ಬಂದಂತಾಗಿದೆ.

Advertisement

ಸುಮಾರು 3000 ದಿಂದ 5000 ಕಿಲೋ ಮೀಟರ್ ದೂರಕ್ಕೆ ನೆಗೆಯಬಲ್ಲ ಸಾಮರ್ಥ್ಯವನ್ನು ಹೊಂದಿರುವ ಈ ಕ್ಷಿಪಣಿಯನ್ನು ನಮ್ಮ ಸಶಸ್ತ್ರಪಡೆಗಳಿಗೆ 2011ರ ಜೂನ್ ತಿಂಗಳಲ್ಲೇ ಸೇರ್ಪಡೆಗೊಳಿಸಲಾಗಿತ್ತು. ಸುಮಾರು 1.5 ಟನ್ ತೂಕದ ಸಾಂಪ್ರದಾಯಿಕ ಮತ್ತು ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಅಗ್ನಿ III ಕ್ಷಿಪಣಿಯು ಹೊಂದಿದೆ. ಈ ಕ್ಷಿಪಣಿಯನ್ನು ಇದೀಗ ರಾತ್ರಿವೇಳೆ ಯಶಸ್ವಿಯಾಗಿ ಹಾರಿಸಿ ಪರೀಕ್ಷಿಸುವ ಮೂಲಕ ಭವಿಷ್ಯದಲ್ಲಿನ ರಾತ್ರಿ ದಾಳಿಗಳಿಗೆ ಸೇನೆಗೆ ಇನ್ನಷ್ಟು ಬಲ ಬಂದಂತಾಗಿದೆ.

20 ವೀಟರ್ ಉದ್ದದ ಎರಡು ಹಂತದ ಅಗ್ನಿ ಕ್ಷಿಪಣಿಯು 2000 ಕಿಲೋಮೀಟರ್ ದೂರಕ್ಕೆ ದಾಳಿ ಸಾಮರ್ಥ್ಯವನ್ನು ಹೊಂದಿದೆ. ಉಡ್ಡಯನ ಸಂದರ್ಭದಲ್ಲಿ ಇದರ ತೂಕ 17 ಟನ್ ಗಳಷ್ಟಿತ್ತು ಮತ್ತು 1000 ಕಿಲೋ ತೂಕದ ಬಾಂಬ್ ಗಳನ್ನು ಹೊತ್ತೊಯ್ಯುವಸಾಮರ್ಥ್ಯವನ್ನು ಈ ಕ್ಷಿಪಣಿಯು ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next