Advertisement

ಗೋಗ್ರಾ- ಹಾಟ್‌ಸ್ಪ್ರಿಂಗ್ಸ್‌ನಿಂದ ಸೇನೆ ವಾಪಸ್‌

12:47 AM Sep 09, 2022 | Team Udayavani |

ಹೊಸದಿಲ್ಲಿ: ಪೂರ್ವ ಲಡಾಖ್‌ನ ಗೋಗ್ರಾ- ಹಾಟ್‌ಸ್ಪ್ರಿಂಗ್ಸ್‌ ಪ್ರದೇಶದಿಂದ ಭಾರತ- ಚೀನ ಹಿಂದೆ ಸರಿಯುವ ಪ್ರಕ್ರಿಯೆ ಆರಂಭಿಸಿವೆ. ಈ ಮೂಲಕ ಗಸ್ತು ಕೇಂದ್ರ 15ರಲ್ಲಿ 2 ವರ್ಷಗಳಿಂದಲೂ ಮುಂದುವರಿದಿದ್ದ ಸಂಘರ್ಷಕ್ಕೆ ಅಂತ್ಯ ಹಾಡಿದಂತಾಗಿದೆ.

Advertisement

ಜುಲೈಯಲ್ಲಿ ಎರಡೂ ದೇಶಗಳ ಮಧ್ಯೆ ನಡೆದಿದ್ದ 16ನೇ ಸುತ್ತಿನ ಮಾತುಕತೆಯ ಫ‌ಲವೆಂಬಂತೆ ಸೆ. 8ರಿಂದ ಉಭಯ ಪಡೆಗಳೂ ಗೋಗ್ರಾ-ಹಾಟ್‌ಸ್ಪ್ರಿಂಗ್ಸ್‌ನಿಂದ ಯೋಜನಾಬದ್ಧವಾಗಿ ವಾಪಸಾಗಲು ಆರಂಭಿಸಿವೆ ಎಂದು ಉಭಯ ಸೇನೆಗಳು ಗುರುವಾರ ಬಿಡುಗಡೆ ಮಾಡಿರುವ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

ಉಜ್ಬೇಕಿಸ್ಥಾನದಲ್ಲಿ ಶಾಂಘೈ ಸಹಕಾರ ಸಂಘ(ಎಸ್‌ಸಿಒ)ದ ಶೃಂಗಸಭೆಗೆ ಒಂದು ವಾರ ಬಾಕಿಯಿರುವಾಗ ಈ ಘೋಷಣೆ ಹೊರಬಿದ್ದಿದೆ. ಶೃಂಗದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಭಾಗಿಯಾಗುವರು.  ಅಂದು ಉಭಯ ನಾಯಕರ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯುವ ಸಾಧ್ಯತೆಯೂ ಇದೆ. ಈ ಹಿಂದೆಯೇ ಲಡಾಖ್‌ನ ಗಾಲ್ವಾನ್‌ಪ್ರದೇಶ, ಪಾಂಗಾಂಗ್‌ ಸರೋವರ ಪ್ರದೇಶದಿಂದ ಎರಡೂ ಸೇನೆಗಳು ವಾಪಸಾಗಿವೆ. ಡೆಪ್ಸಾಂಗ್‌ ಪ್ರದೇಶದ ಉತ್ತರ ಭಾಗದಿಂದ ಮಾತ್ರ ಚೀನ ಸೇನೆ ಇನ್ನೂ ಹಿಂದೆಸರಿದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next