Advertisement
ನಾಲ್ಕು ವರ್ಷಗಳ ಹಿಂದಷ್ಟೇ ಶ್ರೀಲಂಕಾದಲ್ಲಿ ಮಟ್ಟಲ ರಾಜಪಕ್ಷೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ರಾಜಧಾನಿ ಕೊಲಂಬೋದಿಂದ 250 ಕಿ.ಮೀ. ದೂರದಲ್ಲಿರುವ ಹಂಬಂತೋಟದಲ್ಲಿ ಚೀನ ನಿರ್ಮಾಣ ಮಾಡಿತ್ತು. ಈ ವಿಮಾನ ನಿಲ್ದಾಣದ ಶೇ. 90ರಷ್ಟು ವೆಚ್ಚವನ್ನು ಚೀನ ಭರಿಸಿದ್ದರೆ, ಶೇ. 10 ವೆಚ್ಚವನ್ನು ಶ್ರೀಲಂಕಾ ಭರಿಸಿತ್ತು. ಚೀನ ಒಟ್ಟು 19 ಕೋಟಿ ಡಾಲರ್ (1,200 ಕೋಟಿ ರೂ.) ವೆಚ್ಚ ಮಾಡಿತ್ತು. ಈಗ ವಿಮಾನ ನಿಲ್ದಾಣ ನಷ್ಟದಲ್ಲಿ ನಡೆ ಯುತ್ತಿದೆ. ಚೀನದ ಎಕ್ಸಿಮ್ ಬ್ಯಾಂಕ್‌ನಿಂದ ಪಡೆದ ಭಾರೀ ಮೊತ್ತದ ಸಾಲ ಮರುಪಾವತಿ ಮಾಡಲು ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ವಿಮಾನ ನಿಲ್ದಾಣವನ್ನು ಭಾರತಕ್ಕೆ ಹಸ್ತಾಂತರಿಸಲು ನಿರ್ಧರಿಸಿದ್ದು, ಭಾರತವು ಚೀನ ಸಾಲವನ್ನು ಮರುಪಾವತಿ ಮಾಡಲಿದೆ. ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ಹೇಳಲಾಗಿದೆ.
ಸಾಗರದ ಈ ಬಂದರನ್ನು ಚೀನ ಅಭಿವೃದ್ಧಿಪಡಿಸುತ್ತಿರು ವುದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಅಲ್ಲದೆ ಇದು ಭಾರತದ ಭದ್ರತೆಗೂ ಆತಂಕದ್ದಾಗಿದೆ. ಇನ್ನೊಂದೆಡೆ ಚೀನದ ಮಹತ್ವಾಕಾಂಕ್ಷಿ ವನ್ ಬೆಲ್ಟ್ ವನ್ ರೋಡ್ ಯೋಜನೆ ಅಡಿಯಲ್ಲಿ ಹಂಬಂತೋಟ ವಿಮಾನ ನಿಲ್ದಾಣವನ್ನೂ ಸಂಪರ್ಕಿಸುವ ಬಗ್ಗೆ ಶ್ರೀಲಂಕಾ ಜತೆ ಚೀನ ಮಾತುಕತೆ ನಡೆಸುತ್ತಿತ್ತು. ಸಾಲದ ಸುಳಿಯಲ್ಲಿ ಶ್ರೀಲಂಕಾ: ಈ ವಿಮಾನ ನಿಲ್ದಾಣದ ಮೂಲಕ ಶ್ರೀಲಂಕಾವನ್ನು ಚೀನ ಸಾಲದ ಸುಳಿಗೆ ಸಿಲುಕಿಸಲು ಪ್ರಯತ್ನಿಸಿದೆ ಎಂಬ ಆರೋಪವೂ ಇದೆ. ಯೋಜನೆಗಾಗಿ ಚೀನದಿಂದ ಒಟ್ಟು 1,900 ಕೋಟಿ ರೂ. ಸಾಲ ಪಡೆಯಲಾಗಿದೆ. ಸಾಲದ ಬಡ್ಡಿ ದರ ಶೇ. 6.3. ಆದರೆ ವಿಶ್ವಬ್ಯಾಂಕ್ ಮತ್ತು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ನೀಡುವ ಸಾಲಕ್ಕೆ ಕೇವಲ ಶೇ. 0.25ರಿಂದ ಶೇ. 3 ಬಡ್ಡಿ ವಿಧಿಸುತ್ತವೆ. ಇನ್ನು ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೀಡುವ ಸಾಲಕ್ಕೆ ಶೇ. 1ರಷ್ಟು ಬಡ್ಡಿ ವಿಧಿಸುತ್ತದೆ. ಅಷ್ಟೇ ಅಲ್ಲ ಶ್ರೀಲಂಕಾ ಒಟ್ಟು 4.20 ಲಕ್ಷ ಕೋಟಿ ರೂ. ಅಂತಾರಾಷ್ಟ್ರೀಯ ಸಾಲ ಹೊಂದಿದೆ. ಈ ಪೈಕಿ ಚೀನದಿಂದ 50 ಸಾವಿರ ಕೋಟಿ ರೂ. ಸಾಲ ಪಡೆದಿದೆ.
Related Articles
ವಿಮಾನ ನಿಲ್ದಾಣವನ್ನು ಭಾರತ ತನ್ನ ವಶಕ್ಕೆ ಪಡೆಯುವುದರಿಂದ ಚೀನಕ್ಕೆ ಕಠಿನ ಸಂದೇಶ ರವಾನೆಯಾಗುತ್ತದೆ. ದಕ್ಷಿಣ ಏಷ್ಯಾದ ಎಲ್ಲ ದೇಶ ಗಳನ್ನೂ ತನ್ನ ಬುಟ್ಟಿಗೆ ಹಾಕಿಕೊಳ್ಳುವ ಚೀನದ ನೀತಿಗೆ ಇದು ಭಾರೀ ಹೊಡೆತ. ಡೋಕ್ಲಾಮ್‌ನಲ್ಲಿ ಚೀನವನ್ನು ಹಿಮ್ಮೆಟ್ಟಿಸಿದ ಅನಂತರ ನೆರೆ ರಾಷ್ಟ್ರಗಳು ಚೀನ ಮತ್ತು ಭಾರತದೊಂದಿಗೆ ಸಮ
ತೋಲನ ಕಾಯ್ದುಕೊಳ್ಳಲು ನಿರ್ಧರಿಸಿವೆ. ಭಾರತದ ಸುತ್ತಲೂ ಮೂಲಸೌಕರ್ಯ ಅಭಿವೃದ್ಧಿಯ ನೆಪ ಹೇಳಿ ವ್ಯೂಹಾತ್ಮಕ ಆಸ್ತಿ ನಿರ್ಮಿಸುವ ಚೀನದ ತಂತ್ರಕ್ಕೆ ಭಾರತವು ಸರಿ ಯಾಗಿಯೇ ಪ್ರತಿತಂತ್ರ ರೂಪಿಸಿದಂತಾಗಿದೆ.
Advertisement