Advertisement

ಇನ್ನೊಂದು ವೈಯಕ್ತಿಕ ಒಲಿಂಪಿಕ್ಸ್‌ ಚಿನ್ನಕ್ಕೆ ಭಾರತ ಹೆಚ್ಚು ಕಾಯಬೇಕಾಗಿಲ್ಲ: ಬಿಂದ್ರಾ

01:29 AM May 14, 2020 | Sriram |

ಹೊಸದಿಲ್ಲಿ: ಭಾರತದ ಒಲಿಂಪಿಕ್ಸ್‌ ಇತಿಹಾಸದಲ್ಲಿ ವೈಯಕ್ತಿಕ ಚಿನ್ನದ ಪದಕ ಗೆದ್ದಿರುವ ಏಕೈಕ ಕ್ರೀಡಾಪಟು ಎಂಬ ಹೆಗ್ಗಳಿಕೆ ಲೆಜೆಂಡ್ರಿ ಶೂಟರ್‌ ಅಭಿನವ್‌ ಬಿಂದ್ರಾ ಅವರಿಗೆ ಸಲ್ಲುತ್ತದೆ. ಆದರೆ ಭಾರತ ಈ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಇನ್ನೊಂದು ವೈಯಕ್ತಿಕ ಬಂಗಾರ ಗೆಲ್ಲುವ ದಿನಗಳು ದೂರವಿಲ್ಲ ಎಂಬುದಾಗಿ ಅವರು ಅಭಿಪ್ರಾಯಪಡುತ್ತಾರೆ.

Advertisement

“ನಾನು ಈ ವರ್ಷದ ಜುಲೈ-ಆಗಸ್ಟ್‌ ತಿಂಗಳನ್ನು ಬಹಳ ಕಾತರದಿಂದ ಕಾಯುತ್ತಿದ್ದೆ. ಕಾರಣ, ಟೋಕಿಯೊ ಒಲಿಂಪಿಕ್ಸ್‌. ನಾನು ಈ ಮಹೋನ್ನತ ಕ್ರೀಡಾಕೂಟದಲ್ಲಿ ವೈಯಕ್ತಿಕ ಸ್ವರ್ಣ ಪದಕ ಗೆದ್ದ ಭಾರತದ ಏಕೈಕ ಕ್ರೀಡಾಪಟುವಾಗಿ ಉಳಿಯಬಾರದು, ಇನ್ನೊಂದು ಬಂಗಾರದ ಸಾಧನೆಗೆ ವೇದಿಕೆ ನಿರ್ಮಾಣಗೊಂಡಿದೆ ಎಂಬುದು ನನ್ನ ಲೆಕ್ಕಾಚಾರವಾಗಿತ್ತು. ಇದಕ್ಕೀಗ ಮುಂದಿನ ವರ್ಷದ ಜುಲೈ ತನಕ ಕಾಯಬೇಕಾಗಿದೆ’ ಎಂದು 2008ರ ಬೀಜಿಂಗ್‌ ಒಲಿಂಪಿಕ್ಸ್‌ ಶೂಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದ ಅಭಿನವ್‌ ಬಿಂದ್ರಾ ಹೇಳಿದರು.

“ಭಾರತದಲ್ಲಿ ಈಗ ವಿವಿಧ ಕ್ರೀಡೆಗಳಲ್ಲಿ ಬಹಳಷ್ಟು ಮಂದಿ ಪ್ರತಿಭಾನ್ವಿತರಿದ್ದಾರೆ. ಇವರಿಗೆ ಸೂಕ್ತ ತರಬೇತಿ, ಮಾರ್ಗದರ್ಶನ ಲಭಿಸಿದರೆ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಪದಕ ಗೆಲ್ಲುವುದು ಅಸಾಧ್ಯವಲ್ಲ. ಕೂಟವೀಗ ಒಂದು ವರ್ಷ ಮುಂದೂಡಲ್ಪಟ್ಟ ಕಾರಣ ಇವರಿಗೆ ಇನ್ನಷ್ಟು ಕಾಲಾವಕಾಶ ಸಿಕ್ಕಿದೆ. ಇದರಿಂದ ಟೋಕಿಯೊದಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯ’ ಎಂದು ಸೋನಿ ಟೆನ್‌ ಚಾನೆಲ್‌ ಏರ್ಪಡಿಸಿದ “ದಿ ಮೆಡಲ್‌ ಆಫ್‌ ಗ್ಲೋರಿ’ ಕಾರ್ಯಕ್ರಮದಲ್ಲಿ ಆಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next