Advertisement

ಮಹಿಳಾ ವಿಶ್ವಕಪ್: ಬಂಗ್ಲಾ ಎದುರು ಭರ್ಜರಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

04:55 PM Mar 21, 2022 | Team Udayavani |

ಹ್ಯಾಮಿಲ್ಟನ್ : ಐಸಿಸಿ ಮಹಿಳಾ ವಿಶ್ವ ಕಪ್ ನಲ್ಲಿ ಮಂಗಳವಾರ ಭಾರತ ತಂಡ ಬಾಂಗ್ಲಾದೇಶ ದ್ ವಿರುದ್ಧ ನಿರ್ಣಾಯಕ ಮಹತ್ವದ ಪಂದ್ಯವನ್ನು ಆಡಲಿದೆ.

Advertisement

ಭಾರತದ ವನಿತೆಯರು ಈಗಾಗಲೇ ಆಡಿದ 5 ಪಂದ್ಯಗಳಲ್ಲಿ2 ಗೆಲುವು ಸಾಧಿಸಿ 3 ಪಂದ್ಯಗಳಲ್ಲಿ ಸೋತಿದ್ದು, 4 ಅಂಕಗಳೊಂದಿಗೆ +0.456 ರನ್ ರೇಟ್ ಹೊಂದಿ ಅಂಕ ಪಟ್ಟಿಯಲ್ಲಿ 4 ನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಆಡಿದ ಎಲ್ಲಾ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಈಗಾಗಲೇ ಸೆಮಿ ಫೈನಲ್ ಗೆ ಸ್ಥಾನ ಭದ್ರ ಪಡಿಸಿ ಕೊಂಡಿದೆ.

ಬಾಂಗ್ಲಾದೇಶ ಅಷ್ಟೊಂದು ಪ್ರಬಲ ತಂಡವಲ್ಲವೆಂದು ಪರಿಗಣಿಸಬಹುದಾದರೂ ಸರಣಿಯಲ್ಲಿ ಪಾಕ್ ತಂಡಕ್ಕೆ ಅನಿರೀಕ್ಷಿತ ಸೋಲು ನೀಡಿ ಶಾಕ್ ಕೊಟ್ಟಿತ್ತು.

ನಾಳಿನ ನಿರ್ಣಾಯಕ ಪಂದ್ಯದಲ್ಲಿ ಮಿಥಾಲಿ ರಾಜ್ ಬಳಗ ಭರ್ಜರಿ ಗೆಲುವು ಸಾಧಿಸಲೇ ಬೇಕಾದ ಒತ್ತಡಕ್ಕೆ ಸಿಲುಕಿದ್ದು, ಲೀಗ್ ನ ಕೊನೆಯ ಪಂದ್ಯದಲ್ಲಿ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಪ್ರಬಲ ದಕ್ಷಿಣ ಆಫ್ರಿಕಾವನ್ನು ಎದುರಿಸಬೇಕಾಗಿದೆ.

ನಾಳೆ ಇನ್ನೊಂದೆಡೆ, ಪಂದ್ಯಾವಳಿಯಲ್ಲಿ ಸೋಲೇ ಕಂಡಿರದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವನಿತೆಯರು ಸೆಣಸಲಿದ್ದಾರೆ.

Advertisement

ಸೋಮವಾರ ನಡೆದ ಪಂದ್ಯದಲ್ಲಿ ಪಾಕಿಸ್ಥಾನ ಮಳೆಯಿಂದ ಹೊಡೆತಕ್ಕೊಳಗಾದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಅನ್ನು 8 ವಿಕೆಟ್‌ಗಳಿಂದ ಸೋಲಿಸಿ ಮೊದಲ ಜಯ ದಾಖಲಿಸಿತು. ಮಳೆಯಿಂದಾಗಿ ಪಂದ್ಯವನ್ನು ಪ್ರತಿ ತಂಡಕ್ಕೆ 20 ಓವರ್‌ಗಳಿಗೆ ಇಳಿಸಲಾಗಿತ್ತು.

ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಕೇವಲ 89 ರನ್ ಗಳಿಸಿದರೆ, ಗುರಿ ಬೆನ್ನಟ್ಟಿದ ಪಾಕ್18.5 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 90 ರನ್ ಗಳಿಸಿ ಗೆಲುವಿನ ನಗೆ ಬೀರಿತು.

Advertisement

Udayavani is now on Telegram. Click here to join our channel and stay updated with the latest news.

Next