Advertisement

ಶೀಘ್ರವೇ ಪ್ರತಿಪಕ್ಷಗಳು ಒಂದಾಗಲಿವೆ

06:00 AM Jun 12, 2018 | Team Udayavani |

ನವದೆಹಲಿ: “ದೇಶವನ್ನು ಬೆರಳೆಣಿಕೆಯ ಬಿಜೆಪಿ-ಆರೆಸ್ಸೆಸ್‌ ನಾಯಕರು ಆಳುತ್ತಿದ್ದಾರೆ. ನೋಡ್ತಾ ಇರಿ, ಇನ್ನು 6 ತಿಂಗಳಿಂದ ಒಂದು ವರ್ಷದೊಳಗೆ ಎಲ್ಲ ಪ್ರತಿಪಕ್ಷಗಳೂ ಒಂದಾಗಿ, ದೇಶವನ್ನು ಜನರು ಆಳಬೇಕೇ ಹೊರತು ಮೂವರು ವ್ಯಕ್ತಿಗಳಲ್ಲ ಎಂಬುದನ್ನು ಸಾಬೀತುಪಡಿಸಲಿವೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ. 2019ರ ಲೋಕಸಭೆ ಚುನಾವಣೆಗೆ ತೃತೀಯ ರಂಗ ಸೃಷ್ಟಿಯಾಗಲಿದೆಯೇ, ಪ್ರತಿಪಕ್ಷಗಳು ಕೈಜೋಡಿಸಲಿವೆಯೇ ಎಂಬೆಲ್ಲ ಊಹಾಪೋಹಗಳ ನಡುವೆಯೇ ರಾಹುಲ್‌ರಿಂದ ಇಂಥ ಮಾತುಗಳು ಹೊರಬಿದ್ದಿವೆ.

Advertisement

ಸೋಮವಾರ ಪಕ್ಷದ ಒಬಿಸಿ ಸಮ್ಮೇಳನದಲ್ಲಿ ಮಾತನಾಡಿದ ಅವರು, “ಪ್ರತಿಪಕ್ಷಗಳೆಲ್ಲ ಸದ್ಯದಲ್ಲೇ ಒಗ್ಗಟ್ಟಾಗ ಲಿದ್ದು, ಆಗ ಪ್ರಧಾನಿ ಮೋದಿ, ಅಮಿತ್‌ ಶಾ ಹಾಗೂ ಮೋಹನ್‌ ಭಾಗವತ್‌ ಅವರು ಭಾರತದ ಶಕ್ತಿಯನ್ನು ಅರಿಯಲಿದ್ದಾರೆ’ ಎಂದು ಹೇಳಿದರು.

ಕೋಕಾಕೋಲಾ ಕಂಪನಿ ಸಂಸ್ಥಾಪಕ ನಿಂಬು ಸೋಡಾ ಮಾರುತ್ತಿದ್ದ!
ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಹಿಂದುಳಿದ ವರ್ಗಗಳ ಪ್ರತಿಭಾವಂತರನ್ನು ನಿರ್ಲಕ್ಷಿಸಿದೆ, ಅವರನ್ನು ಉದ್ಯಮಶೀಲರನ್ನಾಗಿಸುವಲ್ಲಿ ವಿಫ‌ಲವಾಗಿದೆ ಎಂದು ಆರೋಪಿಸುವ ವೇಳೆ ರಾಹುಲ್‌ ನೀಡಿರುವ ಕೆಲವು ಹೇಳಿಕೆಗಳು ಇದೀಗ ನಗೆಪಾಟಲಿಗೀಡಾಗಿವೆ. 

“ಕೋಕಾ-ಕೋಲಾ ಮಾಲೀಕ ಆ ಕಂಪನಿ ಸ್ಥಾಪಿಸುವ ಮೊದಲು ನಿಂಬು ಸೋಡಾ ಮಾರಾಟ ಮಾಡುತ್ತಿದ್ದರು. ಮೆಕ್‌ಡೊನಾಲ್ಡ್‌ ಮಾಲೀಕ ಢಾಬಾ ನಡೆಸುತ್ತಿದ್ದರು, ಫೋರ್ಡ್‌, ಮರ್ಸಿಡಿಸ್‌, ಹೋಂಡಾ ಕಂಪನಿ ಮಾಲೀಕರು ಒಂದು ಕಾಲದಲ್ಲಿ ಮೆಕ್ಯಾನಿಕ್‌ಗಳಾಗಿದ್ದರು’ ಎಂದು ರಾಹುಲ್‌ ಹೇಳಿದ್ದಾರೆ. ಈ ಹೇಳಿಕೆ ಹೊರಬಿದ್ದ ಸ್ವಲ್ಪ ಹೊತ್ತಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಮೀಮ್‌ಗಳು, ಜೋಕ್‌ಗಳು ಸೃಷ್ಟಿಯಾದವು. ಆ್ಯಪ ಲ್‌ ಕಂಪನಿ ಸಹ ಸಂಸ್ಥಾ ಪಕ ಸ್ಟೀವ್‌ ಜಾಬ್ಸ್ ಆ್ಯಪಲ್‌ ಮಾರುತ್ತಿದ್ದರು. ಟೆಸ್ಲಾ ಕಾರ್‌ ಮಾಲೀಕ ಮಸ್ಕ್ ಕಬೂìಜ ಮಾರುತ್ತಿದ್ದರು, ಬಿಲ್‌ ಗೇಟ್ಸ್‌ ಬಿಲ್ಲಿಂಗ್‌ ಮಷೀನ್‌ ಮಾರುತ್ತಿದ್ದರು. ಮೈಕ್ರೋಸಾಫ್ಟ್ನವರು ವಿಂಡೋಸ್‌  ಮೊದಲು ಡೋರ್‌ ತಯಾರಿಸುತ್ತಿದ್ದರು ಎಂದೆಲ್ಲ ವ್ಯಂಗ್ಯವಾಡಲಾಗಿದೆ.

ನಾವೆಲ್ಲರೂ ಒಂದಾಗಿ ಕೆಲಸ ಮಾಡುತ್ತಿದ್ದೇವೆ. ಚುನಾವಣೆ ಸಮೀಪಿಸಿದಾಗ ಸೀಟು ಹಂಚಿಕೆ ವಿಚಾರ ಚರ್ಚಿಸಿ, ನಿರ್ಧಾರ ಕೈಗೊಳ್ಳುತ್ತೇವೆ. ಎನ್‌ಡಿಎಯಲ್ಲಿ ಯಾವುದೇ ಒಡಕಿಲ್ಲ.
ನಿತೀಶ್‌ ಕುಮಾರ್‌, ಬಿಹಾರ ಸಿಎಂ

Advertisement

2019ರ ಲೋಕಸಭೆ ಚುನಾವಣೆಯಲ್ಲೂ ಬಿಎಸ್‌ಪಿ ಜತೆಗಿನ ಮೈತ್ರಿ ಮುಂದು ವರಿಯುತ್ತದೆ. ಅಗತ್ಯಬಿದ್ದರೆ, ಕೆಲವು ಸೀಟುಗಳನ್ನು ತ್ಯಾಗ ಮಾಡಲೂ ನಾವು ಸಿದ್ಧ. 
ಅಖೀಲೇಶ್‌ ಯಾದವ್‌, ಉ.ಪ್ರದೇಶ ಮಾಜಿ ಸಿಎಂ

ಪ್ರತಿಪಕ್ಷಗಳು ಇಲ್ಲದಿದ್ದರೆ ಪ್ರಜಾಪ್ರಭುತ್ವಕ್ಕೆ ಬೆಲೆಯಿಲ್ಲ. ನಮ್ಮ ಪಕ್ಷದ ಸ್ಲೋಗನ್‌, “ಕಾಂಗ್ರೆಸ್‌ ಮುಕ್ತ ಭಾರತ’ವಲ್ಲ, ಬದಲಿಗೆ “ಕಾಂಗ್ರೆಸ್‌ನ ಸಂಸ್ಕೃತಿ ಮುಕ್ತ ಭಾರತ’
ಅಮಿತ್‌ ಶಾ,  ಬಿಜೆಪಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next