ನವದೆಹಲಿ : ಪಾಕಿಸ್ತಾನ ಹಾಗೂ ಚೀನಾಕ್ಕೆ ಸನಿಹವಾಗಿ ರುವ ಲಡಾಖ್‌ಗೆ ತ್ವರಿತವಾಗಿ ಸೇನೆ ಹಾಗೂ ಸೇನಾ ಸರಂಜಾಮುಗಳನ್ನು ಸಾಗಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಹಿಮಾಚಲ ಪ್ರದೇಶದ ಮನಾಲಿಯಿಂದ ಲಡಾಖ್‌ವರೆಗೆ ಹೆದ್ದಾರಿಯೊಂದನ್ನು ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅಲ್ಲದೆ, ದುರ್ಗಮ ಪ್ರದೇಶಗಳಿಂದ ಸಾಗುವ ಈ ರಸ್ತೆಯಲ್ಲಿ ಸಂಚರಿಸುವ ಯಾವುದೇ ಸೇನಾ ವಾಹನದ ಪರಿವೀಕ್ಷಣೆ ನಡೆಸಲು ಪಾಕಿಸ್ತಾನಕ್ಕೆ ಅಥವಾ ಚೀನಾಕ್ಕೆ ಸಾಧ್ಯವಾಗುವುದಿಲ್ಲ.
ಸದ್ಯಕ್ಕೆ ಮನಾಲಿಯಿಂದ ಲಡಾಖ್ ಅನ್ನು ಸಂಪರ್ಕಿಸಲು ಈಗಾಗಲೇ ಎರಡು ರಸ್ತೆಗಳಿದ್ದು, ಹೊಸ ರಸ್ತೆ ಅವೆರಡೂ ಸ್ಥಳಗಳನ್ನು ಬೆಸೆಯುವ ಮೂರನೇ ಸಂಪರ್ಕವಾಗಲಿದೆ. ಹೊಸ ರಸ್ತೆಯು ನಿಮು-ಪದಮ್ -ದಾರ್ಚಾ ಮಾರ್ಗವಾಗಿ ಸಾಗುತ್ತದೆ. ಮೊದಲಿಗೆ ಮನಾಲಿಯಿಂದ ಲೇಹ್‌ವರೆಗೆ ತಲುಪಿ ಅಲ್ಲಿಂದ ಲಡಾಖ್ ಅನ್ನು ಬೆಸೆಯುತ್ತದೆ. ಈಗ ಮನಾಲಿಯಿಂದ ಲಡಾಖ್‌ಗೆ ಹೋಗಲು ಹಿಮಾಚಲ ಪ್ರದೇಶದ ಸರ್ಚುವಿನ ಮೂಲಕ ಅಥವಾ ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಮೂಲಕ ಸಾಗಬೇಕಿದೆ.
ಈ ಎರಡೂ ರಸ್ತೆಗಳು ತುಂಬಾ ದೂರ ಹಾಗೂ ಪಾಕಿಸ್ತಾನ, ಚೀನಾ ಸೇನೆಗಳಿಂದ ಪರಿವೀಕ್ಷಣೆಗೊಳ ಪಡಬಹುದಾದ ರಸ್ತೆಗಳು. ಆದರೆ, ಹೊಸ ಮಾರ್ಗದಿಂದ 3ರಿಂದ 4 ಗಂಟೆಗಳ ಸಮಯ ಉಳಿತಾಯವಾಗುತ್ತದಲ್ಲದೆ, ಇಲ್ಲಿ ಓಡಾಡುವ ಸೇನಾ ವಾಹನಗಳ ಮೇಲೆ ದೃಷ್ಟಿ ನೆಡಲು ನೆರೆ ಷ್ಟ್ರಗಳಿಗೆ ಅಸಾಧ್ಯವಾಗಲಿದೆ ಎಂದು ಮೂಲಗಳು ವಿವರಿಸಿವೆ.
ಚೀನಾ ಸವಾಲಿಗೆ ನೌಕಾಪಡೆ ಸನ್ನದ್ಧ: ರಾಜನಾಥ್ ಸಿಂಗ್
ಭಾರತದ ಕರಾವಳಿಯ ಮೇಲೆ ಚೀನಾದಿಂದ ಯಾವುದೇ ಸಂದರ್ಭದಲ್ಲಿ ಒದಗಬಹುದಾದ ದಾಳಿಗಳು ಹಾಗೂ ಇನ್ನಿತರ ಭದ್ರತಾ ಸವಾಲುಗಳನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ನೌಕಾಪಡೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳು ಸಮಾಧಾನಕರವಾಗಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ನೌಕಾಪಡೆಯ ಕಮಾಂಡರ್‌ಗಳಿಗಾಗಿ ಆಯೋಜಿಸಲಾಗಿರುವ ಮೂರು ದಿನಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು “ದೇಶದ ಸಾಗರ ತೀರಗಳನ್ನು ರಕ್ಷಿಸುವಲ್ಲಿ ನೌಕಾಪಡೆ ಸ್ಮರಣೀಯ ಸೇವೆ ಯನ್ನು ನೀಡಿದೆ.
ಅದಕ್ಕಾಗಿ ದೇಶ ಬಾಂಧವ್ಯರು ನೌಕಾಪಡೆಗೆ ಚಿರಋಣಿಯಾಗಿದ್ದಾರೆ. ಸಾಗರ ತೀರಗಳಲ್ಲಿ ತನ್ನ ನೌಕೆಗಳನ್ನು, ಸಮರ ವಿಮಾನಗಳನ್ನು ನಿಯೋಜಿಸಿ, ಚೀನಾದಿಂದ ಯಾವುದೇ ಕ್ಷಣದಲ್ಲಿ ಎದುರಾಗ ಬ ಹುದಾದ ಸವಾಲನ್ನು ಎದುರಿಸಲು ಸನ್ನದ್ಧವಾಗಿರುವ ಕ್ರಮ ಮೆಚ್ಚು ವಂಥದ್ದು’ ಎಂದರು.
ಲಡಾಖ್ ನಲ್ಲಿ ಇತ್ತೀಚೆಗೆ ಭಾರತ-ಚೀನಾ ಸೈನಿಕರು ಮುಖಾಮುಖಿಯಾಗಿದ ನಂತರ, ಎರಡೂ ದೇಶಗಳ ನಡುವೆ ಉಲ್ಪಣಿಸಿರುವ ಬಿಗುವಿನ ವಾತಾವರಣದ ಹಿನ್ನೆಲೆಯಲ್ಲಿ ಭಾರತೀಯ ನೌಕಾಪಡೆ, ಚೀನಾಕ್ಕೆ ಹತ್ತಿರವಿರುವ ಭಾರತೀಯ ಕರಾವಳಿಯಲ್ಲಿ ತನ್ನ ಯುದ್ಧ ನೌಕೆಗಳನ್ನು, ಕಾವಲು ನೌಕೆಗಳನ್ನು ಸನ್ನದ್ಧವಾಗಿಸಿಕೊಂಡು ಕಟ್ಟುನಿಟ್ಟಾಗಿ ಕಾಯುತ್ತಿದೆ.