– ಪಿಒಕೆಯಲ್ಲಿ ಚೀನ ಕಾಮಗಾರಿಯಿಂದ ಬೇಸರ
Advertisement
ಬೀಜಿಂಗ್: ಚೀನದ ಮಹತ್ವಾಕಾಂಕ್ಷಿ ಯೋಜನೆ, ಪ್ರಾಚೀನ ವ್ಯಾಪಾರ ಮಾರ್ಗ ಸುಧಾರಣೆಯ “ಒನ್ ಬೆಲ್ಟ್ ಒನ್ ರೋಡ್’ ಯೋಜನೆ ಕುರಿತ ಅಂತಾರಾಷ್ಟ್ರೀಯ ಸಭೆ ರವಿವಾರದಿಂದ ಆರಂಭವಾಗಲಿದೆ.
Related Articles
Advertisement
– ಎಷ್ಟು ದೇಶಗಳು ಭಾಗಿಯಾಗುತ್ತವೆ?ಚೀನದ ಪ್ರಕಾರ ಈ ಯೋಜನೆಯಲ್ಲಿ ಭಾರತವೂ ಸೇರಿದಂತೆ ಸುಮಾರು 68 ದೇಶಗಳು ಭಾಗಿಯಾಗುತ್ತವೆ. ಆದರೆ ಭಾಗವಹಿಸುತ್ತಿರುವ ಬಹುತೇಕ ದೇಶಗಳು ಪ್ರತಿನಿಧಿಗಳನ್ನು ಕಳುಹಿಸಿದ್ದರೆ ಪಾಕಿಸ್ಥಾನದಿಂದ ಮಾತ್ರ ಸ್ವತಃ ಪ್ರಧಾನಿಯೇ ತೆರಳಿದ್ದಾರೆ. ಅದೂ ನಾಲ್ವರು ಮುಖ್ಯಮಂತ್ರಿಗಳುಳ್ಳ ನಿಯೋಗವು ಚೀನಗೆ ತೆರಳಿದೆ. – ಯಾರಿಗೆ ಹೆಚ್ಚು ಪ್ರಯೋಜನ? ಚೀನಕ್ಕೋ ಬೇರೆ ದೇಶಗಳಿಗೋ?
ಪರಿಣಿತರ ಪ್ರಕಾರ ಚೀನ ತನ್ನ ಕೈಗಾರಿಕೆಗಳು, ರಫ¤ನ್ನು ಜಗತ್ತಿನಾದ್ಯಂತ ವಿಸ್ತರಿಸಲು ಮಾಡಿದ ಒಂದು ಐಡಿಯಾ ಎನ್ನಲಾಗುತ್ತಿದೆ. ಮತ್ತೂಂದೆಧಿಡೆಯಲ್ಲಿ ಒಬಿಒಆರ್‌ನಿಂದ ದೇಶ ದೇಶಗಳ ನಡುವೆ ಮತ್ತಷ್ಟು ಸಂಪರ್ಕ ಏರ್ಪಡಲಿದ್ದು, ಒಪ್ಪಂದದಲ್ಲಿ ಭಾಗಿಯಾಧಿಗುವ ದೇಶಗಳ ಮಧ್ಯೆ ರಸ್ತೆ, ರೈಲು, ಬಂದರು ಸೇರಿದಂತೆ ಮೂಲ ಸೌಕರ್ಯಗಳ ಅಭಿವೃದ್ಧಿ, ಆಮದು-ರಫ್ತು ಹೆಚ್ಚಳಕ್ಕೆ ಕಾರಣವಾಗಲಿದೆ ಎನ್ನಲಾಗಿದೆ. – ಕೇವಲ ಆರ್ಥಿಕಾಭಿವೃದ್ಧಿ ಉದ್ದೇಶವೇ?
ಒಬಿಒಆರ್ ಆರ್ಥಿಕಾಭಿವೃದ್ಧಿಯ ಉದ್ದೇಶದ್ದೂ ಎಂದು ಚೀನ ಹೇಳುತ್ತಿದ್ದರೂ, ಚೀನದ ನರಿ ಬುದ್ಧಿ ಬಗ್ಗೆ ಚೆನ್ನಾಗಿಗೊತ್ತಿರುವ ಭಾರತ, ಜಪಾನ್, ವಿಯೆಟ್ನಾಂ, ಅಮೆರಿಕ ಇತ್ಯಾದಿ ದೇಶಗಳು ಇದನ್ನು ಸಂಪೂರ್ಣವಾಗಿ ಒಪ್ಪಲು ತಯಾರಿಲ್ಲ. ಚೀನ ಈ ಯೋಜನೆ ಮೂಲಕ ಗುಪ್ತ ಮಿಲಿಟರಿ ಅಜೆಂಡಾವನ್ನು ಸ್ಥಾಪಿಸುವ ಸಾಧ್ಯತೆ ಇದೆ. ಒಬಿಒಆರ್ ಯೋಜನೆಯಲ್ಲಿ ಭಾರೀ ಪ್ರಮಾಣದಲ್ಲಿ ಮೂಲಸೌಕರ್ಯ ಅಭಿವೃದ್ಧಿ ನಡೆಯಲಿದ್ದು, ಈ ವೇಳೆ ಚೀನ ಏಷ್ಯಾ, ಆಫ್ರಿಕಾಗಳಲ್ಲಿ ತನ್ನ ಮಿಲಿಟರಿಯನ್ನೂ ಈ ನೆವದಲ್ಲಿ ನಿಯೋಜಿಸುವ ಮೂಲಕ ಇಡೀ ಪ್ರದೇಶದಲ್ಲಿ ತನ್ನ ಆಧಿಪತ್ಯ ಸ್ಥಾಪಿಸಲು ಹವಣಿಸಲಿದೆ ಎಂದು ಶಂಕಿಸಲಾಗಿದೆ. ಅಲ್ಲದೇ ಯೋಜನೆಯಲ್ಲಿ ಭಾಗಿಯಾಗಿ, ಬಳಿಕ ಹಣ ಮರುಪಾವತಿಗೆ ಸಾಧ್ಯವಾಗದೇ ಇದ್ದ ದೇಶಗಳನ್ನು ತನ್ನ ಕೈಯಾಳಾಗಿಸುವ, ಆರ್ಥಿಕ ಗುಲಾಮಗಿರಿಗೆ ನೂಕುವ ಸಾಧ್ಯತೆ ಇದೆ ಎಂದೂ ಹೇಳಲಾಗಿದೆ. ಏನಿದು ಒಬಿಒಆರ್?
ಚೀನ ಅಧ್ಯಕ್ಷ ಕ್ಸಿಜಿಂಗ್‌ಪಿಂಗ್ ಅವರ ಮಹತ್ವಾಕಾಂಕ್ಷಿ ಯೋಜನೆ “ಒನ್ ಬೆಲ್ಟ್ ಒನ್ ರೋಡ್’. ಮಧ್ಯಯುಗ ದಲ್ಲಿ ಏಷ್ಯಾ, ಯುರೋಪ್, ಆಫ್ರಿಕಾ ಭಾಗದಲ್ಲಿ ಅಸ್ತಿತ್ವದಲ್ಲಿದ್ದ ವ್ಯಾಪಾರ ಮಾರ್ಗವನ್ನು ಸುಧಾರಿಸುವುದು, ಜಲ, ನೆಲ ಮಾರ್ಗಗಳ ಮೂಲಕ ಸಂಪರ್ಕ ಸುಧಾರಣೆ, ಆರ್ಥಿಕ ಕಾರಿಡಾರ್‌ಗಳನ್ನು ಸ್ಥಾಪಿಸುವುದು ಇದರ ಉದ್ದೇಶ. ಈ ಯೋಜನೆ ಯಿಂದ 440 ಕೋಟಿ ಜನರಿಗೆ ಪ್ರಯೋಜನವಾಗಲಿದೆ ಎನ್ನಲಾಗಿದೆ. ಈ ಯೋಜನೆಗೆ 64 ಲಕ್ಷ ಕೋಟಿ ರೂ.ಗಳನ್ನು ವಿನಿಯೋಗಿಸುವುದಾಗಿ ಚೀನ ಹೇಳಿದೆ. ಭಾರತ ಯಾಕೆ ಭಾಗಿಯಾಗುತ್ತಿಲ್ಲ?
ಪ್ರಮುಖವಾಗಿ ಒಬಿಒಆರ್ ಯೋಜನೆಯಡಿ ಚೀನ ಈಗಾಗಲೇ ಚೀನ-ಪಾಕ್ ಆರ್ಥಿಕ ಕಾರಿಡಾರ್ (ಸಿಪೆಕ್) ಯೋಜನೆಯನ್ನು ಒಳಗೊಂಡಿದೆ. 3 ಸಾವಿರ ಕಿ.ಮೀ. ವಿಸ್ತಾರದ ಈ ಯೋಜನೆ ಪಾಕ್‌ನ ಗÌದಾರ್ ಬಂದರಿಂದ ಚೀನದ ಕ್ಸಿನ್‌ಜಿಯಾಂಗ್ ಪ್ರಾಂತ್ಯವನ್ನು ಸಂಪರ್ಕಿಸುತ್ತದೆ. ಪಾಕ್ ಆಕ್ರಮಿತ ಕಾಶ್ಮೀರದ ಗಿಲಿYಟ್-ಬಾಲ್ಟಿಸ್ಥಾನ್ ಪ್ರಾಂತ್ಯದಲ್ಲಿ ಯೋಜನೆಯಡಿಯಲ್ಲಿ ಬರುವ ಹೆದ್ದಾರಿ ಹಾದು ಹೋಗುತ್ತದೆ. ಚೀನದಿಂದ ಅರಬ್ಬೀ ಸಮುದ್ರಕ್ಕೆ ನೇರ ದಾರಿ ಇದಾಗಿದೆ. ಚೀನ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಯೋಜನೆ ಮಾಡುವ ಮೂಲಕ ಭಾರತದ ಸಾರ್ವಭೌಮತೆ ಉಲ್ಲಂ ಸಿದೆ ಎಂಬುದು ಭಾರತದ ತಕರಾರು. ಹಿಂದಿನಿಂದಲೂ ಇದಕ್ಕೆ ಭಾರತದ ತೀವ್ರ ಆಕ್ಷೇಪವಿದೆ. ಜೊತೆಗೆ ಪಾಕ್‌ನ ಗÌದಾರ್ ಬಂದರನ್ನು ಚೀನ ತನ್ನ ಹಿಡಿತದಲ್ಲಿ ಇಡುವ ಮೂಲಕ ಈ ಭಾಗದಲ್ಲಿ ಮಿಲಿಟರಿ ಅಧಿಪತ್ಯಕ್ಕೂ ಮುಂದಾಗಿದೆ.