Advertisement

ಭಾರತ ಮೂಲದ ವಿಜ್ಞಾನಿ ವೆಂಕಿಗೆ ಆರ್ಡರ್‌ ಆಫ್ ಮೆರಿಟ್‌ ಗೌರವ

09:32 PM Nov 12, 2022 | Team Udayavani |

ಲಂಡನ್‌: ವಿಜ್ಞಾನ ಕ್ಷೇತ್ರದಲ್ಲಿ ನೀಡಿದ ಅನುಪಮ ಸೇವೆಗಾಗಿ ಭಾರತ ಮೂಲದ ವಿಜ್ಞಾನಿ ವೆಂಕಿ ರಾಮಕೃಷ್ಣನ್‌ ಅವರಿಗೆ ಯುನೈಟೆಡ್‌ ಕಿಂಗ್‌ಡಮ್‌ನ ಪ್ರತಿಷ್ಠಿತ “ಆರ್ಡರ್‌ ಆಫ್ ಮೆರಿಟ್‌’ ಗೌರವವನ್ನು ನೀಡಲಾಗಿದೆ.

Advertisement

ಬ್ರಿಟನ್‌ ರಾಜಮನೆತನದ ರಾಣಿ ಎರಡನೇ ಎಲಿಜಬೆತ್‌ ಅವರು ಸೆಪ್ಟೆಂಬರ್‌ನಲ್ಲಿ ನಿಧನರಾಗುವುದಕ್ಕಿಂತ ಮೊದಲೇ ಈ ಬಗ್ಗೆ ಆದೇಶ ಸಿದ್ಧಪಡಿಸಿ ಇರಿಸಿದ್ದರು. ಅದನ್ನು ಯು.ಕೆ.ಯ ಹಾಲಿ ದೊರೆ ಮೂರನೇ ಚಾರ್ಲ್ಸ್‌ ಅವರು ಬಿಡುಗಡೆಗೊಳಿಸಿದ್ದಾರೆ.

ಸೇನಾಪಡೆ, ವಿಜ್ಞಾನ, ಕಲೆ, ಸಾಹಿತ್ಯ ಅಥವಾ ಸಾಹಿತ್ಯದ ಪ್ರೋತ್ಸಾಹಕ್ಕೆ ಬೆಂಬಲ ನೀಡುವವರಿಗೆ ಈ ಗೌರವ ಪ್ರದಾನ ಮಾಡಲಾಗುತ್ತದೆ.

ತಮಿಳುನಾಡಿನ ಚಿದಂಬರಂನಲ್ಲಿ ಜನಿಸಿದ್ದ ಡಾ. ವೆಂಕಿ ರಾಮಕೃಷ್ಣನ್‌ ಅವರು ಅಮೆರಿಕದಲ್ಲಿ ಜೀವಶಾಸ್ತ್ರದ ಅಧ್ಯಯನ ಮಾಡಿದ್ದರು. 2009ರಲ್ಲಿ ಅವರಿಗೆ ರಸಾಯನಶಾಸ್ತ್ರದಲ್ಲಿ ನಡೆಸಿದ್ದ ಸಂಶೋಧನೆಗಾಗಿ ನೊಬೆಲ್‌ ಗೌರವ ಲಭಿಸಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next